ETV Bharat / sports

ಐಪಿಎಲ್​ಗೆ ಆತನ ಆಗಮನ ನಿರೀಕ್ಷಿತ, ಆರ್​ಸಿಬಿ ಅದ್ಭುತ ಆಯ್ಕೆ ಮಾಡಿದೆ : ಆಕಾಶ್ ಚೋಪ್ರಾ

ಡೇನಿಯಲ್​ ಸ್ಯಾಮ್ಸ್​ ಬದಲಿಗೆ ತಂಡಕ್ಕೆ ಸೇರಿಕೊಂಡಿರುವ ಟಿಮ್​ ಡೇವಿಡ್ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವ ಚೋಪ್ರಾ, ಆತ ವಿಶ್ವದ ಹಲವು ಟಿ20 ಲೀಗ್​ಗಳಲ್ಲಿ ಆಡಿದ್ದಾರೆ. ಅತ್ಯುತ್ತಮ ಸ್ಟ್ರೈಕ್​ ರೇಟ್​ ಕಾಪಾಡಿಕೊಂಡಿದ್ದಾರೆ. ಟಿ20 ಕ್ರಿಕೆಟ್​​ಗೆ ಆತ ತಕ್ಕನಾಗಿ ಆಡುತ್ತಾರೆ ಎಂದು ಹೇಳಿದ್ದಾರೆ..

ವನಿಂದು ಹಸರಂಗ
ವನಿಂದು ಹಸರಂಗ
author img

By

Published : Aug 22, 2021, 6:55 PM IST

Updated : Aug 22, 2021, 8:38 PM IST

ಮುಂಬೈ : ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಶ್ರೀಲಂಕಾದ ಸ್ಪಿನ್​ ಆಲ್​ರೌಂಡರ್​ ವನಿಂದು ಹಸರಂಗ ಅವರನ್ನು 2021ರ 2ನೇ ಹಂತದ ಐಪಿಎಲ್​ಗೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಮಾಜಿ ಆರಂಭಿಕ ಬ್ಯಾಟ್ಸ್​ಮನ್ ಆಕಾಶ್​ ಚೋಪ್ರಾ ಬೆಂಗಳೂರು ಫ್ರಾಂಚೈಸಿ ಅಸಾಧಾರಣ ಆಟಗಾರನನ್ನು ಆಯ್ಕೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ಶನಿವಾರ ತಮ್ಮ ಬದಲಿ ಆಟಗಾರರ ಆಯ್ಕೆಯನ್ನು ತಿಳಿಸಿತ್ತು. ಇದರಲ್ಲಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಬದಲಿಗೆ ಶ್ರೀಲಂಕಾದ ಹಸರಂಗ, ಡೇನಿಯಲ್ ಸ್ಯಾಮ್ಸ್ ಬದಲಿಗೆ ಮತ್ತೊಬ್ಬ ಶ್ರೀಲಂಕಾ ವೇಗಿ ದುಷ್ಮಂತ ಚಮೀರಾ ಮತ್ತು ಕಿವೀಸ್​ ಆರಂಭಿಕ ಫಿನ್ ಅಲೆನ್ ಬದಲಿಗೆ ಸಿಂಗಾಪುರ್​ನ ಟಿಮ್ ಡೇವಿಡ್​ರನ್ನು ಆಯ್ಕೆ ಮಾಡಿರುವುದಾಗಿ ಸಾಮಾಜಿಕ ಜಾಲಾತಾಣದಲ್ಲಿ ಪ್ರಕಟಿಸಿತ್ತು. ಆಕಾಶ್ ಚೋಪ್ರಾ ಈ ಮೂವರ ಆಯ್ಕೆಯಲ್ಲಿ ವನಿಂದು ಹಸರಂಗ ಆರ್​​ಸಿಬಿಯ ಮಾಡಿದ ಅದ್ಭುತ ಆಯ್ಕೆ ಎಂದಿದ್ದಾರೆ.

ಆ್ಯಡಂ ಜಂಪಾ ಅಲ್ಲಿ ಇಲ್ಲ, ಆದ್ದರಿಂದ ಅವರು ಬದಲಿ ಆಟಗಾರನಾಗಿ ಹಸರಂಗರನ್ನು ಸೇರಿಸಿಕೊಂಡಿದೆ. ಹಸರಂಗ ಅವರ ಲಭ್ಯತೆಯ ಬಗ್ಗೆ ಅನುಮಾನವಿದ್ದ ಕಾರಣ ಅವರನ್ನು ಹರಾಜು ಪ್ರಕ್ರಿಯೆಯಲ್ಲಿ ಯಾರೂ ಖರೀದಿಸಿರಲಿಲ್ಲ.

ಆದರೆ, ಪ್ರಸ್ತುತ ಆತನನ್ನು ಯಾರಾದರೂ ಆಯ್ಕೆಗೆ ಪರಿಗಣಿಸುತ್ತಾರೆ ಎನ್ನುವುದು ಖಚಿತವಾಗಿತ್ತು. ಯಾಕೆಂದರೆ, ಆತ ಇತ್ತೀಚೆಗೆ ಆಡಿದ ಟಿ20 ಕ್ರಿಕೆಟ್​ನಲ್ಲೆಲ್ಲಾ ಅದ್ಭುತ ಪ್ರದರ್ಶನ ತೋರಿದ್ದಾರೆ. ಭಾರತದ ವಿರುದ್ಧ ಕೂಡ ಎಂದು ಚೋಪ್ರಾ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿದ್ದಾರೆ.

ಅವರು ಶ್ರೀಲಂಕಾ ತಂಡದಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ತಮ್ಮ ರಾಷ್ಟ್ರಕ್ಕಾಗಿ ಆಡಿರುವ ಪ್ರತಿ ಪಂದ್ಯದಲ್ಲೂ ಕೊಡುಗೆ ನೀಡಿದ್ದಾರೆ. ಹಾಗಾಗಿ, ಆರ್​ಸಿಬಿಗೆ ಹಸರಂಗ ಅದ್ಭುತ ಸೇರ್ಪಡೆ ಎಂದು ನಾನು ಭಾವಿಸುತ್ತೇನೆ. ಅವರು ಚಹಾಲ್​ ಜೊತೆಗೆ ಸೇರಿ ಬೌಲಿಂಗ್ ಮಾಡಬಹುದು ಎಂದು ತಿಳಿಸಿದ್ದಾರೆ.

ಡೇನಿಯಲ್​ ಸ್ಯಾಮ್ಸ್​ ಬದಲಿಗೆ ತಂಡಕ್ಕೆ ಸೇರಿಕೊಂಡಿರುವ ಟಿಮ್​ ಡೇವಿಡ್ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವ ಚೋಪ್ರಾ, ಆತ ವಿಶ್ವದ ಹಲವು ಟಿ20 ಲೀಗ್​ಗಳಲ್ಲಿ ಆಡಿದ್ದಾರೆ. ಅತ್ಯುತ್ತಮ ಸ್ಟ್ರೈಕ್​ ರೇಟ್​ ಕಾಪಾಡಿಕೊಂಡಿದ್ದಾರೆ. ಟಿ20 ಕ್ರಿಕೆಟ್​​ಗೆ ಆತ ತಕ್ಕನಾಗಿ ಆಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ:3ನೇ ಟೆಸ್ಟ್​ನಲ್ಲಿ ಪೂಜಾರ ಅಥವಾ ರಹಾನೆ ಬದಲಿಗೆ ಸೂರ್ಯಕುಮಾರ್​ ಆಡಬೇಕು : ಫಾರೂಕ್​ ಇಂಜಿನಿಯರ್​

Last Updated : Aug 22, 2021, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.