ದುಬೈ : ಅರಬ್ ನಾಡಿನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ. ನಟರಾಜನ್ಗೆ ಕೊರೊನಾ ಸೋಂಕು ಕಾಣಿಸಿದೆ. ಈಗಾಗಲೇ ಅವರು ಕ್ವಾರಂಟೈನ್ಗೊಳಗಾಗಿದ್ದಾರೆ. ಇದೀಗ ತಂಡ ಬದಲಿ ಆಟಗಾರನಿಗೆ ಮಣೆ ಹಾಕಿದೆ.
ಅನ್ಕ್ಯಾಪ್ಡ್, ಮಧ್ಯಮ ವೇಗಿ ಉಮ್ರಾನ್ ಮಲಿಕ್ಗೆ ಹೈದರಾಬಾದ್ ತಂಡ ಮಣೆ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ. 21 ವರ್ಷದ ಮಲಿಕ್ ಈಗಾಗಲೇ ಲಿಸ್ಟ್ A ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಪರ ಏಕೈಕ ಟಿ-20 ಪಂದ್ಯವನ್ನಾಡಿ 4 ವಿಕೆಟ್ ಪಡೆದಿದ್ದಾರೆ. ಈಗಾಗಲೇ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ನೆಟ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
-
Squad Update: Umran Malik, a fast bowler from Jammu & Kashmir, who was with the #Risers as a net bowler, has been added to the squad as a short-term COVID replacement for T Natarajan. #OrangeArmy #OrangeOrNothing #IPL2021 pic.twitter.com/0erUIJLPgg
— SunRisers Hyderabad (@SunRisers) September 24, 2021 " class="align-text-top noRightClick twitterSection" data="
">Squad Update: Umran Malik, a fast bowler from Jammu & Kashmir, who was with the #Risers as a net bowler, has been added to the squad as a short-term COVID replacement for T Natarajan. #OrangeArmy #OrangeOrNothing #IPL2021 pic.twitter.com/0erUIJLPgg
— SunRisers Hyderabad (@SunRisers) September 24, 2021Squad Update: Umran Malik, a fast bowler from Jammu & Kashmir, who was with the #Risers as a net bowler, has been added to the squad as a short-term COVID replacement for T Natarajan. #OrangeArmy #OrangeOrNothing #IPL2021 pic.twitter.com/0erUIJLPgg
— SunRisers Hyderabad (@SunRisers) September 24, 2021
ಇದನ್ನೂ ಓದಿರಿ: ಬ್ಯಾಟಿಂಗ್‌ನಲ್ಲಿ ಕೆಕೆಆರ್ ವೆಂಕಿ ಬೆಂಕಿ: ಇರ್ಫಾನ್, ಹೇಡನ್ ಹೇಳಿದ್ದೇನು?
ಡೆಲ್ಲಿ ತಂಡದ ವಿರುದ್ಧದ ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಟರಾಜನ್ಗೆ ಕೋವಿಡ್ ಕಾಣಿಸಿತ್ತು. ಜೊತೆಗೆ ಇವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆಟಗಾರ ವಿಜಯ್ ಶಂಕರ್ ಸೇರಿದಂತೆ ಇತರೆ ಐವರನ್ನ ಐಸೋಲೇಷನ್ಗೊಳಪಡಿಸಲಾಗಿತ್ತು. ಆದರೆ, ಇವರ ಕೋವಿಡ್ ವರದಿ ನೆಗೆಟಿವ್ ಬಂದಿದೆ.
14ನೇ ಆವೃತ್ತಿ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಆಡಿರುವ 8 ಪಂದ್ಯಗಳ ಪೈಕಿ ಕೇವಲ 1 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಉಳಿದ 7 ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.