ETV Bharat / sports

ಸಚಿನ್​, ವಿರಾಟ್​ ಆಟವನ್ನು ಗಿಲ್​ ಮುಂದುವರೆಸುತ್ತಾರೆ ಎಂದ ಅಭಿಮಾನಿಗಳು: ಇದಕ್ಕೆ ಶುಭಮನ್​ ಪ್ರತಿಕ್ರಿಯೆ ಹೀಗಿದೆ...

ಸಚಿನ್​ ಮತ್ತು ವಿರಾಟ್​ಗೆ ತಮ್ಮನ್ನು ಹೋಲಿಕೆ ಮಾಡುತ್ತಿರುವ ಬಗ್ಗೆ ಶುಭಮನ್​ ಗಿಲ್​ ಮಾತನಾಡಿದ್ದು, ಇಬ್ಬರು ಬ್ಯಾಟರ್​ಗಳು ಒಂದು ಪೀಳಿಗೆಗೆ ಸ್ಪೂರ್ತಿ ಎಂದಿದ್ದಾರೆ.

"Their legacies are immortal": Shubman Gill on being hailed as next big player after Sachin, Virat
ಸಚಿನ್​, ವಿರಾಟ್​ ಆಟವನ್ನು ಗಿಲ್​ ಮುಂದುವರೆಸುತ್ತಾರೆ ಎಂದ ಅಭಿಮಾನಿಗಳು: ಇದಕ್ಕೆ ಶುಭಮನ್​ ಪ್ರತಿಕ್ರಿಯೆ ಇಲ್ಲಿದೆ...
author img

By

Published : May 29, 2023, 8:13 PM IST

ಇಂಡಿಯನ್​ ಪ್ರೀಮಿಯರ್​ ಲೀಗ್​ನ 16ನೇ ಆವೃತ್ತಿಯ ಯಶಸ್ವಿ ಬ್ಯಾಟರ್ ಶುಭಮನ್​ ಗಿಲ್​ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಚಿನ್​ ​ತೆಂಡೂಲ್ಕರ್​ ಮತ್ತು ವಿರಾಟ್​ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಈ ವರ್ಷ ಗಿಲ್​ ಅವರು ಲಯದಲ್ಲಿ ಬ್ಯಾಟ್​ ಬೀಸುತ್ತಿರುವುದು. ಐಪಿಎಲ್​ಗೂ ಮುನ್ನ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಗಿಲ್​ ಶತಕ ಮತ್ತು ದ್ವಿಶತಕ ಗಳಿಸಿ ಉತ್ತಮ ಆರಂಭವನ್ನು ತಂಡಕ್ಕೆ ಕೊಟ್ಟಿದ್ದರು.

16ನೇ ಆವೃತ್ತಿಯಲ್ಲಿ ಶುಭಮನ್​ ಸ್ಟಾರ್​ ಆಟಗಾರರಾಗಿದ್ದಾರೆ. ಅವರು ಈ ಆವೃತ್ತಿಯಲ್ಲಿ ಹೆಚ್ಚು ರನ್​ ಕಲೆಹಾಕಿದ್ದು, ಡು ಪ್ಲೆಸಿಸ್ ಅವರ ಬಳಿ ಇದ್ದ ಆರಂಜ್​ ಕ್ಯಾಪ ಅನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್​ನ ಕಳೆದ ನಾಲ್ಕು ಪಂದ್ಯದಲ್ಲಿ ಮೂರು ಶತಕ ಗಳಿಸಿ ಒಂದೇ ಆವೃತ್ತಿಯಲ್ಲಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್​ ಮತ್ತು ಬಟ್ಲರ್​ ನಾಲ್ಕು ಶತಕ ಸಿಡಿಸಿದ್ದು, ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.

ಲೀಗ್​ ಒಂದರಲ್ಲಿ ಅತಿ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ಗಿಲ್​ ಮೂರನೇ ಸ್ಥಾನದಲ್ಲಿದ್ದಾರೆ. 2016ರ ಐಪಿಎಲ್​ನಲ್ಲಿ ವಿರಾಟ್​ ಸಾವಿರ ರನ್​ಗೆ 27 (973) ರನ್ ಕಡಿಮೆ ಗಳಿಸಿದ್ದು ಇದುವರೆಗಿನ ದಾಖಲೆಯ ರನ್​ ಆಗಿದೆ. ಎರಡನೇ ಸ್ಥಾನದಲ್ಲಿ ಬಟ್ಲರ್​ ಇದ್ದಾರೆ. ಗಿಲ್​ 13 ರನ್​ ಗಳಿಸಿದಲ್ಲಿ ಬಟ್ಲರ್​ನ್ನು ಹಿಂದಿಕ್ಕಲಿದ್ದಾರೆ. ಅದರೆ, ವಿರಾಟ್​ ಅವರನ್ನು ಹಿಮ್ಮೆಟ್ಟಿಸಲು ಗಿಲ್​ ಇಂದು ಮತ್ತೊಂದು ಶತಕ ಮಾಡಬೇಕಿದೆ.

ಜನ ಹೋಲಿಕೆ ಮಾಡುತ್ತಿರುವುದರ ಬಗ್ಗೆ ಮಾತನಾಡಿದ ಶುಭಮನ್​ ಗಿಲ್​,"ಜನರು ಈ ರೀತಿ ಹೋಲಿಕೆ ಮಾಡುವುದು ಅದ್ಭುತವಾಗಿದೆ. ಆದರೆ ಇದನ್ನು ನಾನು ಸ್ಫೂರ್ತಿಯಾಗಿ ತೆಗೆದುಕೋಳ್ಳುತ್ತೇನೆ. ಸಚಿನ್​, ವಿರಾಟ್ ಮತ್ತು ​ರೋಹಿತ್​ ಶರ್ಮಾ ಒಂದು ಪೀಳಿಗೆಗೆ ಸ್ಫೂರ್ತಿ. 1983ರ ವಿಶ್ವಕಪ್, 2011ರ ವಿಶ್ವಕಪ್​ ತಂಡದಲ್ಲಿ ನಾನು ಆಡುತ್ತಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ವಿಷಯ" ಎಂದಿದ್ದಾರೆ.

ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಪರ ಕ್ವಾಲಿಫೈಯರ್ 2 ರಲ್ಲಿ ಗಿಲ್​ ತಮ್ಮ ಬ್ಯಾಟ್​ನಿಂದ ರನ್​ ಹೊಳೆಯನ್ನೇ ಹರಿಸಿದರು ಎನ್ನಬಹುದು. ಕೇವಲ 60 ಎಸೆತಗಳಲ್ಲಿ 129 ರನ್ ಗಳಿಸಿದರು. ಇದು ಅವರ ಐಪಿಎಲ್​ ಮೂರನೇ ಶತಕವಾಗಿತ್ತು. ಇವರ ಶತಕದ ನೆರವಿನಿಂದ ಗುಜರಾತ್​​ 234 ರನ್​ ಬೃಹತ್​ ಗುರಿಯನ್ನು ಮುಂಬೈಗೆ ನೀಡಿತು. ಇದನ್ನು ಬೆನ್ನು ಹತ್ತಿದ್ದ ಎಂಐ 18 ಓವರ್​ ಆಲ್​ಔಟ್​ ಆಗಿ 66 ರನ್​ನಿಂದ ಸೋಲೊಪ್ಪಿಕೊಂಡಿತ್ತು.

23 ವರ್ಷದ ಅವರು 'ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್'ನ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ವಿಶೇಷವಾಗಿ ಪಂಜಾಬಿ ಭಾಷೆಯಲ್ಲಿ ತಮ್ಮ ಡಬ್ಬಿಂಗ್ ಅನುಭವವನ್ನು ಹಂಚಿಕೊಂಡ ಶುಭಮನ್, "ಇದೊಂದು ಅದ್ಭುತ ಅನುಭವವಾಗಿದೆ. ಅಲ್ಲದೆ, ಇದು ಮೊದಲ ಅಧಿಕೃತ ಪಂಜಾಬಿಯಲ್ಲಿ ಬಿಡುಗಡೆಯಾಗಲಿದೆ. ಪಂಜಾಬಿಯಲ್ಲಿ ಸಂಪೂರ್ಣವಾಗಿ ಡಬ್ಬಿಂಗ್​ ಮಾಡಿದ್ದು, ರೋಮಾಂಚನಕಾರಿಯಾಗಿದೆ" ಎಂದಿದ್ದಾರೆ.

ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಇಂಡಿಯಾ ಜೂನ್ 1 ರಂದು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ ಮತ್ತು ಬಂಗಾಳಿ ಭಾಷೆಗಳಲ್ಲಿ 'ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್' ಅನ್ನು ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: IPL 2023 Final: ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದ ಚೆನ್ನೈ ಬೌಲಿಂಗ್​ ಆಯ್ಕೆ, ಮೀಸಲು ದಿನದಲ್ಲಿ ಯಾರಿಗೆ ಗೆಲುವು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.