ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಟೂರ್ನಿಯಲ್ಲಿ ಉಳಿದ ಪಂದ್ಯಗಳಿಂದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹೊರಬಿದ್ದಿದ್ದಾರೆ. ಎಡಗೈ ನೋವಿನ ತೊಂದರೆಗೊಳಗಾಗಿರುವ ಸೂರ್ಯಕುಮಾರ್ ಮುಂದಿನ ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಅಲಭ್ಯರಾಗಲಿದ್ದು, ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.
-
𝗢𝗙𝗙𝗜𝗖𝗜𝗔𝗟 𝗦𝗧𝗔𝗧𝗘𝗠𝗘𝗡𝗧
— Mumbai Indians (@mipaltan) May 9, 2022 " class="align-text-top noRightClick twitterSection" data="
Suryakumar Yadav has sustained a muscle strain on his left fore arm, and has been ruled out for the season. He has been advised rest, in consultation with the BCCI medical team. pic.twitter.com/78TMwPemeJ
">𝗢𝗙𝗙𝗜𝗖𝗜𝗔𝗟 𝗦𝗧𝗔𝗧𝗘𝗠𝗘𝗡𝗧
— Mumbai Indians (@mipaltan) May 9, 2022
Suryakumar Yadav has sustained a muscle strain on his left fore arm, and has been ruled out for the season. He has been advised rest, in consultation with the BCCI medical team. pic.twitter.com/78TMwPemeJ𝗢𝗙𝗙𝗜𝗖𝗜𝗔𝗟 𝗦𝗧𝗔𝗧𝗘𝗠𝗘𝗡𝗧
— Mumbai Indians (@mipaltan) May 9, 2022
Suryakumar Yadav has sustained a muscle strain on his left fore arm, and has been ruled out for the season. He has been advised rest, in consultation with the BCCI medical team. pic.twitter.com/78TMwPemeJ
ಮೇ. 6ರಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಗಾಯಕ್ಕೊಳಗಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮುಂಬೈ ಇಂಡಿಯನ್ಸ್, ಬಿಸಿಸಿಐ ವೈದ್ಯಕೀಯ ತಂಡದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಂಬೈ ಫ್ರಾಂಚೈಸಿ ತಿಳಿಸಿದೆ.
ಇದನ್ನೂ ಓದಿ: ಐಪಿಎಲ್ 2022: ಕೋಲ್ಕತ್ತಾ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ
ಈ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ 8 ಪಂದ್ಯಗಳನ್ನಾಡಿದ್ದು, 303 ರನ್ಗಳಿಕೆ ಮಾಡಿದ್ದಾರೆ. ಜೂನ್ 9ರಿಂದ ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದ್ದು, ಅದಕ್ಕಾಗಿ ಸೂರ್ಯಕುಮಾರ್ ಸಜ್ಜಾಗಲಿದ್ದಾರೆ. ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ ತಾನು ಆಡಿರುವ 10 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಗೆಲುವು ದಾಖಲು ಮಾಡಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.