ದುಬೈ: 14ನೇ ಐಪಿಎಲ್ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಟ್ರೋಫಿ ಜೊತೆಗೆ 20 ಕೋಟಿ ರೂ. ಬಹುಮಾನದ ಚೆಕ್ ಲಭಿಸಿದೆ. ಅಂತೆಯೇ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ 12.5 ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡಿದೆ.
ಈ ವರ್ಷ ಏಪ್ರಿಲ್ 9ರಂದು ಆರಂಭಗೊಂಡಿದ್ದ 14ನೇ ಆವೃತ್ತಿಯ ಟೂರ್ನಿಯು ಕೋವಿಡ್ ಹಿನ್ನೆಲೆಯಲ್ಲಿ ಮೇ 4ರಂದು ಮೊಟಕುಗೊಂಡಿತ್ತು. ಬಳಿಕ ಬಿಸಿಸಿಐ ಮುಂದಿನ ಹಂತದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಿತ್ತು. ಸೆ. 19ರಂದು ಐಪಿಎಲ್-2021 ಪುನಾರಂಭಗೊಂಡಿತ್ತು. ನಿನ್ನೆ ಐಪಿಎಲ್ಗೆ ಅದ್ಧೂರಿ ತೆರೆ ಬಿದ್ದಿದ್ದು, ಹಲವು ಯುವ ಆಟಗಾರರು ಆಕರ್ಷಕ ಆಟದ ಮೂಲಕ ಗಮನ ಸೆಳೆದಿದ್ದಾರೆ.
2021ರ ಐಪಿಎಲ್ನಲ್ಲಿ ಅಮೋಘ ಪ್ರದರ್ಶನದ ಮೂಲಕ ವಿಶೇಷ ಗೌರವಗಳಿಗೆ ಪಾತ್ರರಾದ ಆಟಗಾರರ ಮಾಹಿತಿ ಇಲ್ಲಿದೆ.
- ಋತುವಿನ ಅತ್ಯಮೂಲ್ಯ ಆಟಗಾರ: ಹರ್ಷಲ್ ಪಟೇಲ್ (32 ವಿಕೆಟ್)
- ಆರೆಂಜ್ ಕ್ಯಾಪ್ : ರುತುರಾಜ್ ಗಾಯಕ್ವಾಡ್, 16 ಪಂದ್ಯಗಳಲ್ಲಿ 635 ರನ್ (1 ಶತಕ, 4 ಅರ್ಧಶತಕಗಳು)
- ಪರ್ಪಲ್ ಕ್ಯಾಪ್ : ಹರ್ಷಲ್ ಪಟೇಲ್-15 ಪಂದ್ಯಗಳಲ್ಲಿ 32 ವಿಕೆಟ್ (ಡ್ವೇನ್ ಬ್ರಾವೊ ಜೊತೆ ಐಪಿಎಲ್ನಲ್ಲಿ ಜಂಟಿ ಗರಿಷ್ಠ ವಿಕೆಟ್ ದಾಖಲೆ)
- ಪವರ್ ಪ್ಲೇಯರ್ : ವೆಂಕಟೇಶ್ ಅಯ್ಯರ್ (KKR)
- ಗರಿಷ್ಠ ಸಿಕ್ಸರ್‌ಗಳು : ಕೆ.ಎಲ್. ರಾಹುಲ್ (30 ಸಿಕ್ಸರ್)
- ಗೇಮ್ ಚೇಂಜರ್ : ಹರ್ಷಲ್ ಪಟೇಲ್
- ಸೂಪರ್ ಸ್ಟ್ರೈಕರ್ : ಶಿಮ್ರಾನ್ ಹೆಟ್ಮಾಯರ್ (ಸ್ಟ್ರೈಕ್ ರೇಟ್ - 168)
- ಕ್ಯಾಚ್ ಆಫ್ ದಿ ಸೀಸನ್: ರವಿ ಬಿಷ್ಣೋಯ್ (ಪಂಜಾಬ್ ಕಿಂಗ್ಸ್) - ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸುನಿಲ್ ನರೈನ್ ಬಾರಿಸಿದ್ದ ಎಸೆತವನ್ನು ಡೀಪ್ ಮಿಡ್ ವಿಕೆಟ್ನಲ್ಲಿ ಅದ್ಭುತ ಡೈವ್ ಮೂಲಕ ಹಿಡಿದಿದ್ದ ಬಿಷ್ಣೋಯ್)
- ಫೇರ್‌ಪ್ಲೇ ಪ್ರಶಸ್ತಿ: ರಾಜಸ್ಥಾನ ರಾಯಲ್ಸ್
- ಋತುವಿನ ಉದಯೋನ್ಮುಖ ಆಟಗಾರ: ರುತುರಾಜ್ ಗಾಯಕ್ವಾಡ್
2021ರ ಐಪಿಎಲ್ನ ಕೆಲ ದಾಖಲೆಗಳು:
ಆರೆಂಜ್ ಕ್ಯಾಪ್ ಪಡೆದ ಅನ್ಕ್ಯಾಪ್ ಆಟಗಾರ:
ಬೆಂಗಳೂರು ತಂಡದ ಬೌಲರ್ ಹರ್ಷಲ್ ಪಟೇಲ್ ಪರ್ಪಲ್ ಕ್ಯಾಪ್ ಪಡೆದ ಎರಡನೇ ಅನ್ಕ್ಯಾಪ್ ಆಟಗಾರ ಎಂಬ ದಾಖಲೆ ಬರೆದರು. ಇದಕ್ಕೂ ಮುನ್ನ 2008ರಲ್ಲಿ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಗರಿಷ್ಠ ರನ್ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.
-
Presenting the Orange Cap and Purple Cap winners of the #VIVOIPL 2021. 👍 👍
— IndianPremierLeague (@IPL) October 15, 2021 " class="align-text-top noRightClick twitterSection" data="
Congratulations to @Ruutu1331 and @HarshalPatel23 👏 👏 pic.twitter.com/9qQ8jWxtub
">Presenting the Orange Cap and Purple Cap winners of the #VIVOIPL 2021. 👍 👍
— IndianPremierLeague (@IPL) October 15, 2021
Congratulations to @Ruutu1331 and @HarshalPatel23 👏 👏 pic.twitter.com/9qQ8jWxtubPresenting the Orange Cap and Purple Cap winners of the #VIVOIPL 2021. 👍 👍
— IndianPremierLeague (@IPL) October 15, 2021
Congratulations to @Ruutu1331 and @HarshalPatel23 👏 👏 pic.twitter.com/9qQ8jWxtub
ಪ್ಲೇಯರ್ ಆಫ್ ದಿ ಮ್ಯಾಚ್ ಗೆದ್ದ ವಿದೇಶಿ ಆಟಗಾರ:
ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಫಾಫ್ ಡು ಪ್ಲೆಸಿಸ್ 'ಪ್ಲೇಯರ್ ಆಫ್ ದಿ ಮ್ಯಾಚ್' ಗೌರವ ಪಡೆದರು. ಈ ಸಾಧನೆ ಮಾಡಿದ 5ನೇ ವಿದೇಶಿ ಆಟಗಾರನಾಗಿದ್ದಾರೆ. ಐಪಿಎಲ್ ಫೈನಲ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಗೆದ್ದ ವಿದೇಶಿ ಆಟಗಾರ ವಿವರ ಈ ಕೆಳಗಿನಂತಿದೆ.
- 2013 - ಕೀರನ್ ಪೊಲಾರ್ಡ್
- 2016 - ಬೆನ್ ಕಟಿಂಗ್
- 2018 - ಶೇನ್ ವ್ಯಾಟ್ಸನ್
- 2020 - ಟ್ರೆಂಟ್ ಬೌಲ್ಟ್
- 2021 - ಫಾಫ್ ಡು ಪ್ಲೆಸಿಸ್
ಆರೆಂಜ್ ಕ್ಯಾಪ್ ಜೊತೆಗೆ ಚಾಂಪಿಯನ್ ಪಟ್ಟ:
ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಅಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆಯುವುದರ ಜೊತೆಗೆ ಚಾಂಪಿಯನ್ ತಂಡದ ಭಾಗವಾದ ಶ್ರೇಯಕ್ಕೆ ಪಾತ್ರರಾದರು. ಇದಕ್ಕೂ ಮುನ್ನ 2014ರಲ್ಲಿ ರಾಬಿನ್ ಉತ್ತಪ್ಪ ಆರೆಂಜ್ ಕ್ಯಾಪ್ ಪಡೆದಿದ್ದು, ಆಗ ಅವರಿದ್ದ ಕೆಕೆಆರ್ ಚಾಂಪಿಯನ್ ಆಗಿತ್ತು.
ರಾಯುಡು ವಿಶೇಷ ದಾಖಲೆ:
ಸಿಎಸ್ಕೆ ಆಟಗಾರ ಅಂಬಾಟಿ ರಾಯುಡುಗೆ ಐಪಿಎಲ್ ಫೈನಲ್‌ನಲ್ಲಿ ಇದು ಐದನೇ ಗೆಲುವಾಗಿದೆ (3 ಮುಂಬೈ, 2 ಚೆನ್ನೈ ತಂಡದಲ್ಲಿ). ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಕೂಡ 5 ಬಾರಿ ಚಾಂಪಿಯನ್ ಆದ ತಂಡದ ಭಾಗವಾಗಿದ್ದು, ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮಾತ್ರ 6 ಫೈನಲ್ ಗೆಲುವನ್ನು ಸಂಭ್ರಮಿಸಿದ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ: ಈ ಬಾರಿ ಕೆಕೆಆರ್ ಐಪಿಎಲ್ ಗೆಲ್ಲುವ ಅರ್ಹ ತಂಡವಾಗಿತ್ತು: ಮಹೇಂದ್ರ ಸಿಂಗ್ ಧೋನಿ