ETV Bharat / sports

ಆ ಬೌಲರ್​ ಮಾಡಿದ ಒಂದು ತಪ್ಪು ನಮ್ಮನ್ನು ಸೂಪರ್​ ಓವರ್​ಗೆ ತಂದು ನಿಲ್ಲಿಸಿತು: ಧವನ್​

author img

By

Published : Apr 26, 2021, 8:14 AM IST

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್​ ಗೆಲುವು ಪಡೆದಿದೆ. ಈ ಪಂದ್ಯ ಟೈ ಆಗಿದ್ದು ಸೂಪರ್​ ಓವರ್​ನಲ್ಲಿ ಡೆಲ್ಲಿ ತಂಡ ಗೆದ್ದು ಬೀಗಿತು.

ಶಿಖರ್​ ಧವನ್
ಶಿಖರ್​ ಧವನ್

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ vs ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ, ಡೆಲ್ಲಿ ತಂಡ ಸೂಪರ್ ಓವರ್​ನಲ್ಲಿ ಜಯ ಗಳಿಸುವ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಪಂದ್ಯದ ನಂತರ ಮಾತನಾಡಿದ ಡೆಲ್ಲಿ ತಂಡದ ಆಟಗಾರ ಶಿಖರ್​ ಧವನ್,​​ ನಾವು ಈ ಪಂದ್ಯವನ್ನು ಸೂಪರ್​​ ಓವರ್​ಗೆ ಹೋಗಲು ಬಿಡಬಾರದಿತ್ತು ಎಂದು ಹೇಳಿದ್ದಾರೆ.

"ಇಂದಿನ ಪಂದ್ಯ ಬಹಳ ರೋಮಾಂಚನಕಾರಿಯಾಗಿತ್ತು, ಆದರೆ ನಾವು ಪಂದ್ಯವನ್ನು ಸೂಪರ್​​ ಓವರ್​ಗೆ ಹೋಗಲು ಬಿಡಬಾರದಿತ್ತು. ಸುಲಭವಾಗಿ ಪಂದ್ಯ ಗೆಲ್ಲಬಹುದಿತ್ತು. ತಂಡದಲ್ಲಿ ಆದ ಕೆಲವು ತಪ್ಪುಗಳು ಈ ಪಂದ್ಯ ಸೂಪರ್​ ಓವರ್​ಗೆ ಹೋಗುವಂತೆ ಮಾಡಿದವು. ಅವೀಶ್​ ಖಾನ್​ ಓವರ್​ನಲ್ಲಿ ಎರಡು ಬೌಂಡರಿ ಬಂದಿದ್ದು ಸೂಪರ್​ ಓವರ್​ಗೆ ಕಾರಣವಾಯಿತು. ​ಆದರೆ, ಇದು ಆಟದ ಒಂದು ಭಾಗವಾಗಿದೆ " ಎಂದು ಧವನ್ ಹೇಳಿದರು.

"ಪವರ್‌ ಪ್ಲೇಯಲ್ಲಿ, ನಾವು ಎದುರಾಳಿ ತಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದೆವು. ಕೇನ್ ವಿಲಿಯಮ್ಸನ್ ಚಾಂಪಿಯನ್ ಆಟಗಾರ. ಅವರು ತಮ್ಮ ಉತ್ತಮ ಬ್ಯಾಟಿಂಗ್​ ಪ್ರದರ್ಶನದಿಂದ ಪಂದ್ಯದ ಗತಿಯನ್ನೇ ಬದಲಿಸಿದರು. ಕೊನೆಯಲ್ಲಿ ನಾವು ಪಂದ್ಯ ಗೆಲ್ಲುತ್ತೇವೆ ಅಂದುಕೊಂಡಿದ್ದೆವು. ಆದರೆ ಅದನ್ನು ಸೂಪರ್​ ಓವರ್​ಗೆ ತಂದು ನಿಲ್ಲಿಸಿದರು. ಆದರೂ ಕೊನೆಗೂ ನಾವೇ ಗೆದ್ದೆವು"ಎಂದು ಧವನ್ ಹೇಳಿದರು.

ಇದನ್ನೂ ಓದಿ : ವಿಲಿಯಮ್ಸನ್, ಸುಚಿತ್ ಹೋರಾಟ ವ್ಯರ್ಥ: ಡೆಲ್ಲಿಗೆ 'ಸೂಪರ್' ಜಯ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.