ETV Bharat / sports

IPL: ಕೊನೆಯ ಎಸೆತದಲ್ಲಿ ಸಿಕ್ಸ್... ಆರ್​ಸಿಬಿಗೆ ರೋಚಕ ಜಯ -

ಶ್ರೀಕಾರ್ ಭರತ್ ಮತ್ತು ಗ್ಲೇನ್ ಮ್ಯಾಕ್ಸವೆಲ್ ಜೊತೆಯಾಟ ಡೆಲ್ಲಿಗೆ ಸೋಲುಣಿಸಿತು. ಸೋಲಿನ ಆತಂಕದಲ್ಲಿದ್ದ ಆರ್​ಸಿಬಿ ಗೆಲುವಿನ ನಗೆ ಬೀರಿತು.

RCB
RCB
author img

By

Published : Oct 8, 2021, 11:17 PM IST

Updated : Oct 8, 2021, 11:50 PM IST

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಶ್ರೀಕಾರ್ ಭರತ್ 6 ಸಿಡಿಸಿ ಆರ್​ಸಿಬಿಗೆ ರೋಚಕ ಗೆಲುವು ತಂದಿತ್ತರು. ಜಯದ ನಿರೀಕ್ಷೆಯಲ್ಲಿದ್ದ ಪಂತ್ ಪಡೆ ನಿರಾಸೆ ಅನುಭವಿಸಿತು.

14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್​ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಿಷಬ್ ಪಂತ್ ಪಡೆ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​​ನಷ್ಟಕ್ಕೆ 164ರನ್​ಗಳಿಕೆ ಮಾಡಿತು.

ಈ ಗುರಿ ಬೆನ್ನತ್ತಿದ ಕೊಹ್ಲಿ ಪಡೆ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಪಡಿಕಲ್ (0) ಮತ್ತು ವಿರಾಟ್ ಕೊಹ್ಲಿ (4) ರನ್​ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಶ್ರಿಕಾರ್ ಭರತ್ ಮತ್ತು ಎಬಿ ಡಿ ವಿಲಿಯರ್ಸ್ ಜೋಡಿ 55 ರನ್​ಗಳ ಉತ್ತಮ ಜೊತೆಯಾಟ ತಂಡಕ್ಕೆ ಬುನಾದಿಯಾಯಿತು.

ಉತ್ತಮವಾಗಿ ಆಡುತ್ತಿದ್ದ ಎಬಿಡಿ (26) ಅಕ್ಷರ್​ ಪಟೇಲ್ ಎಸೆತದಲ್ಲಿ ಔಟಾದರು. ನಂತರ ಗ್ಲೇನ್ ಮ್ಯಾಕ್ಸವೆಲ್ ಮತ್ತು ಭರತ್ ಜೋಡಿ ಡೆಲ್ಲಿಗೆ ಸೋಲುಣಿಸಿತು. ಶ್ರೀಕಾರ್ ಭರತ್ 52 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿ ಮೂಲಕ ಅಜೇಯ 78 ರನ್ ಗಳಿಸಿದ್ರೆ, ಮ್ಯಾಕ್ಸವೆಲ್ 33 ಎಸೆತದಲ್ಲಿ 8 ಬೌಂಡರಿ ಮೂಲಕ 51 ಪೇರಿಸಿದರು. ಕೊನೆಯ ಎಸೆತದಲ್ಲಿ ಆರ್​ಸಿಬಿಗೆ 5 ರನ್​ ಬೇಕಿತ್ತು. ಆಗ ಶ್ರೀಕಾರ್ ಭರತ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದರು.

ಡೆಲ್ಲಿ ಪಡೆ ಅನ್​ರಿಚ್ ನಾರ್ತೆಜ್ 2 ಹಾಗೂ ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು.

ಇನ್ನು ಡೆಲ್ಲಿ ಪಡೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಪೃಥ್ವಿ ಶಾ ಹಾಗೂ ಶಿಖರ್​ ಧವನ್​​ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ 10 ಓವರ್​ಗಳಲ್ಲಿ ಈ ಜೋಡಿ 88ರನ್​ಗಳಿಕೆ ಮಾಡಿತು. ಪೃಥ್ವಿ ಶಾ 48ರನ್​, ಶಿಖರ್ ಧವನ್​ 43 ರನ್​ಗಳಿಕೆ ಮಾಡಿದರು.

ಜೊತೆಯಾಟ ಮುರಿದ ಹರ್ಷಲ್​

ಉತ್ತಮವಾಗಿ ಆಡುತ್ತಿದ್ದ ಧವನ್​-ಶಾ ಜೋಡಿಯನ್ನ ಬೇರ್ಪಡಿಸುವಲ್ಲಿ ಹರ್ಷಲ್ ಪಟೇಲ್​ ಯಶಸ್ವಿಯಾದರು. 43ರನ್​ಗಳಿಸಿದ್ದ ಶಿಖರ್​ ವಿಕೆಟ್​ ಪಡೆದು ತಂಡಕ್ಕೆ ಮೆಲುಗೈ ತಂದುಕೊಟ್ಟರು. ಇದರ ಬೆನ್ನಲ್ಲೇ 48ರನ್​ಗಳಿಕೆ ಮಾಡಿದ್ದ ಶಾ ಕೂಡ ವಿಕೆಟ್​ ಒಪ್ಪಿಸಿದರು.

ಇದಾದ ಬಳಿಕ ಬಂದ ಪಂತ್​ 10ರನ್​, ಅಯ್ಯರ್​ 18 ರನ್​​, ಹೆಟ್ಮಾಯರ್​​ 29ರನ್​ಗಳಿಕೆ ಮಾಡಿ ತಂಡದ ಮೊತ್ತ 150ರ ಗಡಿ ದಾಟುವಂತೆ ಮಾಡಿದರು. ಕೊನೆಯದಾಗಿ ರಿಪಲ್ ಪಟೇಲ್​​ 7ರನ್​ಗಳಿಕೆ ಮಾಡಿದರು.

ತಂಡ ಕೊನೆಯದಾಗಿ 164ರನ್​ಗಳಿಸಿ, ಆರ್​ಸಿಬಿಗೆ 165ರನ್​ ಟಾರ್ಗೆಟ್ ನೀಡಿತ್ತು. ಬೆಂಗಳೂರು ತಂಡದ ಪರ ಸಿರಾಜ್ 2ವಿಕೆಟ್​ ಪಡೆದುಕೊಂಡರೆ, ಹರ್ಷಲ್​, ಕ್ರಿಸ್ಟಿಯನ್ ಹಾಗೂ ಜಾರ್ಜ್ ತಲಾ 1ವಿಕೆಟ್​ ಕಬಳಿಸಿದರು.

ಸ್ಕೋರ್ ವಿವರ:

ಡೆಲ್ಲಿ ಕ್ಯಾಪಿಟಲ್ಸ್: 164 (5 wkts, 20 Ov)

ಆರ್​ಸಿಬಿ: 166 (3 wkts, 20 Ov)

Last Updated : Oct 8, 2021, 11:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.