ಕೋಲ್ಕತ್ತಾ: ರಜತ್ ಪಾಟಿದಾರ್(112*) ಸ್ಫೋಟಕ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ 14ರನ್ಗಳ ರೋಚಕ ಗೆಲುವು ದಾಖಲು ಮಾಡಿದೆ. ಈ ಮೂಲಕ ಕ್ವಾಲಿಫೈಯರ್ಗೆ ಪ್ರವೇಶ ಪಡೆದುಕೊಂಡಿದ್ದು, ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಇಲ್ಲಿ ಜಯ ಸಾಧಿಸುವ ತಂಡ ಫೈನಲ್ನಲ್ಲಿ ಗುಜರಾತ್ ವಿರುದ್ಧ ಕಣಕ್ಕಿಳಿಯಲಿದೆ.
-
.@RCBTweets seal a spot in the #TATAIPL 2022 Qualifier 2! 👏 👏@faf1307 & Co. beat #LSG by 14 runs in the high-scoring Eliminator at the Eden Gardens, Kolkata. 👍 👍
— IndianPremierLeague (@IPL) May 25, 2022 " class="align-text-top noRightClick twitterSection" data="
Scorecard ▶️ https://t.co/cOuFDWIUmk #TATAIPL | #LSGvRCB pic.twitter.com/mOqY5xggUT
">.@RCBTweets seal a spot in the #TATAIPL 2022 Qualifier 2! 👏 👏@faf1307 & Co. beat #LSG by 14 runs in the high-scoring Eliminator at the Eden Gardens, Kolkata. 👍 👍
— IndianPremierLeague (@IPL) May 25, 2022
Scorecard ▶️ https://t.co/cOuFDWIUmk #TATAIPL | #LSGvRCB pic.twitter.com/mOqY5xggUT.@RCBTweets seal a spot in the #TATAIPL 2022 Qualifier 2! 👏 👏@faf1307 & Co. beat #LSG by 14 runs in the high-scoring Eliminator at the Eden Gardens, Kolkata. 👍 👍
— IndianPremierLeague (@IPL) May 25, 2022
Scorecard ▶️ https://t.co/cOuFDWIUmk #TATAIPL | #LSGvRCB pic.twitter.com/mOqY5xggUT
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮಳೆಯಿಂದಾಗಿ 40 ನಿಮಿಷಗಳ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್ನಲ್ಲೇ ಡುಪ್ಲೆಸಿಸ್(0) ವಿಕೆಟ್ ಕಳೆದುಕೊಂಡಿತು. ಬಳಿಕ ತಂದ ವಿರಾಟ್ ಹಾಗೂ ರಜತ್ ತಂಡವನ್ನ ಮುನ್ನಡೆಸಿದರು. ಆರಂಭದಲ್ಲಿ ಎಚ್ಚರಿಕೆ ಆಟವಾಡಿದ ಪಾಟಿದಾರ್ ತದನಂತರ ಅಬ್ಬರಿಸಿ ಬೊಬ್ಬರಿದರು. ಉತ್ತಮವಾಗಿ ಆಡ್ತಿದ್ದ ವಿರಾಟ್ 25ರನ್ಗಳಿಸಿದ ವೇಳೆ ಔಟಾದರು. ಇದರ ಬೆನ್ನಲ್ಲೇ ಮ್ಯಾಕ್ಸವೆಲ್ 9ರನ್ಗಳಿಸಿ ಔಟ್ ಆದರು. ಮಹಿಪಾಲ್ ಲೊಮ್ರೊರ್(9) ನಿರ್ಗಮಿಸಿದರು.
ನಿರ್ಣಾಯಕ ಹಂತದಲ್ಲಿ ಒಂದಾದ ಪಾಟಿದಾರ್ ಹಾಗೂ ಕಾರ್ತಿಕ್ ಉತ್ತಮ ಆಟವಾಡಿದರು. ಪಾಟಿದಾರ್ ಅಜೇಯರಾಗಿ 112ರನ್ಗಳಿಕೆ ಮಾಡಿದರೆ, ಕಾರ್ತಿಕ್ 37ರನ್ಗಳಿಸಿದರು. ಇದರ ನೆರವಿನಿಂದ ತಂಡ 4 ವಿಕೆಟ್ನಷ್ಟಕ್ಕೆ 207ರನ್ಗಳಿಕೆ ಮಾಡಿತು. ಲಖನೌ ತಂಡದ ಪರ ಮೋಸಿನ್ ಖಾನ್, ಕೃನಾಲ್, ಆವೇಶ್ ಖಾನ್ ಹಾಗೂ ಬಿಷ್ಣೋಯ್ ತಲಾ 1 ವಿಕೆಟ್ ಪಡೆದುಕೊಂಡರು.
208ರನ್ಗಳ ಗುರಿ ಬೆನ್ನತ್ತಿದ ಲಖನೌ ಕೂಡ ಆರಂಭದಲ್ಲೇ ಆಘಾತ ಅನುಭವಿಸಿತು. ಕ್ವಿಂಟನ್ ಡಿಕಾಕ್(6) ಔಟಾದರು. ಇದರ ಬೆನ್ನಲ್ಲೇ ಬಂದ ವೋಹ್ರಾ ಕೂಡ 19ರನ್ಗಳಿಸಿ ಹ್ಯಾಜಲ್ವುಡ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಒಂದಾದ ರಾಹುಲ್(79) ಹಾಗೂ ದೀಪಕ್ ಹೂಡಾ(45) ತಂಡಕ್ಕೆ ಉತ್ತಮ ಜೊತೆಯಾಟವಾಡಿ, ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ಆರ್ಸಿಬಿ ಬೌಲರ್ಗಳು ಯಶಸ್ವಿಯಾದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 193ರನ್ಗಳಿಕೆ ಮಾಡಿ, 14ರನ್ಗಳ ಸೋಲು ಕಂಡಿತು. ಇದರ ಜೊತೆಗೆ ಟೂರ್ನಿಯಿಂದ ಹೊರಬಿದ್ದಿದೆ.
ಆರ್ಸಿಬಿ ಪರ ಮಿಂಚಿದ ಹ್ಯಾಜಲ್ವುಡ್ 3 ವಿಕೆಟ್ ಪಡೆದರೆ, ಸಿರಾಜ್, ಹಸರಂಗ ಹಾಗೂ ಹರ್ಷಲ್ ಪಟೇಲ್ 1 ವಿಕೆಟ್ ಪಡೆದು ಮಿಂಚಿದರು.