ಬೆಂಗಳೂರು: ರಾಜಸ್ಥಾನ ರಾಯಲ್ಸ್ ವಿರುದ್ಧದ ಇಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೋ ಗ್ರೀನ್ ಅಭಿಯಾನದ ಅಡಿ ಆಡುತ್ತಿದ್ದಾರೆ. ಆದರೆ ಮುಂಗಾರು ಪೂರ್ವ ಮಳೆ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಹೇಳುತ್ತಿದೆ. ಏನೇ ಆದರೂ ಟೇಬಲ್ ಟಾಪರ್ಸ್ ಜೊತೆಗಿನ ಕದನಕ್ಕ ರೆಡ್ ಬಾಯ್ಸ್, ಗ್ರೀನ್ ಡ್ರೆಸ್ನಲ್ಲಿ ಸಿದ್ಧವಾಗುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 32 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿವೆ. ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಇಬ್ಬರ ನಡುವಣ ಫೈಟ್ಗೆ ಸಜ್ಜಾಗಿದೆ. ಒಂದು ವೇಳೆ ಮಳೆ ಬಂದರೂ ಬೇಗ ಇಂಗುವ ಸಾಮರ್ಥ್ಯ ಮೈದಾನಕ್ಕಿರುವುದರಿಂದ ಓವರ್ಗಳನ್ನು ಕಡಿತಗೊಳಿಸಿಯಾದರೂ ಪಂದ್ಯ ಆಡಿಸುವ ನಿರೀಕ್ಷೆ ಇದೆ.
ಆರ್ಸಿಬಿಯಲ್ಲಿ ಕೆಜಿಎಫ್ (ವಿರಾಟ್ ಕೊಹ್ಲಿ, ಗೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್) ಅವರ ಬ್ಯಾಟಿಂಗ್ ಬಲ ಈವರೆಗಿನ ಪಂದ್ಯಗಳಲ್ಲಿ ಗೆಲುವಿಗೆ ಕಾರಣವಾಗಿದ್ದು, ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಬ್ಯಾಟರ್ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಎಲ್ಲ ಪಂದ್ಯಗಳಲ್ಲಿ ವಿರಾಟ್, ಡು ಪ್ಲೆಸಿಸ್ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ನಾಯಕ ಪ್ಲೆಸಿಸ್ ಪಿಂಕ್ ಕ್ಯಾಪ್ ಸಹ ಪಡೆದಿದ್ದಾರೆ. ಬೌಲಿಂಗ್ನಲ್ಲಿ ಸಿರಾಜ್ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಆದರೆ ಬೌಲಿಂಗ್ ಕ್ಷೇತ್ರ ಇನ್ನೂ ಸುಧಾರಣೆಗೊಳ್ಳುವ ಅಗತ್ಯತೆ ಇದೆ.
-
POV: 𝐏𝐋𝐀𝐘𝐈𝐍𝐆 𝐁𝐎𝐋𝐃 in a parallel universe 🪞🏏#PlayBold #ನಮ್ಮRCB #IPL2023 pic.twitter.com/A7sYwH7cBI
— Royal Challengers Bangalore (@RCBTweets) April 22, 2023 " class="align-text-top noRightClick twitterSection" data="
">POV: 𝐏𝐋𝐀𝐘𝐈𝐍𝐆 𝐁𝐎𝐋𝐃 in a parallel universe 🪞🏏#PlayBold #ನಮ್ಮRCB #IPL2023 pic.twitter.com/A7sYwH7cBI
— Royal Challengers Bangalore (@RCBTweets) April 22, 2023POV: 𝐏𝐋𝐀𝐘𝐈𝐍𝐆 𝐁𝐎𝐋𝐃 in a parallel universe 🪞🏏#PlayBold #ನಮ್ಮRCB #IPL2023 pic.twitter.com/A7sYwH7cBI
— Royal Challengers Bangalore (@RCBTweets) April 22, 2023
ಇಂದು ತಂಡವನ್ನು ಮುನ್ನಡೆಸುತ್ತಾರ ವಿರಾಟ್?: ವಿರಾಟ್ ಕೊಹ್ಲಿ ಎರಡು ವರ್ಷಗಳ ನಂತರ ಕಳೆದ ಪಂಜಾಬ್ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದರು. ಡು ಪ್ಲೆಸಿಸ್ ಅನಾರೋಗ್ಯದ ಕಾರಣ ಮತ್ತೆ ಕ್ಯಾಪ್ಟನ್ ಆಗಿದ್ದರು. ರಾಜಸ್ಥಾನದ ವಿರುದ್ಧವೂ ವಿರಾಟ್ ನಾಯಕತ್ವ ಮುಂದುವರೆಯುತ್ತಾ ಕಾದುನೋಡ ಬೇಕಿದೆ. ಡು ಪ್ಲೆಸಿಸ್ ನೆಟ್ಸ್ನಲ್ಲಿ ಆರೋಗ್ಯವಾಗಿ ಕಂಡಿದ್ದಾರೆ.
ಅಂಕ ಪಟ್ಟಿಯ ಅಗ್ರಸ್ಥಾನ ಉಳಿಸಿಕೊಳ್ಳಲು ಸಂಜು ಫೈಟ್: ಲೀಗ್ನಲ್ಲಿ ಆಡಿದ ಆರು ಪಂದ್ಯದಲ್ಲಿ ನಾಲ್ಕರಲ್ಲಿ ಗೆದ್ದಿರುವ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ಮತ್ತೆ ಗೆದ್ದು ಸ್ಥಾನ ಭದ್ರ ಪಡಿಸಿಕೊಳ್ಳಲು ಸಿದ್ಧವಾಗುತ್ತಿದೆ. ಬೆಂಗಳೂರಿನ ಮಾಜಿ ಆಟಗಾರ ಯಜುವೇಂದ್ರ ಚಹಾಲ್ ಆರ್ಸಿಬಿಗೆ ಮುಳುವಾಗುವ ಸಾಧ್ಯತೆ ಇದೆ. ಪಿಚ್ ಬಗ್ಗೆ ಅರಿತಿರುವ ಚಹಾಲ್ ವಿರಾಟ್ಗೆ ಚಾಲೆಂಜ್ ಆಗಲಿದ್ದಾರೆ.
-
3 x 🦁🦁🦁🏴 pic.twitter.com/ZWTr15M1Pb
— Rajasthan Royals (@rajasthanroyals) April 22, 2023 " class="align-text-top noRightClick twitterSection" data="
">3 x 🦁🦁🦁🏴 pic.twitter.com/ZWTr15M1Pb
— Rajasthan Royals (@rajasthanroyals) April 22, 20233 x 🦁🦁🦁🏴 pic.twitter.com/ZWTr15M1Pb
— Rajasthan Royals (@rajasthanroyals) April 22, 2023
ಸಂಭಾವ್ಯ ತಂಡಗಳು ಇಂತಿವೆ..:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಸುಯಾಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್ .
ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಆರ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯಜುವೇಂದ್ರ ಚಾಹಲ್.
ಇದನ್ನೂ ಓದಿ: ನಾಲ್ಕು ಇನ್ನಿಂಗ್ಸ್ಗಳ ಏಕದಿನದ ಅಭಿಪ್ರಾಯ ತಿಳಿಸಿದ ಸಚಿನ್: 50ನೇ ವಸಂತ ಪ್ರವೇಶಿಸುವ ಲಿಟಲ್ ಮಾಸ್ಟರ್ ವಿಶೇಷ ಸಂಭ್ರಮ