ಬೆಂಗಳೂರು: ವಿಜಯ್‌ಕುಮಾರ್ ವೈಶಾಕ್ ಅವರ ಮೂರು ವಿಕೆಟ್ ಮತ್ತು ಆರ್ಸಿಬಿಯ ಬೌಲಿಂಗ್ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್ ಅಂತ್ಯಕ್ಕೆ 151 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದೆಡೆ ವಿಕೆಟ್ ಪತನ ಆಗುತ್ತಿದ್ದರೂ ಮನೀಶ್ ಪಾಂಡೆ ಅರ್ಧಶತಕ ಗಳಿಸಿದರು. ಆದರೆ ಅದು ವ್ಯರ್ಥವಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್ ಗೆಲುವು ದಾಖಲಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 175 ರನ್ ಗುರಿಯನ್ನು ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ ಎರಡು ಆರಂಭಿಕ ಆಘಾತ ಉಂಟಾಯಿತು. 1 ರನ್ ಗಳಿಸಿ ತಂಡ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ಎರಡನೇ ಬಾಲ್ಗೆ ಒಂದು ರನ್ ಓಡಿ ಪೃಥ್ವಿ ಶಾಗೆ ವಾರ್ನರ್ ಕ್ರೀಸ್ ಕೊಟ್ಟರು. ಪಂದ್ಯದ ನಾಲ್ಕನೇ ಬಾಲ್ ಆಡಿದ ಪೃಥ್ವಿ ಶಾ (0) ರನ್ ಔಟ್ಗೆ ಬಲಿಯಾದರು. ಅವರ ನಂತರ ಬಂದ ಮಿಚೆಲ್ ಮಾರ್ಷ್ (0) 4 ಬಾಲ್ ಎದುರಿಸಿ ಡಕ್ ಔಟ್ ಆದರು. ಅವರ ಬೆನ್ನಲ್ಲೇ ಯಶ್ ಧುಲ್ 1 ರನ್ಗೆ ವಿಕೆಟ್ ಒಪ್ಪಿಸಿದರು. ಡೆಲ್ಲಿ 2 ರನ್ಗೆ 3 ವಿಕೆಟ್ ಕಳೆದುಕೊಂಡಿತು.
-
Back to winning ways 🙌@RCBTweets register a 23-run win at home and clinch their second win of the season 👏👏
— IndianPremierLeague (@IPL) April 15, 2023 " class="align-text-top noRightClick twitterSection" data="
Scorecard ▶️ https://t.co/xb3InbFbrg #TATAIPL | #RCBvDC pic.twitter.com/5lE5gWQm8H
">Back to winning ways 🙌@RCBTweets register a 23-run win at home and clinch their second win of the season 👏👏
— IndianPremierLeague (@IPL) April 15, 2023
Scorecard ▶️ https://t.co/xb3InbFbrg #TATAIPL | #RCBvDC pic.twitter.com/5lE5gWQm8HBack to winning ways 🙌@RCBTweets register a 23-run win at home and clinch their second win of the season 👏👏
— IndianPremierLeague (@IPL) April 15, 2023
Scorecard ▶️ https://t.co/xb3InbFbrg #TATAIPL | #RCBvDC pic.twitter.com/5lE5gWQm8H
ಈ ಸಮಯದಲ್ಲಿ ಬಂದ ಮನೀಶ್ ಪಾಂಡೆ ನಾಯಕ ಡೇವಿಡ್ ವಾರ್ನರ್ಗೆ ಸಾಥ್ ನೀಡಿದರು. ಆದರೆ ಕಳೆದ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಡೇವಿಡ್ ವಾರ್ನರ್ (19) ವಿಜಯ್‌ಕುಮಾರ್ ವೈಶಾಕ್ಗೆ ವಿಕೆಟ್ ಒಪ್ಪಿಸಿದರು. ಈ ನಡುವೆ ಜವಾಬ್ದಾರಿಯುತ ಬ್ಯಾಟಿಂಗ್ನ್ನು ಪಾಂಡೆ ಮುಂದುವರೆಸಿದರು. ವಾರ್ನರ್ ಬಳಿಕ ಅಭಿಷೇಕ್ ಪೊರೆಲ್ 5 ರನ್ಗೆ ಔಟ್ ಆದರು.
ಕಳೆದ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ದಾಖಲಿಸಿದ್ದ ಅಕ್ಷರ್ ಪಟೇಲ್ ಮತ್ತೆ ಬ್ಯಾಟಿಂಗ್ನಲ್ಲಿ ಅಬ್ಬರಿಸುವ ಸೂಚನೆ ನೀಡಿದರು. ಆದರೆ 6 ರನ್ ಗಳಿಸಿದ ಅವರು ವಿಜಯ್‌ಕುಮಾರ್ ವೈಶಾಕ್ ದಾಳಿಗೆ ಔಟ್ ಆದರು. ಈ ವೇಳೆ 38 ಬಾಲ್ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸ್ನಿಂದ 50 ರನ್ ಗಳಿಸಿದ್ದ ಮನೀಶ್ ಪಾಂಡೆ ಹಸರಂಗಗೆ ಔಟ್ ಆದರು. ನಂತರ ಬಂದ ಅಮನ್ ಹಕೀಮ್ ಖಾನ್ (14) ಮತ್ತು ಲಲಿತ್ ಯಾದವ್ (4) ಬೇಗ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅನ್ರಿಚ್ ನೋರ್ಟ್ಜೆ (23*) ಮತ್ತು ಕುಲದೀಪ್ ಯಾದವ್ (7*) ಗೆಲುವಿಗೆ ಪ್ರಯತ್ನಿಸಿದರು.
ಆರ್ಸಿಬಿ ಪರ ವಿಜಯ್‌ಕುಮಾರ್ ವೈಶಾಕ್ 3 ವಿಕೆಟ್, ಸಿರಾಜ್ 2 ಮತ್ತು ವನಿಂದು ಹಸರಂಗಾ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಅರ್ಧಶತಕ ಮತ್ತು ಬಾಕಿ ಬ್ಯಾಟರ್ಗಳ 20 ರನ್ನ ಕೊಡುಗೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ನ ಕುಲದೀಪ್ ಯಾದವ್ ಮತ್ತು ಮಿಚೆಲ್ ಮಾರ್ಷ್ ಆರ್ಸಿಬಿಯ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಟಾಸ್ ಸೋತು ಮೊದಲ ಬ್ಯಾಟಿಂಗ್ ಬಂದ ಆರ್ಸಿಬಿ ಆರಂಭಿಕ ಬೃಹತ್ ಜೊತೆಯಾಟದ ವೈಫಲ್ಯ ಎದುರಿಸಿತು. ಫಾಫ್ ಡು ಪ್ಲೆಸಿಸ್ 22 ರನ್ ವಿಕೆಟ್ ಒಪ್ಪಿಸಿದರು. ಅವರ ನಂತರ ಬಂದ ಮಹಿಪಾಲ್ ಲೊಮ್ರೋರ್ (26) ಗ್ಲೆನ್ ಮ್ಯಾಕ್ಸ್‌ವೆಲ್ (24) ಮತ್ತು ಹರ್ಷಲ್ ಪಟೇಲ್ (20*) ತಂಡಕ್ಕೆ ಕೊಂಚ ರನ್ ಸೇರಿಸಿರು. ಶಹಬಾಜ್ ಅಹ್ಮದ್ ಮತ್ತು ದಿನೇಶ್ ಕಾರ್ತಿಕ್ ಬೇಗ ವಿಕೆಟ್ ಒಪ್ಪಿಸಿದರು.
ತವರಿನಲ್ಲಿ 2500 ರನ್ : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ 2500 ರನ್ನಿನ ಗಡಿಯನ್ನು ತಲುಪಿದರು. ನಾಲ್ಕು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮೂರು ಅರ್ಧಶತಕ ಗಳಿಸಿದ್ದು, ಈ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಟಿ-20ಯಲ್ಲಿ ಮ್ಯಾಟ್ ಹೆನ್ರಿ ಹ್ಯಾಟ್ರಿಕ್ ಸಾಧನೆ, ಕಿವೀಸ್ನ ನಾಲ್ಕನೇ ಬೌಲರ್