ಬೆಂಗಳೂರು: ಅಭಿಮಾನ, ಬೆಂಬಲ ಎಷ್ಟೇ ಇದ್ದರೂ ಚುಟುಕು ಕ್ರಿಕೆಟ್ನಲ್ಲಿ ಗೆಲುವು ಮಾತ್ರ ಅಷ್ಟು ಸುಲಭವಲ್ಲ. ಅದು ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ನಡೆದ ಪಂದ್ಯದಲ್ಲಿ ಸಾಬೀತಾಯಿತು. ಚೆನ್ನೈ 200+ ಸ್ಕೋರ್ ಸವಾಲನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಏರಿಕೆ ಕಂಡಿತು. ಆರ್ಸಿಬಿ ಸೋಲಿನ ಮೂಲಕ ಇಳಿಕೆ ದಾಖಲಿಸಿತು.
ಬ್ಯಾಟ್ಸ್ಮನ್ಗಳ ಸ್ವರ್ಗವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಮಳೆಯೇ ಸುರಿಯಿತು. ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 6 ವಿಕೆಟ್ಗೆ 226 ರನ್ ಮಾಡಿದರೆ, ಕಠಿಣ ಗುರಿ ಬೆನ್ನತ್ತಿದ ಆರ್ಸಿಬಿ ಹೋರಾಟದ ನಡುವೆ 218 ರನ್ ಗಳಿಸಿ 8 ರನ್ಗಳಿಂದ ಸೋಲು ಕಂಡಿತು. ಇದು ಉಭಯ ತಂಡಗಳ ನಡುವಿನ ತುರುಸಿನ ಹೋರಾಟಕ್ಕೆ ಸಾಕ್ಷಿಯಾಯಿತು.
-
Scoring a cracking 8⃣3⃣, Devon Conway put on an impressive show with the bat and bagged the Player of the Match award as @ChennaiIPL sealed a win against #RCB. 👏 👏
— IndianPremierLeague (@IPL) April 17, 2023 " class="align-text-top noRightClick twitterSection" data="
Scorecard ▶️ https://t.co/QZwZlNk1Tt #TATAIPL | #RCBvCSK pic.twitter.com/NPmhmgW1nf
">Scoring a cracking 8⃣3⃣, Devon Conway put on an impressive show with the bat and bagged the Player of the Match award as @ChennaiIPL sealed a win against #RCB. 👏 👏
— IndianPremierLeague (@IPL) April 17, 2023
Scorecard ▶️ https://t.co/QZwZlNk1Tt #TATAIPL | #RCBvCSK pic.twitter.com/NPmhmgW1nfScoring a cracking 8⃣3⃣, Devon Conway put on an impressive show with the bat and bagged the Player of the Match award as @ChennaiIPL sealed a win against #RCB. 👏 👏
— IndianPremierLeague (@IPL) April 17, 2023
Scorecard ▶️ https://t.co/QZwZlNk1Tt #TATAIPL | #RCBvCSK pic.twitter.com/NPmhmgW1nf
ತುಂಬಿ ತುಳುಕುತ್ತಿದ್ದ ಕ್ರೀಡಾಂಗಣದಲ್ಲಿ ಚೆನ್ನೈ ಭರ್ಜರಿ ಬ್ಯಾಟಿಂಗ್ ಮಾಡಿ ರನ್ ಹೊಳೆ ಹರಿಸಿತು. ಋತುರಾಜ್ ಗಾಯಕ್ವಾಡ್ ಬೇಗನೇ ಔಟಾದರೆ, ಡೆವೋನ್ ಕಾನ್ವೆ ಮತ್ತು ಅಜಿಂಕ್ಯಾ ರಹಾನೆ ಉತ್ತಮ ಬ್ಯಾಟ್ ಮಾಡಿದರು. 37 ರನ್ ಮಾಡಿದ ರಹಾನೆ ಹಸರಂಗ ಗೂಗ್ಲಿಗೆ ಬಲಿಯಾದರು. ಬಳಿಕ ಬಂದ ಶಿವಂ ದುಬೆ ಅಬ್ಬರಿಸಿದರು. 5 ಸಿಕ್ಸರ್ 2 ಬೌಂಡರಿ ಸಮೇತ 52 ರನ್ ಗಳಿಸಿದರು.
ಆರ್ಸಿಬಿ ಬೌಲರ್ಗಳನ್ನು ಚೆಂಡಾಡಿದ ಕಾನ್ವೆ ಭರ್ಜರಿ ಅರ್ಧಶತಕ ಸಿಡಿಸಿದರು. ತಲಾ 6 ಬೌಂಡರಿ, ಸಿಕ್ಸರ್ಗಳಿಂದ 83 ರನ್ ಗಳಿಸಿದರು. ಕೊನೆಯಲ್ಲಿ ರಾಯುಡು(14), ಮೊಯಿನ್ ಅಲಿ(19), ರವೀಂದ್ರ ಜಡೇಜಾ (10) ರನ್ ಕಾಣಿಕೆ ನೀಡಿದರು. ಕಳೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಆರ್ಸಿಬಿ ಬೌಲರ್ಗಳು ಈ ಬಾರಿ ಮಂಕಾಗಿ ತಲಾ ಒಂದು ವಿಕೆಟ್ ಪಡೆದರು.
-
.@Gmaxi_32 came out all guns blazing in the chase and even as #RCB lost the match, he was the top performer from the second innings of the #RCBvCSK clash 👍 👍 #TATAIPL | @RCBTweets
— IndianPremierLeague (@IPL) April 17, 2023 " class="align-text-top noRightClick twitterSection" data="
Here's his batting summary 🔽 pic.twitter.com/8h9uZi85ij
">.@Gmaxi_32 came out all guns blazing in the chase and even as #RCB lost the match, he was the top performer from the second innings of the #RCBvCSK clash 👍 👍 #TATAIPL | @RCBTweets
— IndianPremierLeague (@IPL) April 17, 2023
Here's his batting summary 🔽 pic.twitter.com/8h9uZi85ij.@Gmaxi_32 came out all guns blazing in the chase and even as #RCB lost the match, he was the top performer from the second innings of the #RCBvCSK clash 👍 👍 #TATAIPL | @RCBTweets
— IndianPremierLeague (@IPL) April 17, 2023
Here's his batting summary 🔽 pic.twitter.com/8h9uZi85ij
ಹೋರಾಡಿ ಸೋತ ಆರ್ಸಿಬಿ: ತವರು ಮೈದಾನದಲ್ಲಿ 226 ರನ್ಗಳ ಕಠಿಣ ಗುರಿ ಬೆನ್ನತ್ತಿದ ಆರ್ಸಿಬಿ, ಒತ್ತಡಕ್ಕೆ ಒಳಗಾಯಿತು. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ 6 ರನ್ಗೆ ಅಚ್ಚರಿಯ ರೀತಿ ಔಟಾದರು. ಚೆಂಡು ಉರುಳುತ್ತಾ ನಿಧಾನವಾಗಿ ಸಾಗಿ ವಿಕೆಟ್ ಬೀಳಿಸಿತು. ಇದು ವಿರಾಟ್ಗೂ ಶಾಕ್ ನೀಡಿತು. ಇದರ ಬೆನ್ನಲ್ಲೇ ಮಹಿಪಾಲ್ ಲೋಮ್ರೋರ್ ಸೊನ್ನೆ ಸುತ್ತಿದರು. ಇದು ತಂಡವನ್ನು ಕಾಡಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮ್ಯಾಕ್ಸವೆಲ್ ಎಂಬ ಪರಾಕ್ರಮಿ ಮೈದಾನಕ್ಕೆ ಕಾಲಿಟ್ಟ ಮೇಲೆ ಸ್ಕೋರರ್ಗಳಿಗೆ ವಿಶ್ರಾಂತಿಯೇ ನೀಡಲಿಲ್ಲ.
ಬಿಡುಬೀಸಾದ ಬ್ಯಾಟ್ ಬೀಸಿದ ಮ್ಯಾಕ್ಸಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. 36 ಎಸೆತಗಳಲ್ಲಿ 8 ಸಿಕ್ಸರ್, 3 ಬೌಂಡರಿ ಸಮೇತ 76 ರನ್ ಸಿಡಿಸಿ ಔಟಾದರು. ಇಷ್ಟೇ ವೇಗವಾಗಿ ಆಡುತ್ತಿದ್ದ ನಾಯಕ ಫಾಫ್ ಡು ಪ್ಲೆಸಿಸ್ ಹೊಟ್ಟೆ ನೋವಿನ ನಡುವೆಯೂ 62 ರನ್ ಮಾಡಿದರು. ಇಬ್ಬರೂ ಬ್ಯಾಟ್ ಮಾಡುವ ಹಂತದವರೆಗೂ ತಂಡಕ್ಕೆ ಗೆಲುವು ನಿಶ್ಚಿತ ಎಂದೇ ಭಾವಿಸಲಾಗಿತ್ತು. ಬಳಿಕ ಇಬ್ಬರೂ ಪೆವಿಲಿಯನ್ ಸೇರಿದ ಮೇಲೆ ರನ್ ಗಳಿಕೆ ಇಳಿಯಿತು.
ಶಹಬಾಜ್ ಅಹ್ಮದ್ 12, ದಿನೇಶ್ ಕಾರ್ತಿಕ್ 28, ಇಂಪ್ಯಾಕ್ಟ್ ಪ್ಲೇಯರ್ ಸುಯಾಶ್ ಪ್ರಭುದೇಸಾಯಿ 19 ರನ್ಗಳ ಹೋರಾಟ ಗೆಲುವಿಗೆ ಸಾಕಾಗಲಿಲ್ಲ. ಚೆನ್ನೈನ ತುಷಾರ್ ದೇಶಪಾಂಡೆ 3, ಮಥೀಶ್ ಪಥೀರಣ 2 ವಿಕೆಟ್ ಮಿಂಚಿದರು.
ಓದಿ: RCB vs CSK: ಕಾನ್ವೆ-ದುಬೆ ಭರ್ಜರಿ ಬ್ಯಾಟಿಂಗ್, ಆರ್ಸಿಬಿಗೆ 227 ರನ್ ಬೃಹತ್ ಗುರಿ