ETV Bharat / sports

ಕ್ರೀಡಾಂಗಣದಲ್ಲಿ ಕುಳಿತು ಡೆಲ್ಲಿ-ಗುಜರಾತ್‌ IPL ಪಂದ್ಯ ವೀಕ್ಷಿಸುತ್ತಿರುವ ರಿಷಭ್ ಪಂತ್! - ETV Bharath Kannada news

ರಿಷಬ್​ ಪಂತ್​ ಇಂದು ಡೆಲ್ಲಿಯಲ್ಲಿ ನಡೆಯುತ್ತಿರುವ ಗುಜರಾತ್​ ವಿರುದ್ಧದ ಪಂದ್ಯ ವೀಕ್ಷಣೆಗೆ ಅರುಣ್ ಜೇಟ್ಲಿ ಸ್ಟೇಡಿಯಂಗೆ ಬಂದಿದ್ದಾರೆ.

Rishabh Pant watching Delhi vs Gujarat match from stadium
ಕ್ರೀಡಾಂಗಣಕ್ಕೆ ಬಂದ ರಿಷಬ್​​ ಪಂತ್​.. ಮಾಜಿ ನಾಯಕನಿಗಾಗಿ ಕ್ರೀಡಾಂಗಣದಲ್ಲಿ ವಿಶೇಷ ವ್ಯವಸ್ಥೆ
author img

By

Published : Apr 4, 2023, 9:26 PM IST

ದೆಹಲಿ: ಕಳೆದ ವರ್ಷ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸದ್ಯ ಚೇತರಿಕೆ ಹಾದಿಯಲ್ಲಿರುವ ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್ ತಾವು ಐಪಿಎಲ್‌ನಲ್ಲಿ ಪ್ರತಿನಿಧಿಸುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬೆಂಬಲ ನೀಡಲು ಇಂದು ಅರುಣ್ ಜೇಟ್ಲಿ ಸ್ಟೇಡಿಯಂಗೆ ಆಗಮಿಸಿ ಗಮನ ಸೆಳೆದರು. ತವರಿನಲ್ಲಿ ನಡೆಯುತ್ತಿರುವ ಪಂದ್ಯವನ್ನು ಕ್ರೀಡಾಂಗಣಕ್ಕೆ ಬಂದು ಮಾಜಿ ನಾಯಕ ಕಣ್ತುಂಬಿಕೊಳ್ಳುತ್ತಿದ್ದಾರೆ. ಪಂತ್​ ಬಿಳಿ ಟಿ ಶರ್ಟ್​ ಧರಿಸಿ ಪಂದ್ಯ ಎಂಜಾಯ್ ಮಾಡುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿವೆ.

ಡೆಲ್ಲಿ ಕ್ಯಾಪಿಟಲ್ಸ್​ ತನ್ನ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಪಂತ್​ ಅವರೊಂದಿಗಿನ ಸೆಲ್ಫಿ ಫೋಟೋ ಹಂಚಿಕೊಂಡಿದೆ. ವೀಕ್ಷಕರ ಸ್ಟ್ಯಾಂಡ್​ಗೆ ಪಂತ್​ ಊರುಗೋಲುಗಳ ಆಸರೆ ತೆಗೆದುಕೊಂಡು ಬಂದು ಕುಳಿತುಕೊಂಡಿದ್ದಾರೆ.

ರಿಷಬ್​ ಪಂತ್​ ಕ್ರೀಡಾಂಗಣಕ್ಕೆ ಬಂದಿರುವ ವಿಡಿಯೋವನ್ನು ಹಂಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್,​ ನಮ್ಮ 13ನೇ ಆಟಗಾರ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಪಂತ್​ ಜೊತೆಗೆ ರಾಜೀವ್​ ಶುಕ್ಲಾ ಅವರು ಮಾತನಾಡುತ್ತಿರುವುದನ್ನು ನೋಡಬಹುದು. ಇದೇ ವೇಳೆ ಪಂತ್​ ಕ್ಯಾಮರಾದತ್ತ ಕೈ ಬೀಸಿ ಅಭಿಮಾನಿಗಳಿಗೆ ವಿಶ್ ಮಾಡಿದರು.

ಮೊದಲ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್‌ ಡಗೌಟ್‌ನ ಮೇಲೆ ರಿಷಬ್ ಪಂತ್ ಜೆರ್ಸಿ ಪ್ರದರ್ಶಿಸುವ ನೆನಪಿಸಿಕೊಂಡಿತ್ತು. ಆದರೆ ಬಿಸಿಸಿಐ ಕ್ರಮ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ದೆಹಲಿ ಫ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಅಹಿತಕರ ಘಟನೆ ಅಥವಾ ಆಟಗಾರನ ನಿವೃತ್ತಿಯ ನಂತರ ಜೆರ್ಸಿ ಸೂಟ್‌ಗಳನ್ನು ನೇತುಹಾಕುವುದು ಸಾಮಾನ್ಯ. ಆದರೆ ಗಾಯಗೊಂಡು ಹೊರಗಿರುವವರಿಗೆ ಈ ರೀತಿ ಮಾಡುವುದು ಸಮಂಜಸವಲ್ಲ ಎಂದಿತ್ತು.

ಇದನ್ನೂ ಓದಿ: IPL 2023 DC vs GT: ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್, ತಂಡ ಸೇರಿದ ಸಾಯಿ ಸುದರ್ಶನ್‌

ಇಂದು, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಶರ್ಮಾ ಅವರು ರಿಷಬ್ ಪಂತ್‌ಗೆ ವಿಶೇಷ ಆಸನ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಅವರು ಕ್ರೀಡಾಂಗಣದಲ್ಲಿ ಆರಾಮವಾಗಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾರೆ. ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಅವರು ಈ ಬಗ್ಗೆ ವಿಶೇಷ ನಿಗಾ ಇಟ್ಟಿದ್ದಾರೆ. ಪಂತ್​ಗೆ ಯಾರೂ ಅನಗತ್ಯ ತೊಂದರೆ ನೀಡದಂತೆ ಭದ್ರತೆ ಹೆಚ್ಚಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 30 ರಂದು ನಡೆದ ಭೀಕರ ಕಾರು ಅಪಘಾತದ ನಂತರ ಪಂತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಅಪಘಾತದಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದ ಪಂತ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಡೆಲ್ಲಿ ನಾಯಕತ್ವವನ್ನು ಡೇವಿಡ್ ವಾರ್ನರ್ ನಿಭಾಯಿಸುತ್ತಿದ್ದಾರೆ. ಪಂತ್ ಬದಲಿಗೆ ಎಡಗೈ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್ ಅವರನ್ನು ಫ್ರಾಂಚೈಸಿ ಸೇರಿಸಿಕೊಂಡಿದೆ.

ಇದನ್ನೂ ಓದಿ: ಇಂದು ಗುಜರಾತ್​ ಟೈಟಾನ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಸೆಣಸಾಟ.. ತಂಡವನ್ನು ಹುರಿದುಂಬಿಸಲು ಬರ್ತಿದ್ದಾರೆ ರಿಷಭ್​ ಪಂತ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.