ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕಪ್ಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೂ(ಆರ್ಸಿಬಿ) ಅದೇಕೋ ಎಣ್ಣೆ- ಸೀಗೆಕಾಯಿ ಸಂಬಂಧ. ಅಂತಿಮ ಹಂತದವರೆಗೆ ಬಂದು ತಂಡ ಸೋಲು ಅನುಭವಿಸಿ ಕಪ್ನಿಂದ ವಂಚಿತವಾಗುತ್ತದೆ. ತಂಡಕ್ಕಿರುವ 'ಚೋಕರ್ಸ್ ಪಟ್ಟ' 16ನೇ ಆವೃತ್ತಿಯಲ್ಲೂ ಮುಂದುವರಿದಿದ್ದು, ಪ್ಲೇಫ್ಗೇರದೇ ಲೀಗ್ ಹಂತದಲ್ಲೇ ತಂಡ ಟೂರ್ನಿಯಿಂದ ಹೊರಬಿದ್ದಿದೆ.
-
Most painful picture of the IPL.
— Mufaddal Vohra (@mufaddal_vohra) May 21, 2023 " class="align-text-top noRightClick twitterSection" data="
King Kohli gave his absolute best, scored back to back centuries for RCB, but RCB are knocked out. You gotta feel for Virat! pic.twitter.com/ofzcxPdlHB
">Most painful picture of the IPL.
— Mufaddal Vohra (@mufaddal_vohra) May 21, 2023
King Kohli gave his absolute best, scored back to back centuries for RCB, but RCB are knocked out. You gotta feel for Virat! pic.twitter.com/ofzcxPdlHBMost painful picture of the IPL.
— Mufaddal Vohra (@mufaddal_vohra) May 21, 2023
King Kohli gave his absolute best, scored back to back centuries for RCB, but RCB are knocked out. You gotta feel for Virat! pic.twitter.com/ofzcxPdlHB
ಈ ಬಾರಿಯಾದರೂ ತಂಡ ಕಪ್ ಗೆಲ್ಲಲಿದೆ ಎಂಬ ಆರ್ಸಿಬಿ ಅಭಿಮಾನಿಗಳ ಆಸೆ, ಮತ್ತೆ ನಿರಾಶೆಯಾಗಿಯೇ ಮುಂದುವರಿದಿದೆ. ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ರನ್ಮಶಿನ್ ವಿರಾಟ್ ಕೊಹ್ಲಿ ಶತಕ ಬಾರಿಸಿದರೂ, ಫಲ ನೀಡಲಿಲ್ಲ. ಪಂದ್ಯದ ಬಳಿಕ ಕೊಹ್ಲಿ ಮುಖ ಹತಾಶೆ ಭಾವದಿಂದ ಕೂಡಿತ್ತು. ಸೋಲಿನ ನೋವು ಅವರಲ್ಲಿ ಕಾಣುತ್ತಿತ್ತು.
ಒಮ್ಮೆಯೂ ಕಪ್ ಗೆಲ್ಲದ ಆರ್ಸಿಬಿ: 16 ಐಪಿಎಲ್ ಸೀಸನ್ಗಳಲ್ಲಿ ಆರ್ಸಿಬಿ ಒಮ್ಮೆಯೂ ಕಪ್ ಗೆದ್ದಿಲ್ಲ. ವಿಶ್ವದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ಕ್ರಿಕೆಟ್ ಕ್ಲಬ್ ಇದಾಗಿದೆ. ಪ್ರತಿ ಆವೃತ್ತಿಯಲ್ಲಿ ಅಭಿಮಾನಿಗಳೂ 'ಈ ಸಲ ಕಪ್ ನಮ್ದೇ' ಎಂಬ ಘೋಷವಾಕ್ಯ ಕೂಗಿದರೂ, ಕಪ್ ಗೆಲುವು ಮಾತ್ರ ಮರೀಚಿಕೆಯಾಗಿದೆ. ಆರ್ಸಿಬಿ ಇದುವರೆಗೂ ಮೂರು ಬಾರಿ(2009, 2011, 2016) ಫೈನಲ್ ತಲುಪಿ, ಸೋಲು ಅನುಭವಿಸಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ತಂಡದ ಗರಿಷ್ಠ ಸಾಧನೆಯೂ ಇದೆ.
-
The season ends for RCB!
— Mufaddal Vohra (@mufaddal_vohra) May 21, 2023 " class="align-text-top noRightClick twitterSection" data="
Started with high hopes like 15 previous years, but results remain the same. They fought really hard throughout, especially Faf Du Plessis and Virat Kohli who gave their best. pic.twitter.com/ICW4Ee5ZB8
">The season ends for RCB!
— Mufaddal Vohra (@mufaddal_vohra) May 21, 2023
Started with high hopes like 15 previous years, but results remain the same. They fought really hard throughout, especially Faf Du Plessis and Virat Kohli who gave their best. pic.twitter.com/ICW4Ee5ZB8The season ends for RCB!
— Mufaddal Vohra (@mufaddal_vohra) May 21, 2023
Started with high hopes like 15 previous years, but results remain the same. They fought really hard throughout, especially Faf Du Plessis and Virat Kohli who gave their best. pic.twitter.com/ICW4Ee5ZB8
ಪ್ಲೇಆಫ್ ಕನಸು ಭಗ್ನ: ಪ್ಲೇಆಫ್ ಹಂತಕ್ಕೇರಲು ನಿನ್ನೆ ನಡೆದ ಮಹತ್ವದ ಪಂದ್ಯದಲ್ಲಿ ವಿರಾಟ್ ವಿರಾವೇಶದ ಹೊರತಾಗಿಯೂ ತಂಡ ಹೀನಾಯ ಸೋಲು ಕಂಡಿತು. ಗುಜರಾತ್ ತಂಡದ ಶುಭಮನ್ ಗಿಲ್ ಮನಮೋಹಕ್ಕೆ ಶತಕದಾಟದ ಮುಂದೆ ಆರ್ಸಿಬಿ ಉಡೀಸ್ ಆಯಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ ಓವರ್ಗಳಲ್ಲಿ ವಿರಾಟ್ ಕೊಹ್ಲಿ ಶತಕದ ಬಲದಿಂದ 197 ರನ್ ಗಳಿಸಿತು. ಚಿಕ್ಕ ಗ್ರೌಂಡ್ನಲ್ಲಿ ಮೆರೆದಾಡಿದ ಗಿಲ್ ಈ ಸೀಸನ್ನಲ್ಲಿ 2ನೇ ಶತಕ ಸಿಡಿಸಿ ಗೆಲುವು ತಂದುಕೊಟ್ಟರು. ಇದರಿಂದ ಆರ್ಸಿಬಿ ಪ್ಲೇಆಫ್ ರೇಸ್ನಿಂದ ಹೊರಬಿತ್ತು. ಪಾಯಿಂಟ್ ಪಟ್ಟಿಯಲ್ಲಿ 6 ನೇ ಸ್ಥಾನಕ್ಕಿಳಿದು ಅಭಿಯಾನ ಮುಗಿಸಿತು.
ಕೊಹ್ಲಿ, ಗಿಲ್ ಸತತ 2ನೇ ಶತಕ: 16 ನೇ ಆವೃತ್ತಿಯ ಐಪಿಎಲ್ನ ಹಲವು ದಾಖಲೆಗಳಿಗೆ ಪಾತ್ರವಾಗುತ್ತಿದೆ. ಫೈನಲ್ ಸೇರಿದಂತೆ 4 ಪಂದ್ಯಗಳು ಬಾಕಿ ಇರುವಾಗಲೇ 11 ಶತಕಗಳು ದಾಖಲಾಗಿವೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ರಲಾ 2 ಶತಕ ಬಾರಿಸಿದ್ದಾರೆ. ಇಬ್ಬರೂ ಆಡಿದ ಕೊನೆಯ ಎರಡೂ ಪಂದ್ಯಗಳಲ್ಲಿ ಸೆಂಚುರಿ ಸಾಧನೆ ಮಾಡಿದ್ದಾರೆ.
ವಿರಾಟ್ ಶತಕದ ದಾಖಲೆ: ಇನ್ನೂ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾದಲ್ಲಿಯೇ ಅತ್ಯಧಿಕ ಶತಕ ಬಾರಿಸಿದ ಆಟಗಾರ ಹೆಗ್ಗಳಿಕೆಗೆ ಪಾತ್ರರಾದರು. ಗುಜರಾತ್ ವಿರುದ್ಧ 100 ರನ್ ಬಾರಿಸುವ ಮೂಲಕ 7ನೇ ಸೆಂಚುರಿ ದಾಖಲಿಸಿ, ಟಿ20 ಮಾಸ್ಟರ್ ಕ್ರಿಸ್ಗೇಲ್ ಹೆಸರಲ್ಲಿದ್ದ 6 ಶತಕಗಳ ದಾಖಲೆಯನ್ನು ಮುರಿದರು.
ಓದಿ: IPL ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಸಿಡಿಸಿ ದಾಖಲೆ ಬರೆದ ರನ್ ಮಶಿನ್ ವಿರಾಟ್ ಕೊಹ್ಲಿ!