ದುಬೈ: ಎಲಿಮಿನೇಟರ್ ಪಂದ್ಯದಲ್ಲಿ ಸೋತು ಆರ್ಸಿಬಿ ತಂಡ ಐಪಿಎಲ್ ಟೂರ್ನಿಯ ಪ್ರಯಾಣ ಕೊನೆಗೊಳಿಸಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ತಂಡ ಎಲಿಮಿನೇಟರ್ನಲ್ಲಿ ಕೆಕೆಆರ್ ವಿರುದ್ಧ ಮುಗ್ಗರಿಸಿದೆ.
ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಹ ಪಂದ್ಯದ ಬಳಿಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. ಇದೀಗ ಆರ್ಸಿಬಿ ತಂಡ ಸೇರಿದ್ದ ಆಟಗಾರರು ಮರಳಿ ತಮ್ಮ ತಾಯ್ನಾಡಿಗೆ ತೆರಳಿದ್ದಾರೆ. ಇದಕ್ಕೂ ಮೊದಲು ದುಬೈನಲ್ಲಿ ಆರ್ಸಿಬಿ ತಂಡ ಕೊನೆಯ ಗ್ರೂಪ್ ಫೋಟೋ ತೆಗೆಸಿಕೊಂಡಿದೆ. ಆರ್ಸಿಬಿಯ ಎಲ್ಲಾ ಆಟಗಾರರು, ಸಿಬ್ಬಂದಿ ಈ ಫೋಟೋದಲ್ಲಿದ್ದು, ಮ್ಯಾನೇಜ್ಮೆಂಟ್ ಎಲ್ಲಾ ಆಟಗಾರರಿಗೂ ಧನ್ಯವಾದ ಅರ್ಪಿಸಿದೆ.
-
A HUGE THANK YOU to this entire family that put in countless hours of hard work and dedication in the RCB bio bubble and showed us what it is to #PlayBold.❤️#PlayBold #WeAreChallengers #IPL2021 pic.twitter.com/xeDTjnxJ4x
— Royal Challengers Bangalore (@RCBTweets) October 12, 2021 " class="align-text-top noRightClick twitterSection" data="
">A HUGE THANK YOU to this entire family that put in countless hours of hard work and dedication in the RCB bio bubble and showed us what it is to #PlayBold.❤️#PlayBold #WeAreChallengers #IPL2021 pic.twitter.com/xeDTjnxJ4x
— Royal Challengers Bangalore (@RCBTweets) October 12, 2021A HUGE THANK YOU to this entire family that put in countless hours of hard work and dedication in the RCB bio bubble and showed us what it is to #PlayBold.❤️#PlayBold #WeAreChallengers #IPL2021 pic.twitter.com/xeDTjnxJ4x
— Royal Challengers Bangalore (@RCBTweets) October 12, 2021
ಬಯೋ ಬಬಲ್ನಲ್ಲಿ ಶ್ರಮ ವಹಿಸಿದ್ದು ಮತ್ತು ಲೆಕ್ಕವಿಲ್ಲದಷ್ಟು ಸಮಯ ಸಮರ್ಪಣೆ ಮಾಡಿದ ಆರ್ಸಿಬಿಯ ಈ ಕುಟುಂಬಕ್ಕೆ ಧನ್ಯವಾದಗಳು. ಪ್ಲೇ ಬೋಲ್ಡ್ ಅಂದರೆ ಏನೆಂದು ನಮಗೆ ತೋರಿಸಿದೆ ಎಂದು ಟ್ವೀಟ್ ಮಾಡಲಾಗಿದೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿ ನಿರಾಸೆ ಮೂಡಿಸಿತು.