ETV Bharat / sports

Watch: 4 ಕ್ಯಾಚ್‌, 2 ವಿಕೆಟ್‌ ಪಡೆದ ಜಡೇಜಾ ಪ್ರತಿಕ್ರಿಯೆ ಹೀಗಿತ್ತು.. - ಚೆನ್ನೈ ಸೂಪರ್​ ಕಿಂಗ್ಸ್​

ರವೀಂದ್ರ ಜಡೇಜಾ ರಾಜಸ್ಥಾನದ ಆರಂಭಿಕ ಆಟಗಾರ ಮನನ್ ವೊಹ್ರಾ, ರಿಯಾನ್ ಪರಾಗ್, ಕ್ರಿಸ್ ಮೋರಿಸ್ ಮತ್ತು ಜಯದೇವ್ ಉನಾದ್ಕತ್ ಅವರ ಕ್ಯಾಚ್​ ಪಡೆದರು. ಬೌಲಿಂಗ್​ ಮೂಲಕ ಒಂದೇ ಓವರ್‌ನಲ್ಲಿ ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು.

ravindra-jadeja
ಜಡೇಜಾ
author img

By

Published : Apr 20, 2021, 10:38 AM IST

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​​ ನಡುವಿನ ಪಂದ್ಯದಲ್ಲಿ ಸಿಎಸ್​ಕೆ ಗೆಲುವಿಗೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೊಡುಗೆ ಪ್ರಮುಖವಾಗಿತ್ತು.

ಈ ಪಂದ್ಯದಲ್ಲಿ ಬೌಲಿಂಗ್​ ಜೊತೆಗೆ ಫೀಲ್ಡಿಂಗ್​ನಲ್ಲೂ ಅವರು ಕಮಾಲ್ ಮಾಡಿದ್ದರು. ಬೌಲಿಂಗ್‌ನಲ್ಲಿ ಆರ್​ಆರ್​ ತಂಡದ ಪ್ರಮುಖ 2 ವಿಕೆಟ್‌ಗಳನ್ನು ಪಡೆದು ಮಿಂಚಿದರೆ, ಫೀಲ್ಡಿಂಗ್‌ನಲ್ಲೂ 4 ಕ್ಯಾಚ್​ ಪಡೆದು ತಾನೊಬ್ಬ ಸಂಪೂರ್ಣ ಆಲ್​​ರೌಂಡರ್​ ಅನ್ನೋದನ್ನು ತೋರಿಸಿದರು.

ಬೌಂಡರಿ ಲೈನ್​​ನಲ್ಲಿ ಜಯದೇವ್ ಉನಾದ್ಕಟ್ ಕ್ಯಾಚ್​ ಪಡೆದ ಮೇಲೆ ಜಡೇಜಾ ಅವರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಕ್ಯಾಚ್​ ಪಡೆದ ನಂತರ ಮೊದಲು 4 ಕೈ ಬೆರಳುಗಳನ್ನು ತೋರಿಸಿದ ಬಳಿಕ ಫೋನ್​ ಮಾಡಿ ಎನ್ನುವ ಪ್ರತಿಕ್ರಿಯೆಗೆ ಕ್ರಿಕೆಟ್‌ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ : Watch: ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ ಧೋನಿ ಡೈವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.