ನವದೆಹಲಿ: ಐಪಿಎಲ್ 2023 ಟ್ರೋಫಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಗೆಲುವಿನ ನಂತರ, ಚೆನ್ನೈ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ಐದನೇ ಐಪಿಎಲ್ ಪ್ರಶಸ್ತಿಯನ್ನು ನಾಯಕ ಎಂಎಸ್ ಧೋನಿಗೆ ಅರ್ಪಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ವರ್ಷದ ಚಾಂಪಿಯನ್ ಜಿಟಿ ( ಗುಜರಾತ್ ಜೇಂಟ್ಸ್) ಅನ್ನು ಐದು ವಿಕೆಟ್‌ಗಳಿಂದ (ಡಿಎಲ್‌ಎಸ್ ವಿಧಾನ) ಸೋಲಿಸುವ ಮೂಲಕ ಜಡೇಜಾ ಸಿಎಸ್‌ಕೆಗೆ ಗೆಲುವು ತಂದುಕೊಟ್ಟಿದ್ದಾರೆ.
-
Ravindra Jadeja's new Instagram DP. pic.twitter.com/ea4AlYyyh9
— Mufaddal Vohra (@mufaddal_vohra) May 30, 2023 " class="align-text-top noRightClick twitterSection" data="
">Ravindra Jadeja's new Instagram DP. pic.twitter.com/ea4AlYyyh9
— Mufaddal Vohra (@mufaddal_vohra) May 30, 2023Ravindra Jadeja's new Instagram DP. pic.twitter.com/ea4AlYyyh9
— Mufaddal Vohra (@mufaddal_vohra) May 30, 2023
ಜಡೇಜಾ ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಅದ್ಭುತವಾಗಿ ಗೆಲ್ಲಿಸಿಕೊಟ್ಟರು. ಅಗತ್ಯ 10 ರನ್‌ಗಳ ಕೊನೆಯ ಓವರ್ನ ಒತ್ತಡದ ನಡುವೆ ಯಶಸ್ವಿಯಾಗಿ ಪೂರೈಸಿದರು. ಇದರಿಂದ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಚೆನ್ನೈ ಸರಿಗಟ್ಟಿದೆ. ಗೆಲುವಿನ ನಂತರ ಜಡೇಜಾ ಧೋನಿ ಅವರೊಂದಿಗಿನ ಕ್ಷಣಗಳನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ನಾವು ಇದನ್ನು ಒಬ್ಬರಿಗಾಗಿ ಮಾಡಿದ್ದೇವೆ ಮತ್ತು ಅದು ಕೇವಲ ಎಂಎಸ್ ಧೋನಿಗಾಗಿ. "ಮಹಿ ಭಾಯ್ ಆಪ್ಕೆ ಲಿಯೇ ತೋ ಕುಚ್ ಭಿ" ಎಂದು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಇದರಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಅವರ ಪತ್ನಿ ರಿವಾಬಾ ಅವರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಜಡೇಜಾ ಅವರು ಟ್ರೋಫಿಯೊಂದಿಗೆ ತಮ್ಮ ಪತ್ನಿಯೊಂದಿಗೆ ಧೋನಿ ಪಕ್ಕದಲ್ಲಿ ಕುಳಿತಿದ್ದಾರೆ.
-
We did it for ONE and ONLY “MS DHONI.🏆 mahi bhai aapke liye toh kuch bhi…❤️❤️ pic.twitter.com/iZnQUcZIYQ
— Ravindrasinh jadeja (@imjadeja) May 30, 2023 " class="align-text-top noRightClick twitterSection" data="
">We did it for ONE and ONLY “MS DHONI.🏆 mahi bhai aapke liye toh kuch bhi…❤️❤️ pic.twitter.com/iZnQUcZIYQ
— Ravindrasinh jadeja (@imjadeja) May 30, 2023We did it for ONE and ONLY “MS DHONI.🏆 mahi bhai aapke liye toh kuch bhi…❤️❤️ pic.twitter.com/iZnQUcZIYQ
— Ravindrasinh jadeja (@imjadeja) May 30, 2023
ಅದೇ ಸಮಯದಲ್ಲಿ, ಸಂಭ್ರಮಾಚರಣೆ ನಡುವೆ, ಭಾವುಕರಾದ ಧೋನಿ ಅವರು ಆಲ್ ರೌಂಡರ್ ಜಡೇಜಾ ಅವರನ್ನು ಸಂತೋಷದ ಕ್ಷಣದಲ್ಲಿ ಎತ್ತುತ್ತಿದ್ದು, ಫುಲ್ ವೈರಲ್ ಆಗುತ್ತಿದೆ. ಪಂದ್ಯದ ನಂತರ ಜಡೇಜಾ, 'ನಾನು ಗುಜರಾತ್ ನವನು ಮತ್ತು ಇದು ವಿಶೇಷ ಭಾವನೆಯಾಗಿದೆ. ಇಲ್ಲಿ ಇಷ್ಟೊಂದು ಚೆನ್ನೈ ಅಭಿಮಾನಿಗಳನ್ನು ಕಾಣಲು ಸಂತೋಷವಾಗುತ್ತದೆ. ಅಭಿಮಾನಿಗಳು ಮಳೆ ನಿಲ್ಲಲು ತಡರಾತ್ರಿಯವರೆಗೂ ಕಾಯುತ್ತಿದ್ದರು, ನಾನು ಸಿಎಸ್ಕೆ ಅಭಿಮಾನಿಗಳನ್ನು ಅಭಿನಂದಿಸಲು ಬಯಸುತ್ತೇನೆ. ನಾನು ಈ ಗೆಲುವನ್ನು ನಾಯಕ ಎಂಎಸ್ ಧೋನಿಗೆ ಅರ್ಪಿಸಲು ಬಯಸುತ್ತೇನೆ ಎಂದಿದ್ದಾರೆ.
ರಾಯುಡು ಕೈಗೆ ಕಪ್: ಈ ಆವೃತ್ತಿಯ ಕೊನೆಯ ಪಂದ್ಯದ ನಂತರ ಐಪಿಎಲ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ಅಂಬಟಿ ರಾಯುಡು ಅವರಿಗೆ ಐಪಿಎಲ್ ಕಪ್ನ್ನು ಧೋನಿ ಕೊಡಿಸಿದರು. ವೇದಿಕೆಯಲ್ಲಿ ಎಡ ಮತ್ತು ಬಲದಲ್ಲಿ ಧೋನಿ, ಜಡೇಜಾ ಇದ್ದರೆ ರಾಯುಡು ನಡುವಿನಲ್ಲಿನಿಂತು ರೋಜರ್ ಬಿನ್ನಿ ಹಾಗೂ ಜಯ್ ಶಾ ಕಡೆಯಿಂದ ಕಪ್ ಸ್ವೀಕರಿಸಿದರು.
-
A memorable farewell for a memorable career 👏🏻👏🏻
— IndianPremierLeague (@IPL) May 30, 2023 " class="align-text-top noRightClick twitterSection" data="
Ambati Rayudu shares his emotions of winning the #TATAIPL 2023 #Final with Devon Conway 👌🏻👌🏻 - By @ameyatilak #CSKvGT | @RayuduAmbati pic.twitter.com/8ZPtPCpYEw
">A memorable farewell for a memorable career 👏🏻👏🏻
— IndianPremierLeague (@IPL) May 30, 2023
Ambati Rayudu shares his emotions of winning the #TATAIPL 2023 #Final with Devon Conway 👌🏻👌🏻 - By @ameyatilak #CSKvGT | @RayuduAmbati pic.twitter.com/8ZPtPCpYEwA memorable farewell for a memorable career 👏🏻👏🏻
— IndianPremierLeague (@IPL) May 30, 2023
Ambati Rayudu shares his emotions of winning the #TATAIPL 2023 #Final with Devon Conway 👌🏻👌🏻 - By @ameyatilak #CSKvGT | @RayuduAmbati pic.twitter.com/8ZPtPCpYEw
ಧೋನಿ ಎತ್ತಿಕೊಂಡ ಫೋಟೋವನ್ನು ಡಿಪಿ ಮಾಡಿಕೊಂಡ ಜಡೇಜಾ: ಕೊನೆಯ ಬಾಲ್ಗೆ ಬೌಂಡರಿ ಪಡೆದು ವಿಜಯದ ರನ್ ಗಳಿಸುತ್ತಿದ್ದಂತೆ ಡಗ್ಔಟ್ ಕಡೆಗೆ ಜಡೇಜಾ ಧಾವಿಸಿ ಬಂದರು. ಡಗ್ಔಟ್ನಲ್ಲಿ ಕುಳಿತಿದ್ದ ಧೋನಿ ಜಡೇಜಾ ಬಂದೊಡನೇ ತಬ್ಬಿಕೊಂಡು ಅವರನ್ನು ಮೇಲೆತ್ತಿದ್ದಾರೆ. ಈ ಫೋಟೋವನ್ನು ರವೀಂದ್ರ ಜಡೇಜಾ ತಮ್ಮ ಇನ್ಸ್ಟಾಗ್ರಾಮ್ನ ಡಿಪಿಯಾಗಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಪಂದ್ಯ ಗೆಲ್ಲಿಸಿದ ಜಡೇಜಾ ಎತ್ತಿಕೊಂಡು ಸಂಭ್ರಮಿಸಿದ ಧೋನಿ: ನೋಡಿ ಅಪರೂಪದ ದೃಶ್ಯ