ETV Bharat / sports

ಚೊಚ್ಚಲ IPL ಪಂದ್ಯದಲ್ಲೇ 3 ವಿಕೆಟ್,ಅದ್ಭುತ ಕ್ಯಾಚ್​​: ಗಮನ ಸೆಳೆದ ಟೆಂಪೋ ಡ್ರೈವರ್​ ಮಗ ಸಕಾರಿಯಾ!

author img

By

Published : Apr 12, 2021, 10:22 PM IST

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಚೊಚ್ಚಲ ಅವಕಾಶ ಪಡೆದುಕೊಂಡಿರುವ ಟೆಂಪೋ ಡ್ರೈವರ್​ ಮಗನೊಬ್ಬ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

Chetan Sakariya
Chetan Sakariya

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಂಡಿದ್ದು, ಹೊಸ ಹೊಸ ಪ್ರತಿಭೆಗಳು ಕಣಕ್ಕಿಳಿದು ತಮ್ಮ ಸಾಮರ್ಥ್ಯ ಹೊರ ಹಾಕುತ್ತಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್​ ತಂಡದಲ್ಲಿ ಅಡುವ ಅವಕಾಶ ಪಡೆದುಕೊಂಡಿರುವ 22 ವರ್ಷದ ಸೌರಾಷ್ಟ್ರ ಎಡಗೈ ವೇಗಿ ಚೇತನ ಸಕಾರಿಯಾ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ.

ಪಂಜಾಬ್​ ವಿರುದ್ಧ ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4 ಓವರ್​ ಎಸೆದ ಚೇತನ್​ ಕೇವಲ 31ರನ್​​ ನೀಡಿ ಪ್ರಮುಖ ಮೂರು ವಿಕೆಟ್​ ಪಡೆದು ಗಮನ ಸೆಳೆದಿದ್ದಾರೆ. ಇಂದಿನ ಪಂದ್ಯದಲ್ಲಿ ಕನ್ನಡಿಗರಾದ ಮಯಾಂಕ್​ ಅಗರವಾಲ್​, ಕೆ.ಎಲ್​ ರಾಹುಲ್​​​ ಹಾಗೂ ರಿಚರ್ಡ್ಸಸನ್​ ವಿಕೆಟ್​ ಪಡೆದುಕೊಂಡು ಮಿಂಚಿದ್ದಾರೆ. ಇದರ ಜತೆಗೆ ಕ್ಷೇತ್ರ ರಕ್ಷಣೆ ವೇಳೆ ಅದ್ಭುತ ಕ್ಯಾಚ್​ ಪಡೆದುಕೊಳ್ಳುವ ಮೂಲಕ ನಿಕೋಲಸ್​​ ಪೂರನ್​ ಔಟ್ ಆಗಲು ಕಾರಣರಾದರು.

What a catch Sakariya pic.twitter.com/t81Qx33riZ

— viva (@vivawho) April 12, 2021 " class="align-text-top noRightClick twitterSection" data=" ">

ದೇಶಿಯ ಟೂರ್ನಿಗಳಲ್ಲಿ ಮಿಂಚು ಹರಿಸಿದ್ದ ಸಕಾರಿಯಾಗೆ ರಾಜಸ್ಥಾನ ರಾಯಲ್ಸ್​​ 1.2 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಟೆಂಪೋ ಡ್ರೈವರ್​ ಮಗನಾಗಿರುವ ಚೇತನ ಅತ್ಯಂತ ಕಡು ಬಡತನದಲ್ಲಿ ಬೆಳೆದ ಪ್ರತಿಭೆಯಾಗಿದೆ. ಸೌರಾಷ್ಟ್ರ ತಂಡದ ಪರ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಚೇತನ ಸಕಾರಿಯಾ ಭಾಗಿಯಾಗಿದ್ದ ವೇಳೆ ಇವರ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದು, ಇವರಿಗೆ ಮತ್ತಷ್ಟು ಆಘಾತಕ್ಕೊಳಗಾಗುವಂತೆ ಮಾಡಿತ್ತು.

ಇದನ್ನೂ ಓದಿ: ಐಪಿಎಲ್​ನಲ್ಲಿ 350 ಸಿಕ್ಸರ್​ ಸಿಡಿಸಿ ದಾಖಲೆ ಬರೆದ 41 ವರ್ಷದ ಯುನಿವರ್ಸಲ್ ಬಾಸ್​!

ಆದರೆ, ಇದೀಗ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ತಾವು ಪದಾರ್ಪಣೆ ಮಾಡಿರುವ ಪಂದ್ಯದಲ್ಲೇ ಕೇವಲ 7.8 ಎಕಾನಮಿಯಲ್ಲಿ ರನ್​ ನೀಡಿ ಮೂರು ವಿಕೆಟ್​ ಪಡೆದು ಗಮನ ಸೆಳೆದಿದ್ದು, ಮುಂದಿನ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ.

ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಂಡಿದ್ದು, ಹೊಸ ಹೊಸ ಪ್ರತಿಭೆಗಳು ಕಣಕ್ಕಿಳಿದು ತಮ್ಮ ಸಾಮರ್ಥ್ಯ ಹೊರ ಹಾಕುತ್ತಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್​ ತಂಡದಲ್ಲಿ ಅಡುವ ಅವಕಾಶ ಪಡೆದುಕೊಂಡಿರುವ 22 ವರ್ಷದ ಸೌರಾಷ್ಟ್ರ ಎಡಗೈ ವೇಗಿ ಚೇತನ ಸಕಾರಿಯಾ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ.

ಪಂಜಾಬ್​ ವಿರುದ್ಧ ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4 ಓವರ್​ ಎಸೆದ ಚೇತನ್​ ಕೇವಲ 31ರನ್​​ ನೀಡಿ ಪ್ರಮುಖ ಮೂರು ವಿಕೆಟ್​ ಪಡೆದು ಗಮನ ಸೆಳೆದಿದ್ದಾರೆ. ಇಂದಿನ ಪಂದ್ಯದಲ್ಲಿ ಕನ್ನಡಿಗರಾದ ಮಯಾಂಕ್​ ಅಗರವಾಲ್​, ಕೆ.ಎಲ್​ ರಾಹುಲ್​​​ ಹಾಗೂ ರಿಚರ್ಡ್ಸಸನ್​ ವಿಕೆಟ್​ ಪಡೆದುಕೊಂಡು ಮಿಂಚಿದ್ದಾರೆ. ಇದರ ಜತೆಗೆ ಕ್ಷೇತ್ರ ರಕ್ಷಣೆ ವೇಳೆ ಅದ್ಭುತ ಕ್ಯಾಚ್​ ಪಡೆದುಕೊಳ್ಳುವ ಮೂಲಕ ನಿಕೋಲಸ್​​ ಪೂರನ್​ ಔಟ್ ಆಗಲು ಕಾರಣರಾದರು.

ದೇಶಿಯ ಟೂರ್ನಿಗಳಲ್ಲಿ ಮಿಂಚು ಹರಿಸಿದ್ದ ಸಕಾರಿಯಾಗೆ ರಾಜಸ್ಥಾನ ರಾಯಲ್ಸ್​​ 1.2 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಟೆಂಪೋ ಡ್ರೈವರ್​ ಮಗನಾಗಿರುವ ಚೇತನ ಅತ್ಯಂತ ಕಡು ಬಡತನದಲ್ಲಿ ಬೆಳೆದ ಪ್ರತಿಭೆಯಾಗಿದೆ. ಸೌರಾಷ್ಟ್ರ ತಂಡದ ಪರ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಚೇತನ ಸಕಾರಿಯಾ ಭಾಗಿಯಾಗಿದ್ದ ವೇಳೆ ಇವರ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದು, ಇವರಿಗೆ ಮತ್ತಷ್ಟು ಆಘಾತಕ್ಕೊಳಗಾಗುವಂತೆ ಮಾಡಿತ್ತು.

ಇದನ್ನೂ ಓದಿ: ಐಪಿಎಲ್​ನಲ್ಲಿ 350 ಸಿಕ್ಸರ್​ ಸಿಡಿಸಿ ದಾಖಲೆ ಬರೆದ 41 ವರ್ಷದ ಯುನಿವರ್ಸಲ್ ಬಾಸ್​!

ಆದರೆ, ಇದೀಗ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ತಾವು ಪದಾರ್ಪಣೆ ಮಾಡಿರುವ ಪಂದ್ಯದಲ್ಲೇ ಕೇವಲ 7.8 ಎಕಾನಮಿಯಲ್ಲಿ ರನ್​ ನೀಡಿ ಮೂರು ವಿಕೆಟ್​ ಪಡೆದು ಗಮನ ಸೆಳೆದಿದ್ದು, ಮುಂದಿನ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.