ಅಹಮದಾಬಾದ್: 2022ರ ಆವೃತ್ತಿಯ ಚಾಂಪಿಯನ್ ತಂಡ ಗುಜರಾತ್ ಟೈಟಾನ್ಸ್ ಈ ಬಾರಿಯು ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದೆ. ಆಡಿದ 7 ಪಂದ್ಯಗಳಲ್ಲಿ 2ನ್ನು ಮಾತ್ರ ಸೋತಿರುವ ತಂಡ 10 ಅಂಕದೊಂದಿಗೆ ಸದ್ಯಕ್ಕೆ ಅಂಕ ಪಟ್ಟಿಯ ಎರಡನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಗುಜರಾತ್ ಹಾರ್ದಿಕ್ ನಾಯಕತ್ವದಲ್ಲಿ ಆಲ್ರೌಂಡರ್ ಪದರ್ಶನ ನೀಡುತ್ತಾ ಬಂದಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಅನ್ನು ಬಲಿಷ್ಠ ಬೌಲಿಂಗ್ನಿಂದ ಕಟ್ಟಿಹಾಕಿ ಗೆದ್ದುಕೊಂಡಿತು. ಆರಂಭಿಕ ಜೊತೆಯಾಟ ತಂಡಕ್ಕೆ ಸಿಗದಿದ್ದರೂ ನಂತರದ ಬ್ಯಾಟರ್ಗಳಿಂದ ತಂಡ ಯಶಸ್ಸು ಸಾಧಿಸುತ್ತಿದೆ. ಆರಂಭಿಕ ಆಟಗಾರ ಶುಭಮನ್ ಗಿಲ್ ಈ ಆವೃತ್ತಿಯಲ್ಲೂ ತಮ್ಮ ಫಾರ್ಮ್ ಮುಂದುವರೆಸಿದ್ದಾರೆ. ಆದರೆ ಅವರಿಗೆ ವೃದ್ಧಿಮಾನ್ ಸಹಾ ಸರಿಯಾದ ಸಾಥ್ ನೀಡುವಲ್ಲಿ ಎಡವುತ್ತಿದ್ದಾರೆ.
ಆದರೆ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲದೇ ಬೃಹತ್ ರನ್ ಕಲೆಹಾಕುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಸ್ಕೋರ್ ಗಳಿಸುತ್ತಿರುವುದು. ನಿನ್ನೆಯ ಪಂದ್ಯದಲ್ಲಿ ಕೊನೆಯ ಐದು ಓವರ್ನಲ್ಲಿ ತಂಡ ಬರೋಬ್ಬರಿ 77 ರನ್ ಕಲೆಹಾಕುವ ಮೂಲಕ ಗುರಿಯನ್ನು 200ರ ಗಡಿ ದಾಟಿಸಿತು. ಕೊನೆಯಲ್ಲಿ ಬಂದ ತೆವಾಟಿಯ 5 ಬಾಲ್ನಲ್ಲಿ 20 ರನ್ ಗಳಿಸಿದ್ದು ತಂಡ ಬೃಹತ್ ಟಾರ್ಗೆಟ್ ನೀಡುವಲ್ಲಿ ಸಹಕಾರಿಯಾಯಿತು.
ಹಾರ್ದಿಕ್ ಪಾಂಡ್ಯ ತಂಡದಲ್ಲಿ ಹೆಚ್ಚಿನ ಬೌಲರ್ಗಳನ್ನು ಇಟ್ಟುಕೊಳ್ಳದೇ ಇದ್ದ ಬೌಲಿಂಗ್ ಪಡೆಯನ್ನೇ ಉತ್ತಮವಾಗಿ ರೊಟೆಟ್ ಮಾಡಿ ಗೆಲುವು ಕಾಣುತ್ತಿದ್ದಾರೆ. ಪಾಂಡ್ಯ ಸಹ ಕೋಟಾದ ಸಂಪೂರ್ಣ ಓವರ್ ನಿರ್ವಹಿಸದಿದ್ದರೂ, ಎರಡು ಮೂರು ಓವರ್ಗಳನ್ನಷ್ಟೇ ಮಾಡುತ್ತಿದ್ದಾರೆ. ಮಿಕ್ಕಂತೆ ಶಮಿ ಮತ್ತು ಮೋಹಿತ್ ಶರ್ಮಾ ಪ್ರಬಲವಾದ ಬೌಲಿಂಗ್ ಮಾಡಿ ಎದುರಾಳಿಗಳನ್ನು ನಿಯಂತ್ರಿಸುತ್ತಿದ್ದಾರೆ.
7ನೇ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿರುವ ತೆವಾಟಿಯ: ರಾಹುಲ್ ತೆವಾಟಿಯ ಪಂದ್ಯಗಳಲ್ಲಿ ಏಳನೇ ಬ್ಯಾಟರ್ ಆಗಿ ಬರುತ್ತಿದ್ದಾರೆ. ಅವರಿಗೆ ಮೇಲ್ಪಂಕ್ತಿಯಲ್ಲಿ ಸ್ಥಾನ ಸಿಕ್ಕಿದರೆ ತಂಡಕ್ಕೆ ಇನ್ನಷ್ಟೂ ರನ್ ಗಳಿಸುವ ಸಾಧ್ಯತೆ ಇದೆ. ನಿನ್ನೆ ನಡೆದ ಪಂದ್ಯದಲ್ಲಿ ಕೊನೆ 19ನೇ ಓವರ್ನಲ್ಲಿ ಕ್ರೀಸ್ಗೆ ಬಂದ ತೆವಾಟಿಯ 5 ಬಾಲ್ ಎದುರಿಸಿ 3 ಸಿಕ್ಸ್ನಿಂದ 20 ರನ್ ಕಲೆಹಾಕಿದ್ದಾರೆ. ಈ ಆವೃತ್ತಿಯಲ್ಲಿ 7 ಪಂದ್ಯದಲ್ಲಿ 5 ಇನ್ನಿಂಗ್ಸ್ ಆಡಿದ ರಾಹುಲ್ 43ರನ್ ಕಲೆಹಾಕಿದ್ದಾರೆ. ಅವರು ಏಳನೇ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿರುವುದರಿಂದ ಇದುವರೆಗೆ ಕೇವಲ 24 ಬಾಲ್ ಎದುರಿಸಿದ್ದು, ಅದರಲ್ಲಿ 43 ರನ್ ಗಳಿಸಿದ್ದಾರೆ. ಹೆಚ್ಚಿನ ಅವಕಾಶ ಸಿಕ್ಕರೆ ಅವರಿಂದ ಇನ್ನಷ್ಟು ರನ್ ಕೊಡುಗೆ ಸಾಧ್ಯತೆ ಇದೆ.
8ನೇ ಸ್ಥಾನದ ವರೆಗೆ ಬ್ಯಾಟಿಂಗ್ ಗುಜರಾತ್ ಬಲ: ಗುಜರಾತ್ನಲ್ಲಿ ಆರಂಭಿಕರ ಜೊತೆಗೆ 3ರಿಂದ 8ರ ವರೆಗೆ ಘಟಾನುಘಟಿ ಬ್ಯಾಟರ್ಗಳಿದ್ದಾರೆ. ಆರಂಭಿಕ ಶುಭಮನ್ ಗಿಲ್ ನಂತರ, ನಾಯಕ ಹಾರ್ದಿಕ್, ಅಭಿನವ್, ವಿಜಯ್ ಶಂಕರ್, ಮಿಲ್ಲರ್, ತೆವಾಟಿಯಾ ಮತ್ತು ರಶೀದ್ ನಂ.3 ರಿಂದ 8 ವರೆಗೆ ಆಳವಾದ ಬ್ಯಾಟಿಂಗ್ ಮಾಡುವುದರಿಂದ ಟೈಟಾನ್ಸ್ ಈ ಜೋಡಿಗಳಲ್ಲಿ ಯಾವುದಾದರೂ ಒಂದು ಆದರೂ ತಂಡಕ್ಕೆ ಹೆಚ್ಚಿನ ರನ್ ಹರಿದು ಬರುತ್ತದೆ.
ಇದನ್ನೂ ಓದಿ: ಗುಜರಾತ್ ಆಲ್ರೌಂಡ್ ಆಟಕ್ಕೆ ಮುಂಬೈ ಬೆಚ್ಚು: ಹಾರ್ದಿಕ್ ಪಡೆಗೆ 55 ರನ್ಗಳ ಭರ್ಜರಿ ಜಯ