ಧರ್ಮಶಾಲಾ: ಪ್ಲೇಆಫ್ಗೆ ಅರ್ಹತೆ ಪಡೆಯಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲು ಕಾಣುವ ಮೂಲಕ ರೇಸಿಂದ ಹೊರಬಿದ್ದಿತು. ಇತ್ತ ಈಗಾಗಲೇ ಟೂರ್ನಿಯಿಂದಲೇ ಔಟ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ಔಪಚಾರಿಕ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು, ಪಂಜಾಬ್ಗೆ ಭಾರಿ ಶಾಕ್ ನೀಡಿತು. ತನ್ನ ಜೊತೆಗೆ ಪಂಜಾಬ್ ಅನ್ನು ಕೂಡಾ ಮುಳುಗಿಸಿತು.
ಬ್ಯಾಟಿಂಗ್‌ಸ್ನೇಹಿ ಪಿಚ್ನಲ್ಲಿ ಉಭಯ ತಂಡಗಳು ದೊಡ್ಡ ಮೊತ್ತ ದಾಖಲಿಸಿದವು. ಟಾಸ್ ಗೆದ್ದರೂ ಮೊದಲು ಡೆಲ್ಲಿಗೆ ಬ್ಯಾಟಿಂಗ್ ಅವಕಾಶ ನೀಡಿ ಪಂಜಾಬ್ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿತು. ಡ್ರೈ ಪಿಚ್ನ ಸಂಪೂರ್ಣ ಲಾಭ ಪಡೆದ ಡೆಲ್ಲಿ 2 ವಿಕೆಟ್ಗೆ 213 ರನ್ಗಳ ಬೃಹತ್ ಮೊತ್ತ ಪೇರಿಸಿತು. ಲಿಯಾನ್ ಲಿವಿಂಗ್ಸ್ಟೋನ್ ಏಕಾಂಗಿ ಹೋರಾಟ ನಡೆಸಿದಾಗ್ಯೂ ಪಂಜಾಬ್ 15 ರನ್ಗಳಿಂದ ಸೋಲೊಪ್ಪಿಕೊಂಡಿತು.
-
We can confirm that we have no fingernails left after that 𝐖 👍 pic.twitter.com/hJPhJG2l9B
— Delhi Capitals (@DelhiCapitals) May 17, 2023 " class="align-text-top noRightClick twitterSection" data="
">We can confirm that we have no fingernails left after that 𝐖 👍 pic.twitter.com/hJPhJG2l9B
— Delhi Capitals (@DelhiCapitals) May 17, 2023We can confirm that we have no fingernails left after that 𝐖 👍 pic.twitter.com/hJPhJG2l9B
— Delhi Capitals (@DelhiCapitals) May 17, 2023
ಶತಕ ತಪ್ಪಿಸಿಕೊಂಡ ಸ್ಟೋನ್: ಗೆಲುವು ಅನಿವಾರ್ಯವಾಗಿದ್ದ ಪಂಜಾಬ್ಗೆ ಆಲ್ರೌಂಡರ್ ಲಿಯಾನ್ ಲಿವಿಂಗ್ಸ್ಟೋನ್ ದೊಡ್ಡ ಬಲ ನೀಡಿದರು. ದೊಡ್ಡ ಮೊತ್ತ ಹೊರತಾಗಿಯೂ ಬಿಡುಬೀಸಾಗಿ ಬ್ಯಾಟ್ ಮಾಡಿದ ಬ್ಯಾಟರ್ ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದರು. 94 ರನ್ ಗಳಿಸಿ ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಲಿಯಾನ್ ಔಟಾಗಿ, ಅದೃಷ್ಟವಿರದ ಕಾರಣ ಗೆಲುವು ಮತ್ತು ಶತಕದಿಂದ ತಪ್ಪಿಸಿಕೊಂಡರು.
ಪಂಜಾಬ್ ಇನಿಂಗ್ಸ್ ಆರಂಭ ಕೂಡ ಉತ್ತಮವಾಗಿರಲಿಲ್ಲ. ಮೊದಲ ಎಸೆತದಲ್ಲೇ ನಾಯಕ ಶಿಖರ್ ಧವನ್ ಸೊನ್ನೆ ಸುತ್ತಿದರು. ಪ್ರಭ್ಶಿಮ್ರಾನ್ ಸಿಂಗ್ 22 ರನ್ಗೆ ವಿಕೆಟ್ ನೀಡಿದರು. ಇದು ತಂಡದ ರನ್ಗೆ ಪೆಟ್ಟು ನೀಡಿತು. ಬಳಿಕ ಜೊತೆಯಾದ ಅಥರ್ವ್ ಟಾಯ್ಡೆ, ಲಿಯಾನ್ ಲಿವಿಂಗ್ಸ್ಟೋನ್ ಭರ್ಜರಿ ಇನಿಂಗ್ಸ್ ಕಟ್ಟಿದರು. 78 ರನ್ಗಳ ಜೊತೆಯಾಟದ ವೇಳೆ ಅಥರ್ವ್ ಗಾಯಗೊಂಡು ನಿರ್ಗಮಿಸಿದರು. ಅದಾಗಲೇ ಬ್ಯಾಟರ್ 55 ರನ್ ಮಾಡಿದ್ದರು. ಬಳಿಕ ಯಾವೊಬ್ಬ ಬ್ಯಾಟರ್ ರನ್ ಗಳಿಸಲಿಲ್ಲ.
ಫಲ ನೀಡದ ಏಕಾಂಗಿ ಹೋರಾಟ: ಲಿಯಾನ್ ಒಂದೆಡೆ ಅಬ್ಬರಿಸುತ್ತಿದ್ದರೆ, ಇತ್ತ ಉಳಿದ ಬ್ಯಾಟರ್ಗಳು ನೆಲಕಚ್ಚಿದರು. ಜಿತೇಶ್ ಶರ್ಮಾ, ಶಾರೂಖ್ ಖಾನ್, ಸ್ಯಾಮ್ ಕರ್ರನ್, ಹರ್ಪ್ರೀತ್ ಬ್ರಾರ್ ಎಲ್ಲರೂ ಒಂದಂಕಿ ಮಾತ್ರ ಗಳಿಸಿದರು. ಲಿಯಾನ್ ಲಿವಿಂಗ್ಸ್ಟೋನ್ ಕೊನೆಯವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದರು. ಇಶಾಂತ್ ಶರ್ಮಾ ಎಸೆದ ಕೊನೆಯ ಓವರ್ನಲ್ಲಿ 34 ರನ್ ಅಗತ್ಯವಿದ್ದಾಗ, 2 ಸಿಕ್ಸರ್ 1 ಬೌಂಡರಿ ಬಾರಿಸಿದ ಸ್ಟೋನ್ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದರು. ಬಳಿಕದ ಮೂರು ಎಸೆತಗಳಲ್ಲಿ ಒಂದೂ ರನ್ ಬರದೇ ಲಿಯಾನ್ ಔಟಾಗುವ ಮೂಲಕ 15 ರನ್ಗಳಿಂದ ಸೋಲುವ ಮೂಲಕ ಪ್ಲೇಆಫ್ ರೇಸ್ನಿಂದ ಹೊರಬಿದ್ದಿತು.
ಡೆಲ್ಲಿ ಬ್ಯಾಟಿಂಗ್ ಖದರ್: ಔಪಚಾರಿಕ ಪಂದ್ಯವಾಗಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿತು. ಅದರಲ್ಲೂ ಮೊದಲ ನಾಲ್ವರು ಬ್ಯಾಟರ್ಗಳೇ ಅಬ್ಬರಿಸಿ ತಂಡ 213 ರನ್ ಗಳಿಸುವಂತೆ ಮಾಡಿದರು. ನಾಯಕ ವಾರ್ನರ್ 46, ಹಲವು ದಿನಗಳ ಬಳಿಕ ತಂಡಕ್ಕೆ ವಾಪಸಾದ ಪೃಥ್ವಿ ಶಾ 54, ರನ್ ಮಾಡಿ ಉತ್ತಮ ಆರಂಭ ನೀಡಿದರೆ, ರಿಲೇ ರೊಸ್ಸೌ ತಲಾ 6 ಬೌಂಡರಿ, ಸಿಕ್ಸರ್ನಿಂದ ಔಟಾಗದೇ 82 ರನ್ ಚಚ್ಚಿದರು. ಫಿಲ್ ಸಾಲ್ಟ್ 26 ರನ್ ಗಳಿಸಿದರು.
ಇದನ್ನೂ ಓದಿ: ಗಾಯದ ನಡುವೆಯೂ ಆಡಿ ಪಂದ್ಯ ಗೆಲ್ಲಿಸಿದ ಕೃನಾಲ್: ಪಂದ್ಯದ ಮಹತ್ವ ಅರಿತ ನಾಯಕ