ETV Bharat / sports

'ಸ್ಪೀಡ್ ಸೆ ಕುಚ್ ನಹೀ ಹೋತಾ'.. ಉಮ್ರಾನ್ ಮಲಿಕ್​ ಬೌಲಿಂಗ್​​ ಬಗ್ಗೆ ಪಾಕ್​ ವೇಗಿ ಹೀಗೆ ಹೇಳಿದ್ಯಾಕೆ?

ಕೇವಲ ವೇಗವಾಗಿ ಬೌಲಿಂಗ್ ಮಾಡುವುದರಿಂದ ಏನೂ ಮಾಡಲು ಸಾಧ್ಯವಿಲ್ಲ. ವೇಗದ ಜೊತೆಗೆ ಲೈನ್​, ಲೆಂತ್​ ಅತಿ ಅವಶ್ಯಕವಾಗಿರುತ್ತದೆ ಎಂದು ಪಾಕಿಸ್ತಾನದ ಬೌಲರ್ ಉಮ್ರಾನ್ ಮಲಿಕ್ ತಿಳಿಸಿದ್ದಾರೆ.

Umran Malik
Umran Malik
author img

By

Published : Jun 4, 2022, 1:04 PM IST

ಇಸ್ಲಾಮಾಬಾದ್​: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಅತ್ಯದ್ಭುತ ಬೌಲಿಂಗ್​ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಜಮ್ಮು- ಕಾಶ್ಮೀರ ವೇಗದ ಬೌಲರ್​ ಉಮ್ರಾನ್ ಮಲಿಕ್​​ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಆದರೆ, ಅವರ ಬೌಲಿಂಗ್ ಶೈಲಿ ಬಗ್ಗೆ ಪಾಕಿಸ್ತಾನದ ವೇಗದ ಬೌಲರ್ ಮಾತನಾಡಿದ್ದು, ಸ್ಪೀಡ್​​ ಸೆ ಕುಚ್​ ನಹೀ ಹೋತಾ(ವೇಗದಿಂದ ಏನು ಸಾಧ್ಯವಿಲ್ಲ) ಎಂದು ಹೇಳಿದ್ದಾರೆ.

Pakistan fast bowler Shaheen Afridi
ಪಾಕಿಸ್ತಾನದ ವೇಗಿ ಶಾಹಿನ್ ಅಫ್ರಿದಿ

ಪಾಕಿಸ್ತಾನದ ವೇಗದ ಬೌಲರ್ ಶಾಹೀನ್​ ಅಫ್ರಿದಿ ಮಾತನಾಡಿದ್ದು, ಲೈನ್​, ಲೆಂತ್​​​ ಮತ್ತು ಸ್ವಿಂಗ್ ಇಲ್ಲದೇ ವೇಗವಾಗಿ ಬೌಲಿಂಗ್ ಮಾಡುವುದು ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: IPLನಲ್ಲಿ ತಮ್ಮದೇ ದಾಖಲೆ ಬ್ರೇಕ್ ಮಾಡಿದ ಉಮ್ರಾನ್ ಮಲಿಕ್​.. 157ಕಿ.ಮೀ ವೇಗದಲ್ಲಿ ‘ಜಮ್ಮು ಎಕ್ಸ್​ಪ್ರೆಸ್​​​’ ಬೌಲಿಂಗ್!

ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್​ ಅಫ್ರಿದಿ, ಮೂರು ಮಾದರಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಸ್ವಿಂಗ್ ಮತ್ತು ಉತ್ತಮ ಲೈನ್​​ನಿಂದಾಗಿ ಜಗತ್ತಿನಾದ್ಯಂತ ಅನೇಕ ಬ್ಯಾಟರ್​​ಗಳ ಪಾಲಿಗೆ ವಿಲನ್​ ಆಗಿದ್ದಾರೆ. ​ಕೇವಲ ವೇಗವಾಗಿ ಬೌಲಿಂಗ್​ ಎಸೆಯುವುದರಿಂದ ಯಾವುದೇ ಪ್ರಯೋಜನವಾಗಲ್ಲ. ನಮ್ಮಲ್ಲಿ ಉತ್ತಮ ಲೈನ್​, ಲೆಂತ್​ ಮತ್ತು ಸ್ವಿಂಗ್​ ಇರಬೇಕು. ಇಲ್ಲದಿದ್ದರೆ ಎದುರಾಳಿ ಬ್ಯಾಟರ್​ಗಳ ವಿಕೆಟ್ ಪಡೆದುಕೊಳ್ಳಲು ಸಾಧ್ಯವಾಗಲ್ಲ ಎಂದರು.

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡದ ಪರ ಆಡಿರುವ ಉಮ್ರಾನ್ ಮಲಿಕ್ 22 ವಿಕೆಟ್ ಪಡೆದು, ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಪ್ರತಿ ಗಂಟೆಗೆ 157 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ಐಪಿಎಲ್​​ನಲ್ಲಿ ಶರವೇಗದ ಬೌಲಿಂಗ್ ಮಾಡುವ​ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.