ಹೈದರಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ಘೋಷಣೆಯಾಗಿದ್ದು, ಬರೋಬ್ಬರಿ 3 ವರ್ಷಗಳ ನಂತರ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅತ್ಯುತ್ತಮ ಪ್ರದರ್ಶನದ ಹೊರತಾಗಿ ಕೂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವಕಾಶ ವಂಚಿತರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.
-
Things will change soon 🇮🇳🧿
— Nitish Rana (@NitishRana_27) May 22, 2022 " class="align-text-top noRightClick twitterSection" data="
">Things will change soon 🇮🇳🧿
— Nitish Rana (@NitishRana_27) May 22, 2022Things will change soon 🇮🇳🧿
— Nitish Rana (@NitishRana_27) May 22, 2022
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಸ್ಟಾರ್ ಬ್ಯಾಟರ್ ನಿತೀಶ್ ರಾಣಾ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ, ಅವರಿಗೆ ಬಿಸಿಸಿಐ ಮಣೆ ಹಾಕದೇ ಸ್ಫೋಟಕ ಬ್ಯಾಟರ್ ದಿನೇಶ್ ಕಾರ್ತಿಕ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾಗೆ ಅವಕಾಶ ನೀಡಿದೆ. ಹೀಗಾಗಿ, ಮನನೊಂದಿರುವ ರಾಣಾ, ಶೀಘ್ರದಲ್ಲೇ ಕೆಲ ಬದಲಾವಣೆ (Things will change soon) ಎಂದು ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾ ಪರ ಕಳೆದ ವರ್ಷ ಶ್ರೀಲಂಕಾದಲ್ಲಿ ನಡೆದ ಟಿ-20 ಸರಣಿಯಲ್ಲಿ ಆಡಿದ್ದ ರಾಣಾ ಇದೀಗ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ, ಇದೇ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ನಲ್ಲಿ ಚಾನ್ಸ್ ಪಡೆದುಕೊಳ್ಳುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ, ರಾಣಾ ನಿರಾಸೆಗೊಂಡಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಕೆಕೆಆರ್ ಪರ ಆಡಿರುವ ನಿತೀಶ್ ರಾಣಾ 14 ಪಂದ್ಯಗಳಿಂದ 361ರನ್ಗಳಿಕೆ ಮಾಡಿದ್ದು, ಕೆಲವೊಂದು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
'ನೀವು, ನಿಮ್ಮನ್ನ ನಂಬಿದರೆ, ಎಲ್ಲವೂ ಸರಿಯಾಗಿ ಸಾಗುತ್ತದೆ' ಎಂದ ಕಾರ್ತಿಕ್: ಬರೋಬ್ಬರಿ 3 ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡಿರುವ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ವಿಶೇಷ ರೀತಿಯಲ್ಲಿ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. 'ನೀವು ನಿಮ್ಮನ್ನ ನಂಬಿದರೆ, ಎಲ್ಲವೂ ಸರಿಯಾಗಿ ನಡೆಯುತ್ತದೆ. ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ನಂಬಿಕೆಗಳಿಗೆ ಧನ್ಯವಾದಗಳು. ನನ್ನ ಕಠಿಣ ಪರಿಶ್ರಮ ಮುಂದುವರೆಯಲಿದೆ' ಎಂದಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಪರ ಅಬ್ಬರಿಸಲು ತಾವು ಸಿದ್ಧ ಇರುವುದಾಗಿ ಹೇಳಿಕೊಂಡಿದ್ದಾರೆ.
-
If you believe yourself, everything will fall into place! ✨
— DK (@DineshKarthik) May 22, 2022 " class="align-text-top noRightClick twitterSection" data="
Thank you for all the support and belief...the hard work continues... pic.twitter.com/YlnaH9YHW1
">If you believe yourself, everything will fall into place! ✨
— DK (@DineshKarthik) May 22, 2022
Thank you for all the support and belief...the hard work continues... pic.twitter.com/YlnaH9YHW1If you believe yourself, everything will fall into place! ✨
— DK (@DineshKarthik) May 22, 2022
Thank you for all the support and belief...the hard work continues... pic.twitter.com/YlnaH9YHW1
ಇದನ್ನೂ ಓದಿ: 2ನೇ ಮಗುವಿನ ತಂದೆಯಾದ ಕೇನ್ ವಿಲಿಯಮ್ಸನ್.. ಗಂಡು ಮಗುವಿಗೆ ಜನ್ಮ ನೀಡಿದ ಸಾರಾ
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ದಿನೇಶ್ ಕಾರ್ತಿಕ್, ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಬ್ಯಾಟ್ ಬೀಸುತ್ತಿದ್ದು, ಅನೇಕ ಮಹತ್ವದ ಇನ್ನಿಂಗ್ಸ್ ಆಡಿದ್ದಾರೆ. ಇದರ ಮಧ್ಯೆ ಆಯ್ಕೆ ಸಮಿತಿ ಗಮನ ಸೆಳೆದು ಮರಳಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ, ಆಯ್ಕೆ ಸಮಿತಿಗೂ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋ ತುಣುಕವೊಂದನ್ನ ಆರ್ಸಿಬಿ ತನ್ನ ಟ್ವೀಟರ್ ಅಕೌಂಟ್ನಲ್ಲಿ ಹಾಕಿಕೊಂಡಿದೆ.
-
We spoke to @DineshKarthik, soon after he was named in the Indian T20I squad for the SA series, and he spoke about his self-belief, hours and days of preparation, and the role RCB played in him staging a comeback, only on @KreditBee presents Bold Diaries.#PlayBold #TeamIndia pic.twitter.com/phW0GaBlSx
— Royal Challengers Bangalore (@RCBTweets) May 23, 2022 " class="align-text-top noRightClick twitterSection" data="
">We spoke to @DineshKarthik, soon after he was named in the Indian T20I squad for the SA series, and he spoke about his self-belief, hours and days of preparation, and the role RCB played in him staging a comeback, only on @KreditBee presents Bold Diaries.#PlayBold #TeamIndia pic.twitter.com/phW0GaBlSx
— Royal Challengers Bangalore (@RCBTweets) May 23, 2022We spoke to @DineshKarthik, soon after he was named in the Indian T20I squad for the SA series, and he spoke about his self-belief, hours and days of preparation, and the role RCB played in him staging a comeback, only on @KreditBee presents Bold Diaries.#PlayBold #TeamIndia pic.twitter.com/phW0GaBlSx
— Royal Challengers Bangalore (@RCBTweets) May 23, 2022