ETV Bharat / sports

IPL: ವಾಂಖೆಡೆಯಲ್ಲಿ 'ಸೂರ್ಯ' ಶಿಖಾರಿ​; ಮುಂಬೈಗೆ ಮಣಿದು ಪ್ಲೇ ಆಫ್‌ ಸಂಕಷ್ಟಕ್ಕೆ ಸಿಲುಕಿದ ಆರ್​ಸಿಬಿ - Etv Bharat Kannada

ವಾಂಖೆಡೆಯಲ್ಲಿ ನಡೆದ ಆರ್​ಸಿಬಿ ವಿರುದ್ಧದ IPL ಪಂದ್ಯದಲ್ಲಿ ಮುಂಬೈ 6 ವಿಕೆಟ್​ಗಳ ಗೆಲುವು ಸಾಧಿಸಿತು.

ಆರ್​ಸಿಬಿ ವಿರುದ್ಧ ಮುಂಬೈ ಗೆಲುವು
ಆರ್​ಸಿಬಿ ವಿರುದ್ಧ ಮುಂಬೈ ಗೆಲುವು
author img

By

Published : May 10, 2023, 8:29 AM IST

ಮುಂಬೈ: ಐಪಿಎಲ್ 2023ರ ಋತುವಿನ ಆರಂಭದಲ್ಲಿ ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಇಂಡಿಯನ್ಸ್ ಇದೀಗ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿದೆ. ಮಂಗಳವಾರ ರಾತ್ರಿ ನಡೆದ ರಾಯಲ್​ ಚಾಲೆಂಜರ್ಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಜಯಭೇರಿ ಬಾರಿಸಿದೆ.

ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಟಾಸ್​ ಗೆದ್ದ ರೋಹಿತ್​ ಪಡೆ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ನೀಡಿದ 200 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ್ದ ಮುಂಬೈ 16.3 ಓವರ್​ಗಳಲ್ಲೇ ತಲುಪಿ ಗೆಲುವಿನ ಕೇಕೆ ಹಾಕಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ (35 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಹಿತ 83 ರನ್), ನೇಹಾಲ್​ ವಡೇರಾ (34 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಸಹಿತ ಅಜೇಯ 52 ರನ್​) ಬಿರುಸಿನ ಪ್ರದರ್ಶನ ತೋರಿದರು. ಸೂರ್ಯ ಕುಮಾರ್​ ಮತ್ತು ವಧೇರಾ ಮೂರನೇ ವಿಕೆಟ್​ಗೆ 140 ರನ್​ಗಳ ಜೊತೆಯಾಟವಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆರಂಭಿಕ ಬ್ಯಾಟರ್​ ಇಶಾನ್​ ಕಿಶನ್​ ತಂಡಕ್ಕೆ ಉತ್ತಮ ಆರಂಭ ನೀಡಿದರು. 21 ಎಸೆತಗಳನ್ನು ಎದುರಿಸಿದ ಕಿಶನ್ 42 ರನ್ ಕಲೆ ಹಾಕುವ ಮೂಲಕ ಅಬ್ಬರಿಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತ್ತು.

ಆರಂಭದಲ್ಲೇ ಹಿನ್ನಡೆ: ಆರಂಭದಲ್ಲೇ ಫಾಪ್​ ಬಳಗ ಹಿನ್ನಡೆ ಅನುಭವಿಸಿತು. ಆರಂಭಿಕ ವಿರಾಟ್​ ಕೊಹ್ಲಿ ಕೇವಲ ಒಂದು ರನ್ ಗಳಿಸಿ ಬೆಹ್ರೆನ್‌ಡಾರ್ಫ್ ಬೌಲಿಂಗ್‌ನಲ್ಲಿ ಔಟಾದರು. ಇದಾದ ಬೆನ್ನಲ್ಲೇ ಜೇಸನ್ ಬೆಹ್ರೆಂಡಾರ್ಫ್ ಅನುಜ್ ರಾವತ್ ಅವರ ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾದರು. ಕೇವಲ 16 ರನ್​ಗಳಲ್ಲೇ ಎರಡು ನಿರ್ಣಾಯಕ ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು.

ಡುಪ್ಲೆಸಿ, ಮ್ಯಾಕ್ಸ್​ ಅಬ್ಬರ: ಇದೇ ವೇಳೆ ತಂಡ ಸೇರಿಕೊಂಡ ಮ್ಯಾಕ್ಸ್​ವೆಲ್​, ಡು ಪ್ಲೆಸಿಸ್ ಅವರೊಂದಿಗೆ ಉತ್ತಮ ಇನ್ನಿಂಗ್ಸ್​ ಕಟ್ಟಿದ್ದರು. ಇಬ್ಬರು ಬ್ಯಾಟರ್​ಗಳು ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ, ಮೂರನೇ ವಿಕೆಟ್‌ಗೆ 120 ರನ್ ಜತೆಯಾಟವಾಡಿದರು. 33 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್​ವೆಲ್​ 4 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 68 ರನ್​ ಕೊಡುಗೆ ನೀಡಿದರು. ಮತ್ತೊಂದೆಡೆ, ಡು ಪ್ಲೆಸಿಸ್ (65) ಸಮಯೋಚಿತ ಆಟವಾಡಿ ತಂಡಕ್ಕೆ ಆಸರೆಯಾದರು.

ಸ್ಕೋರ್​ ಕಾರ್ಡ್​ ವಿವರ- ಆರ್​ಸಿಬಿ: ಫಾಪ್​ ಡುಪ್ಲೆಸಿಸ್​ (65), ಮ್ಯಾಕ್ಸ್​ವೆಲ್​ (68), ದಿನೇಶ್​ ಕಾರ್ತಿಕ್​ (30), ಕೇದಾರ್​ ಜಾಧವ್​ (12), ಹಸರಂಗ (12), ಅನುಜ್​ ರಾವತ್​ (6), ಕೊಹ್ಲಿ (1), ಲಾಮ್ರೋರ್​ (1)

ಬೌಲಿಂಗ್​: ಬೆಹ್ರೆಂಡ್ರಾಫ್​ (36/3), ಗ್ರೀನ್​, ಜೋರ್ಡನ್​, ಕಾರ್ತಿಕೇಯಾ ತಲಾ ಒಂದು ವಿಕೆಟ್​

ಮುಂಬೈ ಇಂಡಿಯನ್ಸ್​: ಇಶಾನ್​ ಕಿಶನ್​ (42), ರೋಹಿತ್​ ಶರ್ಮಾ (7), ಸೂರ್ಯಕುಮಾರ್​ ಯಾದವ್​ (83), ವಧೇರಾ (52), ಗ್ರೀನ್​ (2)

ಬೌಲಿಂಗ್​: ಹಸರಂಗ (53/2), ವೈಶಾಕ್ (37/2).

ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ ದೀಪಕ್, ನಿಶಾಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.