ಮುಂಬೈ (ಮಹಾರಾಷ್ಟ್ರ): ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ನ 12ನೇ ಪಂದ್ಯ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿದ್ದಾರೆ. ಚೆನ್ನೈ ಈವರೆಗೆ ಒಂದು ಸೋಲು ಒಂದು ಗೆಲುವು ಕಂಡಿದ್ದರೆ, ಮುಂಬೈ ಪ್ರಥಮ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತಿದ್ದು, ಇಂದು ತವರಿನಲ್ಲಿ ಎರಡನೇ ಪಂದ್ಯ ಗೆಲ್ಲುವ ಗುರಿ ಹೊಂದಿದೆ.
ಚೆನ್ನೈ ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು, ಬೆನ್ ಸ್ಟೋಕ್ಸ್ ಗಾಯ ಕಾರಣ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮೋಯಿನ್ ಅಲಿ ಸಹ ಈ ಪಂದ್ಯವನ್ನು ಆಡುತ್ತಿಲ್ಲ ಅವರ ಬದಲಿಯಾಗಿ ಅಜಿಂಕ್ಯ ರೆಹಾನೆ ಮತ್ತು ಪ್ರಿಟೋರಿಯಸ್ ಕಣಕ್ಕಿಳಿಯುತ್ತಿದ್ದಾರೆ. ಮುಂಬೈನ ಜೋಫ್ರಾ ಆರ್ಚರ್ ಸಹ ಗಾಯಕ್ಕೆ ತುತ್ತಾಗಿದ್ದು, ಗಂಭೀರತೆಗೂ ಮೊದಲು ರೆಸ್ಟ್ ನೀಡಲಾಗಿದೆ ಎಂದು ನಾಯಕ ರೋಹಿತ್ ತಿಳಿಸಿದ್ದಾರೆ.
ಎರಡು ಸೀಸನ್ನಲ್ಲಿ ವಿಫಲತೆ ಎದುರಿಸುತ್ತಿರುವ ಉಭಯ ತಂಡಗಳು: 2022ರ ಆವೃತ್ತಿಯಲ್ಲಿ ಚೆನ್ನೈ 9 ಹಾಗೂ ಮುಂಬೈ ಇಂಡಿಯನ್ಸ್ 10ನೇ ಸ್ಥಾನವನ್ನು ಅಂಕಪಟ್ಟಿಯಲ್ಲಿ ಗಳಿಸಿತ್ತು. 14 ಪಂದ್ಯದಲ್ಲಿ ಉಭಯ ತಂಡಗಳು ಕೇವಲ 4ರಲ್ಲಿ ಮಾತ್ರ ಗೆಲುವು ಸಾಧಿಸಿದ್ದವು. 15 ವರ್ಷದ ಐಪಿಎಲ್ನಲ್ಲಿ ಇತ್ತಂಡಗಳು ಅತೀ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆಯನ್ನು ಹೊಂದಿವೆ. ಮುಂಬೈ ಐದು ಬಾರಿ ಜಯಿಸಿದ್ದರೆ, ಚೆನ್ನೈ 4 ಬಾರಿ ಚಾಂಪಿಯನ್ ಆಗಿದೆ. ಆದರೆ ಈಗ ಎರಡೂ ತಂಡ ತನ್ನ ಚಾರ್ಮ್ಅನ್ನು ಕಳೆದುಕೊಂಡಿದೆ.
-
🚨 Toss Update from Mumbai 🚨@ChennaiIPL win the toss and elect to bowl first against @mipaltan.
— IndianPremierLeague (@IPL) April 8, 2023 " class="align-text-top noRightClick twitterSection" data="
Follow the match ▶️ https://t.co/rSxD0lf5zJ#TATAIPL | #MIvCSK pic.twitter.com/FqztysI3wn
">🚨 Toss Update from Mumbai 🚨@ChennaiIPL win the toss and elect to bowl first against @mipaltan.
— IndianPremierLeague (@IPL) April 8, 2023
Follow the match ▶️ https://t.co/rSxD0lf5zJ#TATAIPL | #MIvCSK pic.twitter.com/FqztysI3wn🚨 Toss Update from Mumbai 🚨@ChennaiIPL win the toss and elect to bowl first against @mipaltan.
— IndianPremierLeague (@IPL) April 8, 2023
Follow the match ▶️ https://t.co/rSxD0lf5zJ#TATAIPL | #MIvCSK pic.twitter.com/FqztysI3wn
ಐಪಿಎಲ್ಗೆ ಗಾಯದ ಬರೆ: ಇತ್ತೀಚೆಗೆ ಚೇತರಿಸಿಕೊಂಡು ತಂಡ ಸೇರಿರುವ ಜೋಫ್ರಾ ಆರ್ಚರ್ ಗಾಯಕ್ಕೆ ತುತ್ತಾಗಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಅದರ ಜೊತೆಗೆ ಗಂಭೀರತೆ ಪಡೆದುಕೊಳ್ಳುವ ಮೊದಲು ಮುನ್ನೆಚ್ಚರಿಕೆಯ ಕ್ರಮವಾಗಿ ವಿಶ್ರಾಂತಿ ನೀಡಿರುವುದಾಗಿ ತಿಳಿಸಿದ್ದಾರೆ. ಚೆನ್ನೈ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಹ ಗಾಯಕ್ಕೊಳಗಾಗಿದ್ದಾರೆ ಎಂದು ಧೋನಿ ಹೇಳಿದ್ದು, ಈ ಕಾರಣ ಇಂದು ಅವರೂ ಆಡುತ್ತಿಲ್ಲ.
ತಂಡಗಳು ಇಂತಿವೆ..: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಟ್ರಿಸ್ಟಾನ್ ಸ್ಟಬ್ಸ್, ಅರ್ಷದ್ ಖಾನ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್
ಮುಂಬೈ ಇಂಡಿಯನ್ಸ್ ಸಬ್ಸ್: ರಮಣದೀಪ್ ಸಿಂಗ್, ಸಂದೀಪ್ ವಾರಿಯರ್, ಅರ್ಜುನ್ ತೆಂಡೂಲ್ಕರ್, ಕುಮಾರ್ ಕಾರ್ತಿಕೇಯ, ನೆಹಾಲ್ ವಧೇರಾ
ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್/ನಾಯಕ), ಶಿವಂ ದುಬೆ, ಡ್ವೈನ್ ಪ್ರಿಟೋರಿಯಸ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ಸಿಸಂದಾ ಮಗಳಾ, ತುಷಾರ್ ದೇಶಪಾಂಡೆ
ಪ್ರಭಾವಿ ಆಟಗಾರರು: ರಾಜವರ್ಧನ್ ಹಂಗರ್ಗೇಕರ್, ಅಂಬಟಿ ರಾಯುಡು, ಶೇಕ್ ರಶೀದ್, ಆಕಾಶ್ ಸಿಂಗ್, ಸುಭ್ರಾಂಶು ಸೇನಾಪತಿ
ಇದನ್ನೂ ಓದಿ: ಟ್ವಿಟರ್ನಲ್ಲಿ ಟ್ರೆಂಡ್ ಆದ ಕಾವ್ಯ ಮಾರನ್: ಸೋತರೂ ಒಡತಿಯ ಸಂಭ್ರಮ ಟಾಪ್