ದುಬೈ(ಯುಎಇ): ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಟಿ-20 ಕ್ರಿಕೆಟ್ನಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ಅವರು ಈ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿರುವ ಮೊದಲ ಕ್ಯಾಪ್ಟನ್ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದಾರೆ.
-
We #Yellove you 300* Thala 💛#CSKvKKR #WhistlePodu 🦁 pic.twitter.com/q7wgnxmKTT
— Chennai Super Kings - Mask P😷du Whistle P🥳du! (@ChennaiIPL) October 15, 2021 " class="align-text-top noRightClick twitterSection" data="
">We #Yellove you 300* Thala 💛#CSKvKKR #WhistlePodu 🦁 pic.twitter.com/q7wgnxmKTT
— Chennai Super Kings - Mask P😷du Whistle P🥳du! (@ChennaiIPL) October 15, 2021We #Yellove you 300* Thala 💛#CSKvKKR #WhistlePodu 🦁 pic.twitter.com/q7wgnxmKTT
— Chennai Super Kings - Mask P😷du Whistle P🥳du! (@ChennaiIPL) October 15, 2021
ಕ್ಯಾಪ್ಟನ್ ಆಗಿ ಧೋನಿ ಇಲ್ಲಿಯವರೆಗೆ 300 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ಜೈಂಟ್ಸ್, ಚಾಂಪಿಯನ್ ಲೀಗ್, ಏಷ್ಯಾ ಕಪ್ ಹಾಗೂ ಟಿ-20 ವಿಶ್ವಕಪ್ನಲ್ಲಿ ತಂಡದ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡು ಈ ಸಾಧನೆ ಮಾಡಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ನ ಡೆರೆನ್ ಸಾಮಿ ಸನ್ರೈಸರ್ಸ್ ಹೈದರಾಬಾದ್, ವೆಸ್ಟ್ ಇಂಡೀಸ್, ವೆಸ್ಟ್ ಇಂಡೀಸ್ 11, ಪೇಶಾವರ್ ಜಲ್ಮಿ, ರಾಜಾಶಿ ಕಿಂಗ್ಸ್, ಟೈಟಾನ್ಸ್ ಸೇರಿದಂತೆ ಅನೇಕ ತಂಡಗಳ ನಾಯಕರಾಗಿ 208 ಪಂದ್ಯಗಳಲ್ಲಿ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದರು. ಇದಾದ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಒಟ್ಟು 185 ಪಂದ್ಯಗಳಲ್ಲಿ ನಾಯಕನಾಗಿ ತಂಡ ಮುನ್ನಡೆಸಿದ್ದಾರೆ.
-
The Super Kings Going Miles together 🦁#CSKvKKR #WhistlePodu #Yellove 💛 pic.twitter.com/fQivdaXwDG
— Chennai Super Kings - Mask P😷du Whistle P🥳du! (@ChennaiIPL) October 15, 2021 " class="align-text-top noRightClick twitterSection" data="
">The Super Kings Going Miles together 🦁#CSKvKKR #WhistlePodu #Yellove 💛 pic.twitter.com/fQivdaXwDG
— Chennai Super Kings - Mask P😷du Whistle P🥳du! (@ChennaiIPL) October 15, 2021The Super Kings Going Miles together 🦁#CSKvKKR #WhistlePodu #Yellove 💛 pic.twitter.com/fQivdaXwDG
— Chennai Super Kings - Mask P😷du Whistle P🥳du! (@ChennaiIPL) October 15, 2021
ಜಡೇಜಾ, ಡುಪ್ಲೆಸಿಸ್, ರಾಯುಡು ಸಾಧನೆ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಜಡೇಜಾ, ಬ್ಯಾಟರ್ ರಾಯುಡು ಹಾಗೂ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ ಕೂಡ ಹೊಸದೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಆಲ್ರೌಂಡರ್ ಜಡೇಜಾ ಐಪಿಎಲ್ನಲ್ಲಿ 200ನೇ ಪಂದ್ಯವನ್ನಾಡುತ್ತಿದ್ದು, ರಾಯುಡು 175ನೇ ಐಪಿಎಲ್ ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಉಳಿದಂತೆ ಡುಪ್ಲೆಸಿಸ್ 100ನೇ ಐಪಿಎಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಆವೃತ್ತಿಯಲ್ಲಿ ಡುಪ್ಲೆಸಿಸ್ 15 ಪಂದ್ಯಗಳಿಂದ 547ರನ್ ಹಾಗೂ ಜಡೇಜಾ 227ರನ್ ಜೊತೆಗೆ 11 ವಿಕೆಟ್ ಪಡೆದುಕೊಂಡಿದ್ದಾರೆ.