ETV Bharat / sports

ಧೋನಿ ಬಳಿಕ ಚೆನ್ನೈ ತಂಡಕ್ಕೆ ನಾಯಕನಾರು? ರೇಸ್​ನಲ್ಲಿ ಬೆನ್​ ಸ್ಟೋಕ್ಸ್​, ಮೊಯಿನ್​​ ಅಲಿ, ಗಾಯಕ್ವಾಡ್​

ಚೆನ್ನೈ ಸೂಪರ್​ ಕಿಂಗ್ಸ್ ತಂಡ ಎಂಎಸ್ ಧೋನಿ ಬಳಿಕ ಹೊಸ ನಾಯಕನ ಹುಡುಕಾಟ ಆರಂಭಿಸಿದೆ. ಬೆನ್​ ಸ್ಟೋಕ್ಸ್​, ಮೊಯಿನ್​​ ಅಲಿ, ಋತುರಾಜ್​ ಗಾಯಕ್ವಾಡ್​ ರೇಸ್​ನಲ್ಲಿದ್ದಾರೆ.

ಧೋನಿ ಬಳಿಕ ಚೆನ್ನೈ ತಂಡಕ್ಕೆ ನಾಯಕನಾರು
ಧೋನಿ ಬಳಿಕ ಚೆನ್ನೈ ತಂಡಕ್ಕೆ ನಾಯಕನಾರು
author img

By

Published : Apr 8, 2023, 2:54 PM IST

ಮುಂಬೈ(ಮಹಾರಾಷ್ಟ್ರ): 4 ಬಾರಿಯ ಐಪಿಎಲ್​ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪರ್ಯಾಯ ನಾಯಕನ ಹುಡುಕಾಟ ಆರಂಭಿಸಿದೆ. ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ನಂತರ ನೂತನ ನಾಯಕ ಯಾರಾಗಬೇಕು ಎಂಬುದನ್ನು ತಂಡ ಈಗಲೇ ಲೆಕ್ಕಾಚಾರ ಹಾಕುತ್ತಿದೆ.

ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಸೀಸನ್ 2023 ರ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆಯುತ್ತಾರೆ ಎಂದು ಹೇಳಲಾಗಿದೆ. ಅವರ ಸ್ಥಾನಕ್ಕೆ ಮೂವರು ಪ್ರಮುಖ ಆಟಗಾರರ ಹೆಸರು ಕೇಳಿಬಂದಿದೆ. ಇಂಗ್ಲೆಂಡ್​ ಸ್ಪಿನ್ನರ್​ ಮೊಯಿನ್​ ಅಲಿ, ಆಲ್​ರೌಂಡರ್​ ಬೆನ್​ಸ್ಟೋಕ್ಸ್​ ಮತ್ತು ಋತುರಾಜ್ ಗಾಯಕ್ವಾಡ್ ಈ ರೇಸ್​ನಲ್ಲಿದ್ದಾರೆ.

ಧೋನಿ ನಾಯಕತ್ವ ತೊರೆದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್​ರೌಂಡರ್​ಗಳಾದ ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್ ಅವರು ನಾಯಕತ್ವದ ದೊಡ್ಡ ಸ್ಪರ್ಧಿಯಾಗಿದ್ದಾರೆ. ಇಬ್ಬರೂ ದೀರ್ಘಕಾಲದವರೆಗೆ ತಂಡದ ಭಾಗವಾಗಿ ಉಳಿಯಬಹುದಾಗಿದೆ. ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಬೆನ್​ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ 16.25 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಅವರು ಚೆನ್ನೈ ಪರ ಋತುವಿನ ಮೊದಲ ಎರಡು ಪಂದ್ಯಗಳಲ್ಲಿ ಆಡಿದ್ದಾರೆ. ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 15 ರನ್ ಗಳಿಸಿದ್ದು, ಬೌಲಿಂಗ್ ಕೂಡ ಆರಂಭಿಸಿದ್ದಾರೆ.

ಸ್ಟೋಕ್ಸ್ ನಾಯಕತ್ವ ವಹಿಸಿಕೊಂಡ ನಂತರ ಇಂಗ್ಲೆಂಡ್ ಟೆಸ್ಟ್ ತಂಡ ಉತ್ತಮ ಸ್ಥಿತಿಯಲ್ಲಿದೆ. ಅವರ ನಾಯಕತ್ವದಲ್ಲಿ ತಂಡ 12 ಪಂದ್ಯಗಳಲ್ಲಿ 10 ರಲ್ಲಿ ಗೆದ್ದಿದೆ. ಟಿ20 ಮಾದರಿಯಲ್ಲಿ ಆಟಗಾರ ಪ್ರಭಾವಿಯಾಗಿದ್ದಾರೆ. ಇದರಿಂದ ತಂಡ ಅವರನ್ನು ದುಬಾರಿ ಬೆಲೆಗೆ ಖರೀದಿ ಮಾಡಿದೆ.

ಓದಿ: 'ಸನ್​ ರೈಸ್'​ ಆಗದಂತೆ ತಡೆದ ಕೃನಾಲ್​ ಪಾಂಡ್ಯ: ಆಲ್​ರೌಂಡರ್​ನ 'ಸೂಪರ್'​ ಆಟ

ಇದಲ್ಲದೇ, ಮೊಯಿನ್ ಅಲಿ ಕೂಡ ಧೋನಿಯ ಪರ್ಯಾಯ ನಾಯಕನನ್ನಾಗಿ ಸ್ಟೋಕ್ಸ್​ ಆಯ್ಕೆಯಾದಲ್ಲಿ ತಂಡ ಉತ್ತಮ ಯಶಸ್ಸು ಸಾಧಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ. ಏನೇ ಆದರೂ, ಈ ನಿರ್ಧಾರವನ್ನು ಟೀಮ್ ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳಬೇಕಾಗಿದ್ದು, ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ರೇಸ್​​ನಲ್ಲಿದ್ದಾರೆ ಗಾಯಕ್ವಾಡ್​​: ಆಲ್​ರೌಂಡರ್​ ಬೆನ್​ ಸ್ಟೋಕ್ಸ್ ಜೊತೆಗೆ, ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್ ಅವರೂ ಕೂಡ ತಂಡದ ಸಂಭಾವ್ಯ ನಾಯಕರ ಪಟ್ಟಿಯಲ್ಲಿದ್ದಾರೆ. ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಇಬ್ಬರು ತಂಡದ ನಾಯಕತ್ವದ ಹೊಣೆ ಹೊರಲು ಸ್ಪರ್ಧಿಗಳಾಗಿದ್ದಾರೆ.

ಗಾಯದ ಸಮಸ್ಯೆಯಿಂದ ಈಗಷ್ಟೇ ಚೇತರಿಸಿಕೊಂಡಿರುವ ಬೆನ್ ಸ್ಟೋಕ್ಸ್ ಸದ್ಯ ತಂಡದಲ್ಲಿ ಬ್ಯಾಟಿಂಗ್​ ಮಾತ್ರ ಮಾಡುತ್ತಿದ್ದು, ಬೌಲಿಂಗ್​ಗೆ ಸಂಪೂರ್ಣ ಫಿಟ್ ಆಗಿಲ್ಲ. ಚೆನ್ನೈ ಮುಖ್ಯ ಕೋಚ್ ಸ್ಟೀಫನ್ ಫ್ಲೇಮಿಂಗ್ ಹೇಳಿದಂತೆ ಸ್ಟೋಕ್ಸ್​ ಅವರು 100 ಪ್ರತಿಶತ ಸದೃಢರಾದ ಬಳಿಕ ಮಾತ್ರ ಫ್ರಾಂಚೈಸಿ ಅವರನ್ನು ಬೌಲರ್ ಕೋಟಾದಲ್ಲೂ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಓದಿ: ಸಂಜು ಸ್ಯಾಮ್ಸನ್ ಶೀಘ್ರವೇ ಭಾರತ ತಂಡದ ನಾಯಕನಾಗಲಿದ್ದಾನೆ: ಎಬಿ ಡಿವಿಲಿಯರ್ಸ್ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.