ETV Bharat / sports

ಆರ್​ಸಿಬಿ vs ಸಿಎಸ್​​ಕೆ: ವಾಂಖೆಡೆಯಲ್ಲಿಂದು ಕೊಹ್ಲಿ-ಧೋನಿ ಟೀಂ ಬಲ ಪ್ರದರ್ಶನ - ರಾಯಲ್ ಚಾಲೆಂಜರ್ಸ್‌ ಬೆಂಗಳೂರು

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬೆಂಗಳೂರು ಮತ್ತು ಚೆನ್ನೈ ತಂಡಗಳು ಈ ಸೀಸನ್‌ನಲ್ಲಿ ಇದೇ ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದು ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.

ವಾಖೆಂಡೆಯಲ್ಲಿ ಚೆನ್ನೈಗೆ ರಾಯಲ್ "ಚಾಲೆಂಜ್​"
ವಾಖೆಂಡೆಯಲ್ಲಿ ಚೆನ್ನೈಗೆ ರಾಯಲ್ "ಚಾಲೆಂಜ್​"
author img

By

Published : Apr 25, 2021, 9:17 AM IST

ಮುಂಬೈ: ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಬಿಗ್​ ಫೈಟ್​ ನಡೆಯಲಿದೆ. ಈ ಬಾರಿಯ ಐಪಿಎಲ್​​ನಲ್ಲಿ ಆರ್​ಸಿಬಿ ತಂಡ ಅತ್ಯುತ್ತಮ ಫಾರ್ಮ್ ಕಂಡುಕೊಂಡಿದೆ. ಈ ವರ್ಷ ಈ ಎರಡು ತಂಡಗಳು ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದು, ಮ್ಯಾಚ್‌ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈವರೆಗೂ ಆಡಿದ ನಾಲ್ಕು ಪಂದ್ಯಗಳನ್ನು ಜಯಿಸಿರುವ ಆರ್​ಸಿಬಿ ಟೀಂ​​, ಅಭಿಮಾನಿಗಳಿಗೆ ಈ ಸಲ ಕಪ್​ ನಮ್ದೆ ಎಂಬ ಸಂದೇಶ ನೀಡಿದೆ.

ಬ್ಯಾಟಿಂಗ್,ಬೌಲಿಂಗ್ ಬಲಾಬಲ

ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಚೆನ್ನೈ ತಂಡ ನಂತರ ಪುಟಿದೆದ್ದು ಮೇಲೆದ್ದು ‘ಹ್ಯಾಟ್ರಿಕ್‘ ಜಯದ ಮೂಲಕ ಟ್ರ್ಯಾಕ್​ಗೆ ಮರಳಿದೆ. ಕಳೆದ ವರ್ಷ ಪ್ಲೇ ಆಫ್‌ ತಲುಪುವಲ್ಲಿಯೂ ವಿಫಲವಾಗಿದ್ದ ಚೆನ್ನೈ ಈ ಸಲ ಕಪ್​​ ಗೆಲ್ಲುವ ನಿಟ್ಟಿನಲ್ಲಿ ಹೋರಾಡುತ್ತಿದೆ. ಚೆನ್ನೈನ ತಂಡವು ಬ್ಯಾಟಿಂಗ್​ ಹಾಗೂ ಬೌಲಿಂಗ್​ ವಿಭಾಗದಲ್ಲಿ ಸದೃಢವಾಗಿದೆ. ಹಾಗಾಗಿ ಬಲಿಷ್ಠ ಆರ್​​ಸಿಬಿಗೆ ಫೈಟ್​ ನೀಡುವ ಸಾಧ್ಯತೆ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ರುತುರಾಜ್ ಗಾಯಕವಾಡ್ ಮತ್ತು ಫಾಫ್ ಡುಪ್ಲೆಸಿಸ್​ ಉತ್ತಮ ಫಾರ್ಮ್​ನಲ್ಲಿದ್ದು ಇವರಿಗೆ, ಮಧ್ಯಮ ಕ್ರಮಾಂಕದಲ್ಲಿ ಮೋಯಿನ್​ ಅಲಿ, ರೈನಾ, ರಾಯುಡು ಉತ್ತಮ ಸಾಥ್​ ನೀಡುತ್ತಿದ್ದಾರೆ. ಬಾಲಿಂಗ್ ವಿಭಾಗದಲ್ಲಿ ದೀಪಕ್ ಚಾಹರ್, ಲುಂಗಿ ಎಂಗಿಡಿ ಕೂಡಾ ಉತ್ತಮ ಫಾರ್ಮ್​ನಲ್ಲಿದ್ದಾರೆ.

ಆರ್‌ಸಿಬಿ ಕೂಡ ಕಮ್ಮಿಯೇನಿಲ್ಲ. ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಮುರಿಯದ ಮೊದಲ ವಿಕೆಟ್‌ ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ 181 ರನ್‌ ಗಳಿಸಿದ್ದರು. ಅಂತಿಮವಾಗಿ ತಂಡವು 10 ವಿಕೆಟ್‌ಗಳಿಂದ ಗೆದ್ದಿತ್ತು. ದೇವದತ್ತ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ರಂಗೇರಿತ್ತು. ಬೌಲಿಂಗ್​ ವಿಭಾಗದಲ್ಲಿ ಮೊಹಮ್ಮದ್​ ಸಿರಾಜ್​, ಹರ್ಷಲ್ ಪಟೇಲ್, ಕೈಲ್ ಜೆಮಿಸನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಆರ್​ಸಿಬಿ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್ (ವಿ.ಕೀ), ಶಹ್ಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಕೇನ್​ ರಿಚರ್ಡ್ಸನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಹಾಗು ಯುಜ್ವೇಂದ್ರ ಚಹಲ್.

ಚೆನ್ನೈ ಸೂಪರ್ ಕಿಂಗ್ಸ್​ ಸಂಭಾವ್ಯ ತಂಡ: ರುತುರಾಜ್ ಗಾಯಕ್ವಾಡ್​, ಫಾಫ್ ಡು ಪ್ಲೆಸಿಸ್, ಮೋಯಿನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್. ಧೋನಿ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎಂಗಿಡಿ ಮತ್ತು ದೀಪಕ್ ಚಹರ್.

ಇದನ್ನೂ ಓದಿ: ಹ್ಯಾಟ್ರಿಕ್‌ ಸೋಲಿನ ಭೀತಿಯಿಂದ ಪಾರಾದ ಆರ್‌ಆರ್‌; ಕೆಕೆಆರ್‌ ವಿರುದ್ಧ 6 ವಿಕೆಟ್‌ಗಳ ಜಯ

ಪಂದ್ಯ: ಮಧ್ಯಾಹ್ನ- 3.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.