ETV Bharat / sports

IPL ನಲ್ಲಿ ಇಂದು: ಮುಂಬೈ- ಲಖನೌ ಸೆಣಸಾಟದಲ್ಲಿ ಎಲಿಮಿನೇಟ್​ ಆಗೋರ್ಯಾರು?

ಇಂದಿನ ಎಲಿಮಿನೇಟರ್​ ಪಂದ್ಯದಲ್ಲಿ ಲಖನೌ, ಮುಂಬೈ ಸೆಣಸಾಡಲಿವೆ. ಗೆದ್ದ ತಂಡ 2ನೇ ಕ್ವಾಲಿಫೈಯರ್​ನಲ್ಲಿ ಗುಜರಾತ್​ ಟೈಟಾನ್ಸ್​ ಎದುರಿಸಲಿದೆ.

ಎಲಿಮಿನೇಟರ್​ ಪಂದ್ಯ
ಎಲಿಮಿನೇಟರ್​ ಪಂದ್ಯ
author img

By

Published : May 24, 2023, 10:41 AM IST

ಚೆನ್ನೈ: ಮೊದಲ ಕ್ವಾಲಿಫೈಯರ್​ ಪಂದ್ಯ ಮುಗಿದಿದೆ. ಚೆನ್ನೈ ಸೂಪರ್​ಕಿಂಗ್ಸ್​ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ. ಇಂದು ಲಖನೌ ಸೂಪರ್​ಜೈಂಟ್ಸ್​ ಮತ್ತು ಮುಂಬೈ ಇಂಡಿಯನ್ಸ್​ ಮಧ್ಯೆ ಎಲಿಮಿನೇಟರ್​ ಪಂದ್ಯ ನಡೆಯಲಿದೆ. ಗೆದ್ದ ತಂಡ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆದರೆ, ಸೋತ ತಂಡ ಪ್ರಶಸ್ತಿ ರೇಸ್​ನಿಂದಲೇ ಹೊರಬೀಳಲಿದೆ.

ಲಖನೌ ಸೂಪರ್​ ಜೈಂಟ್ಸ್​ಗೆ ಇದು 2ನೇ ಆವೃತ್ತಿಯ ಐಪಿಎಲ್​. ಈ ತಂಡ ಎರಡೂ ಬಾರಿ ಪ್ಲೇಆಫ್​ಗೆ ತಲುಪಿದೆ. ಕಳೆದ ಆವೃತ್ತಿಯಲ್ಲಿ ಎಲಿಮಿನೇಟರ್​ ಪಂದ್ಯದಲ್ಲಿ ಸೋತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೀಗ ಮತ್ತೆ ಎಲಿಮಿನೇಟರ್​ ಹಂತಕ್ಕೆ ಬಂದಿದ್ದು, ಗೆದ್ದು ಮುಂದಿನ ಹಂತ ಪ್ರವೇಶ ನಿರೀಕ್ಷೆಯಲ್ಲಿದೆ.

ತಂಡಗಳ ಬಲಾಬಲ ನೋಡೋಣ: 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಆಡಿದ 14 ಪಂದ್ಯಗಳಲ್ಲಿ 8 ರಲ್ಲಿ ಗೆದ್ದು 6 ಸೋತು 16 ಅಂಕ ಸಂಪಾದಿಸಿದೆ. ಪ್ಲೇಆಫ್​​ಗೇರಲು ಭಾರಿ ಕಸರತ್ತು ಮಾಡಿದ್ದ ತಂಡ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಸೋತಿದ್ದು ವರದಾನವಾಯಿತು. ಬ್ಯಾಟಿಂಗ್​ ಪಡೆಯನ್ನೇ ಹೊಂದಿರುವ ಮುಂಬೈ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ ನಾಯಕ ರೋಹಿತ್​ ಶರ್ಮಾ ಲಯ ಕಂಡುಕೊಂಡಿದ್ದಾರೆ.

ಇಶಾನ್​ ಕಿಶನ್​, ಕ್ಯಾಮರೂನ್ ಗ್ರೀನ್​, ಸೂರ್ಯಕುಮಾರ್​ ಯಾದವ್​ ಬ್ಯಾಟಿಂಗ್​ ಮೇಲೆ ತಂಡ ಆಧಾರವಾಗಿದೆ. ಇದಲ್ಲದೇ ತಿಲಕ್​ ವರ್ಮಾ, ನೇಹಲ್​ ವದೇರಾ, ಟಿಮ್​ ಡೇವಿಡ್​ ಕೂಡ ಕೊಡುಗೆ ನೀಡಬೇಕು. ಬೌಲಿಂಗ್​ನಲ್ಲಿ ಬೆಹ್ರನ್​ಡೂರ್ಫ್​, ಆಕಾಶ್​ ಮದ್ವಾಲ್​, ಕ್ರಿಶ್​ ಜೋರ್ಡಾನ್​ ಬಲ ತುಂಬಿದರೆ, ಹಿರಿಯ ಸ್ಪಿನ್ನರ್​ ಪಿಯೂಷ್​​ ಚಾವ್ಲಾ ತಮ್ಮ ಜಾಲ ಬೀಸಬೇಕಿದೆ.

ಎಲಿಮಿನೇಟ್​ ಗೆಲ್ಲುತ್ತಾ ಲಖನೌ?: ಲಖನೌ ಪೂರ್ಣ ಸಾಮರ್ಥ್ಯದೊಂದಿಗೆ ಎರಡನೇ ಬಾರಿಗೆ ನಾಕೌಟ್​ ತಲುಪಿದೆ. ನಾಯಕ ಕೆ.ಎಲ್.ರಾಹುಲ್​ ಲೀಗ್​ ನಡುವೆ ಗಾಯಗೊಂಡು ಹೊರಬಿದ್ದಿದ್ದಾರೆ. ಇದರಿಂದ ಕೃನಾಲ್​ ಪಾಂಡ್ಯ ತಂಡದ ಹೊಣೆ ಹೊತ್ತಿದ್ದು, ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಬ್ಯಾಟಿಂಗ್​​ನಲ್ಲಿ ಕೈಲ್​ ಮೇಯರ್ಸ್​, ಕ್ವಿಂಟನ್​ ಡಿಕಾಕ್​, ಮಾರ್ಕಸ್​ ಸ್ಟೋಯಿನೀಸ್​, ನಾಯಕ ಕೃನಾಲ್​ ಪಾಂಡ್ಯ, ನಿಕೋಲಸ್​ ಪೂರನ್​ ಆಧಾರವಾಗಿದ್ದರೆ, ಬೌಲಿಂಗ್​ನಲ್ಲಿ ಯಶ್​ ಠಾಕೂರ್​, ಮೊಹ್ಸಿನ್​ ಖಾನ್​, ಸ್ಪಿನ್ನರ್​ ರವಿ ಬಿಷ್ಣೋಯಿ ಟ್ರಂಪ್​ ಕಾರ್ಡ್​ ಆಗಿದ್ದಾರೆ.

ಮುಖಾಮುಖಿ: ಉಭಯ ತಂಡಗಳು ಈವರೆಗೂ ಐಪಿಎಲ್​ನಲ್ಲಿ 3 ಬಾರಿ ಎದುರಾಗಿವೆ. ಇದರಲ್ಲಿ ಬಲಿಷ್ಠ ಮುಂಬೈ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಲಖನೌ ಅನ್ನು ಎಲಿಮಿನೇಟ್​ ಮಾಡಿ ಮೊದಲ ಗೆಲುವು ದಾಖಲಿಸುವ ತುಡಿತದಲ್ಲಿ ಮುಂಬೈ ಇದ್ದರೆ, ಲಖನೌ ತನ್ನ ದಾಖಲೆಯನ್ನು ಮುಂದುವರಿಸುವ ಇರಾದೆಯಲ್ಲಿದೆ. ಇಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್​ನಲ್ಲಿ ಗುಜರಾತ್​ ತಂಡವನ್ನು ಎದುರಿಸಲಿದೆ.

ಪಿಚ್​ ಹೇಗಿದೆ?: ಚೆನ್ನೈ ಚೆಪಾಕ್​ ಕ್ರೀಡಾಂಗಣ ಸ್ಪಿನ್​ ಸ್ನೇಹಿ. ಬ್ಯಾಟರ್​ಗಳಿಗೂ ನೆರವು ನೀಡುತ್ತದೆ. ಇಲ್ಲಿ ಆಡಿದ 8 ಪಂದ್ಯಗಲ್ಲಿ 4 ಚೇಸಿಂಗ್​ ವೇಳೆ ಗೆಲುವು ದಕ್ಕಿದೆ. ಆದರೆ, ನಿನ್ನೆಯ ಚೆನ್ನೈ ಮತ್ತು ಗುಜರಾತ್​ ಪಂದ್ಯದಲ್ಲಿ ಉಲ್ಟಾ ಆಗಿದೆ. ಸ್ಪಿನ್​ ಪಿಚ್​ ಆದ ಕಾರಣ ಪಿಯೂಷ್​ ಚಾವ್ಲಾ, ರವಿ ಬಿಷ್ಣೋಯಿ ಎಷ್ಟು ಪರಿಣಾಮಕಾರಿಯಾಗಲಿದ್ದಾರೆ ಎಂಬುದು ಕುತೂಹಲ.

ಸಂಭಾವ್ಯ ತಂಡಗಳು: ಲಖನೌ- ಕೈಲ್ ಮೇಯರ್ಸ್, ಕ್ವಿಂಟನ್ ಡಿ ಕಾಕ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೌನಿ, ಕೆ ಗೌತಮ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಯಶ್ ಠಾಕೂರ್.

ಮುಂಬೈ: ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮರೂನ್​ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ/ವಿಷ್ಣು ವಿನೋದ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಹೃತಿಕ್ ಶೋಕೀನ್.

ಪಂದ್ಯ ಸ್ಥಳ, ಸಮಯ : ಚೆಪಾಕ್​ ಕ್ರೀಡಾಂಗಣ, ಚೆನ್ನೈ, ರಾತ್ರಿ 7.30 ಕ್ಕೆ

ಇದನ್ನೂ ಓದಿ: IPL ಪ್ಲೇಆಫ್‌ನ ಪ್ರತಿ ಡಾಟ್​ ಬಾಲ್​ಗೆ 500 ಸಸಿ: ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಮಹತ್ವದ ಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.