ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್ ಪ್ರೀಮಿಯರ್ ಲೀಗ್ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಟಾಸ್ ನಂತರ ಮಳೆ ಬಂದ ಕಾರಣ ಪಂದ್ಯ ವಿಳಂಬವಾಗಿದೆ.
ಗುಜರಾತ್ ತಂಡದಲ್ಲಿ ಕಳೆದ ತಂಡದಲ್ಲೇ ಮುಂದುವರೆದಿದೆ. ಕೆಕೆಆರ್ನಲ್ಲಿ ಎರಡು ಬದಲಾವಣೆಗಳಾಗಿದ್ದು, ಜೇಸನ್ ರಾಯ್ ಅವರಿಗೆ ಬೆನ್ನಿನ ಸಮಸ್ಯೆ ಕಾರಣ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ರಹಮಾನುಲ್ಲಾ ಗುರ್ಬಾಜ್ ಆಡಲಿದ್ದಾರೆ. ಉಮೇಶ್ ಯಾದವ್ ಬದಲಿಗೆ ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
-
🚨 Toss Update 🚨@gujarat_titans win the toss and elect to field first against @KKRiders.
— IndianPremierLeague (@IPL) April 29, 2023 " class="align-text-top noRightClick twitterSection" data="
Follow the match ▶️ https://t.co/SZJorCvgb8 #TATAIPL | #KKRvGT pic.twitter.com/ULGknB2aFd
">🚨 Toss Update 🚨@gujarat_titans win the toss and elect to field first against @KKRiders.
— IndianPremierLeague (@IPL) April 29, 2023
Follow the match ▶️ https://t.co/SZJorCvgb8 #TATAIPL | #KKRvGT pic.twitter.com/ULGknB2aFd🚨 Toss Update 🚨@gujarat_titans win the toss and elect to field first against @KKRiders.
— IndianPremierLeague (@IPL) April 29, 2023
Follow the match ▶️ https://t.co/SZJorCvgb8 #TATAIPL | #KKRvGT pic.twitter.com/ULGknB2aFd
ರೌಂಡ್-ರಾಬಿನ್ ಸುತ್ತಿನ ಎರಡನೇ ಮುಖಾಮುಖಿ ಇದಾಗಿದ್ದು, ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗುಜರಾತ್ ಟೈಟಾನ್ಸ್ಅನ್ನು ಮೂರು ವಿಕೆಟ್ಗಳಿಂದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಣಿಸಿತ್ತು. ಇಂದು ಗುಜರಾತ್ ಕೆಕೆಆರ್ನ್ನು ಮಣಿಸಿದಲ್ಲಿ ಅಗ್ರಸ್ಥಾನಕ್ಕೇರಲಿದೆ. ಈವರೆಗೆ ಆಡಿದ 7 ಪಂದ್ಯದಲ್ಲಿ ಜಿಟಿ 5 ಗೆಲುವಿನಿಂದ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅತ್ತ ಕೆಕೆಆರ್ 8 ಪಂದ್ಯದಲ್ಲಿ 3 ರಲ್ಲಿ ಗೆದ್ದು, 6 ಅಂಕ ಗಳಿಸಿದೆ.
-
Not a pleasant scene for all the cricket fans from Kolkata ☁️
— CricTracker (@Cricketracker) April 29, 2023 " class="align-text-top noRightClick twitterSection" data="
📸: IPL/BCCI#IPL2023 #CricTracker #KKRVGT pic.twitter.com/hPTz508GyO
">Not a pleasant scene for all the cricket fans from Kolkata ☁️
— CricTracker (@Cricketracker) April 29, 2023
📸: IPL/BCCI#IPL2023 #CricTracker #KKRVGT pic.twitter.com/hPTz508GyONot a pleasant scene for all the cricket fans from Kolkata ☁️
— CricTracker (@Cricketracker) April 29, 2023
📸: IPL/BCCI#IPL2023 #CricTracker #KKRVGT pic.twitter.com/hPTz508GyO
ಗುಜರಾತ್ನ ಟಾಪ್ ಬೌಲರ್ ರಶೀದ್ ಖಾನ್ಗೆ ಇದು ನೂರನೇ ಐಪಿಎಲ್ ಪಂದ್ಯವಾಗಿದೆ. ಈವರೆಗೆ ಉತ್ತಮ ಪ್ರದರ್ಶನ ನೀಡಿರುವ ರಶೀದ್ ಖಾನ್ 7 ಪಂದ್ಯದಿಂದ 14 ವಿಕೆಟ್ ಪಡೆದು ನೇರಳೆ ಕ್ಯಾಪ್ ರೇಸ್ನ ಎರಡನೇ ಸ್ಥಾನದಲ್ಲಿದ್ದಾರೆ. ಕೆಕೆಆರ್ನ ಜಮೈಕನ್ ಆಟಗಾರ ಆಂಡ್ರೆ ರಸೆಲ್ ಅವರು ಇಂದು 35 ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಇಂದು ಅವರ ಬ್ಯಾಟ್ನಿಂದ ಭರ್ಜರಿ ರನ್ ಬರುವ ನಿರೀಕ್ಷೆ ಇದೆ.
ತಂಡಗಳು ಇಂತಿವೆ..: ಕೋಲ್ಕತ್ತಾ ನೈಟ್ ರೈಡರ್ಸ್: ಎನ್ ಜಗದೀಶನ್, ರಹಮಾನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ವಿರುದ್ಧ ರನ್ ಮಳೆ ಸುರಿಸಿದ ಲಖನೌ... ಐಪಿಎಲ್ನ 2ನೇ ಗರಿಷ್ಠ ಮೊತ್ತ ದಾಖಲು