ನವದೆಹಲಿ: ನ್ಯೂಜಿಲ್ಯಾಂಡ್ ಅನುಭವಿ ಬೌಲರ್ ಟಿಮ್ ಸೌಥಿಯನ್ನು ಪ್ಯಾಟ್ ಕಮಿನ್ಸ್ಗೆ ಬದಲೀ ಆಟಗಾರನಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಒಪ್ಪಂದ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ಜೇ ರಿಚರ್ಡ್ಸನ್ ಬದಲಿಗೆ ಇಂಗ್ಲೆಂಡ್ ಅನುಭವಿ ಸ್ಪಿನ್ನರ್ ಆದಿಲ್ ರಶೀದ್ಗೆ ಮಣೆ ಹಾಕಿದೆ.
ಸೆಪ್ಟೆಂಬರ್ 19ರಿಂದ 14ನೇ ಆವೃತ್ತಿಯ ಮುಂದುವರಿದ ಭಾಗ ಆರಂಭವಾಗಲಿದೆ. ಆದರೆ, ಕೆಲವು ರಾಷ್ಟ್ರಗಳ ಆಟಗಾರರು ವೈಯಕ್ತಿಕ ಕಾರಣ, ರಾಷ್ಟ್ರೀಯ ಸೇವೆ ಹಾಗೂ ಗಾಯದ ಕಾರಣದಿಂದ ಲೀಗ್ಗೆ ಗೈರಾಗುತ್ತಿದ್ದಾರೆ. ಹಾಗಾಗಿ ಫ್ರಾಂಚೈಸಿಗಳು ಅಂತಹ ಆಟಗಾರರ ಬದಲಿಗೆ ಲಭ್ಯರಿರುವ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.
-
The one who will surely brighten up your feed - Adil Rashid ⭐️
— Punjab Kings (@PunjabKingsIPL) August 26, 2021 " class="align-text-top noRightClick twitterSection" data="
We know we have chosen the right one to bowl the wrong ones 🕸😉#SaddaPunjab #PunjabKings #IPL2021 pic.twitter.com/F5f0vfgr5l
">The one who will surely brighten up your feed - Adil Rashid ⭐️
— Punjab Kings (@PunjabKingsIPL) August 26, 2021
We know we have chosen the right one to bowl the wrong ones 🕸😉#SaddaPunjab #PunjabKings #IPL2021 pic.twitter.com/F5f0vfgr5lThe one who will surely brighten up your feed - Adil Rashid ⭐️
— Punjab Kings (@PunjabKingsIPL) August 26, 2021
We know we have chosen the right one to bowl the wrong ones 🕸😉#SaddaPunjab #PunjabKings #IPL2021 pic.twitter.com/F5f0vfgr5l
15.5 ಕೋಟಿ ರೂ ಪಡೆದು ಕೆಕೆಆರ್ ಸೇರಿದ್ದ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹಾಗಾಗಿ 2 ಬಾರಿಯ ಚಾಂಪಿಯನ್ ಕಿವೀಸ್ನ ಸೌಥಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಇದನ್ನು ಓದಿ:ಕೇನ್ ರಿಚರ್ಡ್ಸನ್ ಬದಲಿಗೆ ಇಂಗ್ಲೆಂಡ್ನ ವೇಗಿ ಗಾರ್ಟನ್ಗೆ ಗಾಳ ಹಾಕಿದ ಆರ್ಸಿಬಿ
ಈಗಾಗಲೆ ರಿಲೇ ಮೆರಿಡಿತ್ ಬದಲಿಗೆ ಯುವ ಆಸೀಸ್ ವೇಗಿ ನೇಥನ್ ಎಲ್ಲಿಸ್ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಪಂಜಾಬ್ ಕಿಂಗ್ಸ್ ಜೇಮ್ಸ್ ರಿಚರ್ಡ್ಸನ್ ಬದಲಿಗೆ ಆಂಗ್ಲ ಸ್ಪಿನ್ನರ್ರನ್ನು ಯುಎಇ ಲೀಗ್ಗೆ ಬದಲೀ ಆಟಗಾರನಾಗಿ ಘೋಷಿಸಿದೆ.
ಇನ್ನು ಆರ್ಸಿಬಿ ಶ್ರಿಲಂಕಾದ ಆ್ಯಡಂ ಜಂಪಾ ಅವರನ್ನು, ಕೇನ್ ರಿಚರ್ಡ್ಸನ್ ಬದಲಿಗೆ ಇಂಗ್ಲೆಂಡ್ನ ಜಾರ್ಜ್ ಗಾರ್ಟನ್ ಅವರನ್ನು, ಫಿನ್ ಅಲೆನ್ ಬದಲಿಗೆ ಟಿಮ್ ಡೇವಿಡ್ ಮತ್ತು ಡೇನಿಯಲ್ ಸ್ಯಾಮ್ಸ್ ಬದಲಿಗೆ ದುಷ್ಮಂತ ಚಮೀರರನ್ನು ಬದಲೀ ಆಟಗಾರರಾಗಿ ಘೋಷಿಸಿದೆ.
ರಾಜಸ್ಥಾನ್ ರಾಯಲ್ಸ್ ಜೋಫ್ರಾ ಆರ್ಚರ್ ಬದಲಿಗೆ ಕಿವೀಸ್ ವಿಕೆಟ್ ಕೀಪರ್ ಗ್ಲೇನ್ ಫಿಲಿಪ್ಸ್ರನ್ನು ಮತ್ತು ಆ್ಯಂಡ್ರ್ಯೂ ಟೈ ಬದಲಿಗೆ ವಿಶ್ವದ ನಂಬರ್ 1 ಟಿ-20 ಬೌಲರ್ ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಸಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಇದನ್ನು ಓದಿ:ವಿಶ್ವದ ನಂಬರ್ 1 ಟಿ20 ಬೌಲರ್ ತಬ್ರೈಜ್ ಶಂಸಿ ರಾಜಸ್ಥಾನ್ ರಾಯಲ್ಸ್ಗೆ ಸೇರ್ಪಡೆ