ಬೆಂಗಳೂರು: ಆರ್‌ಸಿಬಿ ತಂಡ ಪ್ರತಿ ವರ್ಷ ಹಸಿರು ಉಳಿಸಿ ಎಂಬ ಅಭಿಯಾನದಡಿಯಲ್ಲಿ ಒಂದು ಪಂದ್ಯವನ್ನು ಹಸಿರು ಜರ್ಸಿ ತೊಟ್ಟು ಆಡುತ್ತದೆ. ಜೂನ್ ಸಮಯದಲ್ಲಿ ಐಪಿಎಲ್ ನಡೆದಾಗ ಪರಿಸರ ಸಂರಕ್ಷಣೆಯ ಮಹತ್ವ ಸಾರಲು ಹಸಿರು ದಿರಿಸಿನಲ್ಲಿ ಆಡುವುದು ವಾಡಿಕೆ. ಈ ಕುರಿತು ಟ್ವೀಟ್ ಮಾಡಿರುವ ಆರ್‌ಸಿಬಿ, ಆಟಗಾರರು ನೂತನ ಹಸಿರು ಜರ್ಸಿಯಲ್ಲಿರುವ ಫೋಟೋ ಹಂಚಿಕೊಂಡಿದೆ.
ಆರ್‌ಸಿಬಿ ಏಪ್ರಿಲ್ 23 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಹಸಿರುಡುಗೆ ತೊಟ್ಟು ಕಣಕ್ಕಿಳಿಯಲಿದೆ. ಪಿಂಕ್ ಪಡೆಯೆದುರು ಆರ್‌ಸಿಬಿ ಇನ್ ಗ್ರೀನ್ನಲ್ಲಿ ಎದುರಿಸಲಿದೆ. ನಾಯಕ ಫಾಫ್ ಡು ಪ್ಲೆಸಿಸ್, ಬ್ಯಾಟರ್ ವಿರಾಟ್ ಕೊಹ್ಲಿ, ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಹಸಿರು ಜರ್ಸಿಯಲ್ಲಿರುವ ಫೋಟೋ ನೋಡಬಹುದು.
-
Lookin’ fresh and oh so clean,
— Royal Challengers Bangalore (@RCBTweets) April 13, 2023 " class="align-text-top noRightClick twitterSection" data="
For the right cause, we wear GREEN! 👊🟢
How cool are the #RCBxPuma kits for the Go Green game, 12th Man Army? 🤩#PlayBold #ನಮ್ಮRCB #IPL2023 #GoGreen @pumacricket pic.twitter.com/uRRurfqMWk
">Lookin’ fresh and oh so clean,
— Royal Challengers Bangalore (@RCBTweets) April 13, 2023
For the right cause, we wear GREEN! 👊🟢
How cool are the #RCBxPuma kits for the Go Green game, 12th Man Army? 🤩#PlayBold #ನಮ್ಮRCB #IPL2023 #GoGreen @pumacricket pic.twitter.com/uRRurfqMWkLookin’ fresh and oh so clean,
— Royal Challengers Bangalore (@RCBTweets) April 13, 2023
For the right cause, we wear GREEN! 👊🟢
How cool are the #RCBxPuma kits for the Go Green game, 12th Man Army? 🤩#PlayBold #ನಮ್ಮRCB #IPL2023 #GoGreen @pumacricket pic.twitter.com/uRRurfqMWk
ನಿಮಗೂ ಗ್ರೀಸ್ ಜರ್ಸಿ ಲಭ್ಯ: "ಗ್ರೀನ್ ಗೇಮ್ ಅನ್ನು ಏಪ್ರಿಲ್ 23 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಾಗುತ್ತದೆ. ನಮ್ಮ ವಿಶೇಷ ಹಸಿರು ಜೆರ್ಸಿಗಳು 100% ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿವೆ. ನೀವು ಈಗ ಆರ್‌ಸಿಬಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಈ ಜರ್ಸಿಯನ್ನು ಖರೀದಿಸಬಹುದು" ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದೆ.
2011 ರಿಂದ ಆರ್‌ಸಿಬಿ ಹಸಿರು ಜರ್ಸಿಯಲ್ಲಿ ಆಡುವ ಮೂಲಕ ಗೋ ಗ್ರೀನ್ ಅಭಿಯಾನವನ್ನು ಆರಂಭಿಸಿತ್ತು. 2021ರಲ್ಲಿ ಆಕಾಶ ನೀಲಿ ಬಣ್ಣದ ವಸ್ತ್ರದಲ್ಲಿ ಮೈದಾನಕ್ಕಿಳಿಯುವ ಮೂಲಕ ಕೋವಿಡ್ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸಿದ 'ಕೋವಿಡ್ ವಾರಿಯರ್ಸ್'ಗೆ ಧನ್ಯವಾದ ಸಮರ್ಪಿಸಿತ್ತು.
ಗ್ರೀನ್ ಜರ್ಸಿಯಲ್ಲಿ ಸೋಲು ಭೀತಿ: ಆರ್‌ಸಿಬಿ ಇದುವರೆಗೆ 12 ಐಪಿಎಲ್ ಪಂದ್ಯಗಳನ್ನು ಹಸಿರು ಜೆರ್ಸಿಯಲ್ಲಿ ಆಡಿದೆ. ಈ ಜರ್ಸಿಯಲ್ಲಿ ಆಡಿದ ಹೆಚ್ಚು ಪಂದ್ಯಗಳಲ್ಲಿ ಸೋಲನುಭವಿಸಿದೆ. 12 ರಲ್ಲಿ 8 ಪಂದ್ಯ ಸೋತಿದ್ದು, ಕೇವಲ ಮೂರು ಬಾರಿ ಗೆದ್ದಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಹಸಿರು ಜೆರ್ಸಿ ತೊಟ್ಟು ಆರ್ಆರ್ ವಿರುದ್ಧವೇ ಆಡಿತ್ತು. ಅಂದು 19 ರನ್‌ಗಳಿಂದ ಪರಾಜಯವಾಗಿತ್ತು.
2019ರಲ್ಲಿ ಕೋವಿಡ್ ಬಂದ ಕಾರಣ ಐಪಿಎಲ್ ಪಂದ್ಯಗಳನ್ನು ಹೊರದೇಶದಲ್ಲಿ ಆಯೋಜಿಸಲಾಗಿತ್ತು. ಅಭಿಮಾನಿಗಳಿಲ್ಲದೇ ಮ್ಯಾಚ್ಗಳು ನಡೆಯುತ್ತಿದ್ದವು. ಮೂರು ವರ್ಷದ ನಂತರ ಅಭಿಮಾನಿಗಳಿಂದ ತುಂಬಿದ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯುತ್ತಿವೆ.
ಈ ಆವೃತ್ತಿಯಲ್ಲಿ ಆರ್‌ಸಿಬಿ..: ಈ ವರ್ಷ ಆರ್‌ಸಿಬಿ ಮೊದಲ ಪಂದ್ಯದಲ್ಲಿ ಉತ್ತಮ ಗೆಲುವಿನಿಂದ ಲೀಗ್ ಆರಂಭಿಸಿತ್ತು. ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿತ್ತು. ನಂತರದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲನುಭವಿಸಿದೆ. ನಾಳೆ ಚಿನನ ಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.
ಏಪ್ರಿಲ್ 17 ರಂದು ಚೆನ್ನೈ ವಿರುದ್ಧ ಚಿನ್ನಸ್ವಾಮಿಯಲ್ಲಿ ಮತ್ತು ಏಪ್ರಿಲ್ 20ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿಯಲ್ಲಿ ಆಡಲಿದೆ. ಏ.23 ರಂದು ರಾಜಸ್ಥಾನ ರಾಯಲ್ಸ್ ಅನ್ನು ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಎದುರಿಸಲಿದ್ದಾರೆ.
ಇದನ್ನೂ ಓದಿ: ಜೂ.ಪಾಂಟಿಂಗ್ ಬ್ಯಾಟಿಂಗ್: ಡೆಲ್ಲಿಯ ಮುಂದಿನ ಆಟಗಾರ ಎಂದ ಪಂತ್