ETV Bharat / sports

ಆರ್​ಸಿಬಿ, ಮುಂಬೈ, ರಾಯಲ್ಸ್​: ಮೂವರಲ್ಲಿ 4ನೇ ಪ್ಲೇಆಫ್​ ಸ್ಥಾನ ಯಾರಿಗೆ? - Mumbai Indians

ಐಪಿಎಲ್‌ ಪ್ಲೇಆಫ್​ನ ನಾಲ್ಕನೇ ಸ್ಥಾನಕ್ಕೆ ಆರ್​ಸಿಬಿ, ಮುಂಬೈ ಹಾಗು ರಾಜಸ್ಥಾನ ತಂಡಗಳು ಸ್ಪರ್ಧೆಯಲ್ಲಿವೆ. ಮೂರೂ ತಂಡಗಳು ತಲಾ 14 ಪಾಯಿಂಟ್ಸ್​ ಹೊಂದಿವೆ. ಯಾವ ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗಲಿದೆ ಎಂಬುದನ್ನು ಇಂದಿನ ಕೊನೆಯ ಲೀಗ್​ ಪಂದ್ಯಗಳು ನಿರ್ಧರಿಸಲಿವೆ.

ಪ್ಲೇಆಫ್
ಪ್ಲೇಆಫ್
author img

By

Published : May 21, 2023, 11:08 AM IST

16 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನ (ಐಪಿಎಲ್)​ ಲೀಗ್​ ಹಂತದ ಪಂದ್ಯಗಳು ಇಂದೇ ಕೊನೆ ಆಗಲಿವೆ. ಮೂರು ತಂಡಗಳು ಈಗಾಗಲೇ ಪ್ಲೇಆಫ್​ಗೆ ಕ್ವಾಲಿಫೈ ಆಗಿವೆ. ನಾಲ್ಕನೇ ಸ್ಥಾನಕ್ಕಾಗಿ ಮೂರು ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ನಿನ್ನೆ ನಡೆದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸಿಎಸ್​ಕೆ, ಕೆಕೆಆರ್​ ವಿರುದ್ಧ ಎಲ್​ಎಸ್​ಜಿ ಗೆಲುವು ಸಾಧಿಸಿ ಪ್ಲೇಆಫ್​ಗೇರಿದವು. ಇದಕ್ಕೂ ಮೊದಲು ಗುಜರಾತ್​ ಟೈಟಾನ್ಸ್​ ಮೊದಲ ತಂಡವಾಗಿ ನಾಕೌಟ್​ ಪ್ರವೇಶಿಸಿತ್ತು.

ನಾಕೌಟ್​ ಹಂತದ ನಾಲ್ಕನೇ ಸ್ಥಾನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮಧ್ಯೆ ಸೆಣಸಾಟ ನಡೆಯುತ್ತಿದೆ. ಇಂದು ಆರ್​ಸಿಬಿ ಮತ್ತು ಗುಜರಾತ್​, ಮುಂಬೈ ಮತ್ತು ಹೈದರಾಬಾದ್​ ನಡುವಣ ಪಂದ್ಯ ಪ್ಲೇಫ್​ ಸ್ಥಾನವನ್ನು ನಿರ್ಧರಿಸಲಿದೆ.

ಆರ್​ಸಿಬಿ ಪ್ಲೇಆಫ್ ಹಾದಿ ಹೀಗಿದೆ..: ಸದ್ಯಕ್ಕೆ ಪ್ಲೇಆಫ್​ಗೇರುವ ಹೆಚ್ಚಿನ ಅವಕಾಶ ಫಾಫ್​ ಡು ಪ್ಲೆಸಿಸ್​ ನೇತೃತ್ವದ ಆರ್​ಸಿಬಿ ತಂಡಕ್ಕಿದೆ. ನೆಟ್​ ರನ್​​ರೇಟ್​ನಲ್ಲಿ(+0.180) ಎರಡೂ ತಂಡಕ್ಕಿಂತಲೂ ಇದು ಮುಂದಿದೆ. ಇಂದಿನ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ 16 ಅಂಕಗಳೊಂದಿಗೆ ನಾಕೌಟ್​ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ಆದರೆ, ಹೈದರಾಬಾದ್​ ವಿರುದ್ಧ ಮುಂಬೈ ಹೆಚ್ಚಿನ ರನ್​ ಅಂತರದಲ್ಲಿ ಗೆಲುವು ಸಾಧಿಸಿದಲ್ಲಿ ತುಸು ಕಷ್ಟವಾಗಬಹುದು. ಒಂದು ವೇಳೆ ಗುಜರಾತ್​ ವಿರುದ್ಧ ಸೋತಲ್ಲಿ ಆರ್​ಸಿಬಿ ಟೂರ್ನಿಯಿಂದ ಹೊರಬೀಳಬಹುದು.

ಮುಂಬೈ ಮತ್ತು ಹೈದರಾಬಾದ್​ ಮಧ್ಯೆ ಮೊದಲು ಪಂದ್ಯ ನಡೆಯುವ ಕಾರಣ ಅದರ ಫಲಿತಾಂಶದ ಆಧಾರದ ಮೇಲೆ ಆರ್​ಸಿಬಿ ತಂತ್ರ ಮಾಡಬಹುದು. ಅಚಾನಕ್ಕಾಗಿ ಮುಂಬೈ ಸೋಲು ಕಂಡಲ್ಲಿ ಆರ್​ಸಿಬಿ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಕಾರಣ ರಾಜಸ್ಥಾನ ರಾಯಲ್ಸ್​ ರನ್​ರೇಟ್​ನಲ್ಲಿ ಈಗಾಗಲೇ ಹಿಂದಿದೆ.

ಮುಂಬೈ ಇಂಡಿಯನ್ಸ್ ಕತೆಯೇನು?: ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ಗೆ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಗೆಲುವು ಕಡ್ಡಾಯ. ಅಲ್ಲದೇ, ಭಾರಿ ಅಂತರದಿಂದ ಜಯಿಸಿ ರನ್​ರೇಟ್​ (-0.128) ಕಾಯ್ದುಕೊಳ್ಳಬೇಕಿದೆ. ಇಷ್ಟಾದರೂ ತಂಡ ಪ್ಲೇಆಫ್​ಗೇರುವ ಅವಕಾಶ ತುಸು ಕಡಿಮೆಯೇ. ಕಾರಣ ಆರ್​ಸಿಬಿ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಗುಜರಾತ್​ ವಿರುದ್ಧ ಸೋಲಬೇಕು. ರಾಜಸ್ಥಾನ ರಾಯಲ್ಸ್​ ಕೂಡ ಮುಂಬೈಗಿಂತ ರನ್​ರೇಟ್​ನಲ್ಲಿ ಮುಂದಿದೆ. ಹೀಗಾಗಿ ತಂಡದ ಮುಂದಿನ ಹಂತದ ಪ್ರವೇಶ ಆರ್​ಸಿಬಿ ಕೈಯಲ್ಲಿದೆ.

ರಾಜಸ್ಥಾನ ರಾಯಲ್ಸ್ ಸನ್ನಿವೇಶವೇನು?: ಸಂಜು ಸ್ಯಾಮ್ಸನ್​ ನೇತೃತ್ವದ ತಂಡ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಗೆಲುವು ಸಾಧಿಸಿ ಪ್ಲೇಆಫ್​ ರೇಸ್​ನಲ್ಲಿ ಉಳಿದುಕೊಂಡಿದೆ. ತಂಡಕ್ಕೆ ಹೆಚ್ಚಿನ ಅವಕಾಶಗಳು ಇಲ್ಲವಾದರೂ ಅದೃಷ್ಟದ ಹುಡುಕಾಟದಲ್ಲಿದೆ. ಮುಂಬೈ ಇಂಡಿಯನ್ಸ್​ ಮತ್ತು ಆರ್​ಸಿಬಿ ಕೊನೆಯ ಲೀಗ್​ ಪಂದ್ಯದಲ್ಲಿ ಎರಡೂ ತಂಡಗಳು ಹೆಚ್ಚಿನ ಅಂತರದ ಸೋಲು ಕಂಡಲ್ಲಿ ನೆಟ್​ ರನ್​ರೇಟ್​ ಆಧಾರದ ಮೇಲೆ ರಾಯಲ್ಸ್​ ನಾಕೌಟ್​ ಪ್ರವೇಶ ಪಡೆಯಬಹುದು. ಒಂದು ವೇಳೆ ತಂಡಗಳು ಗೆದ್ದಲ್ಲಿ ಟೂರ್ನಿಯಿಂದ ಹೊರಬೀಳಲಿದೆ. ಪ್ರಸ್ತುತ ಆರ್​ಆರ್​ +0.148 ರನ್​ ರೇಟ್ ಹೊಂದಿದೆ.

ಇದನ್ನೂ ಓದಿ: ಡೆಲ್ಲಿ ಮಣಿಸಿ ಪ್ಲೇ ಆಫ್​ಗೆ ಪ್ರವೇಶ ಪಡೆದ ಚೆನ್ನೈ: ತವರಿನಲ್ಲಿ ಧೋನಿಗೆ ಇನ್ನೊಂದು ಪಂದ್ಯದ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.