ಮುಂಬೈ: ಏಪ್ರಿಲ್ 23 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕರಾಳ ದಿನ. ಹೈದರಾಬಾದ್ ವಿರುದ್ಧದ ಈ ಹಿಂದಿನ ಪಂದ್ಯದಲ್ಲೂ ಇದು ಸಾಬೀತಾಗಿತ್ತು. ಕೇನ್ ವಿಲಿಯಮ್ಸನ್ ಪಡೆ ವಿರುದ್ಧ ಡುಪ್ಲೆಸಿಸ್ ಬಳಗ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ, ಕೇವಲ 68 ರನ್ಗಳಿಗೆ ಆಲೌಟ್ ಆಗಿತ್ತು. ಇದೀಗ ಆ ಮುಖಭಂಗಕ್ಕೆ ಸೇಡು ತೀರಿಸಿಕೊಂಡಿದೆ.
ನವಿ ಮುಂಬೈ ಮೈದಾನದಲ್ಲಿ ಭಾನುವಾರ ನಡೆದ 54ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಆರಂಭಿಕ ಆಘಾತದ ನಡುವೆಯೂ ನಾಯಕ ಡುಪ್ಲೆಸಿಸ್ 73 ರನ್, ಪಾಟಿದಾರ್ 48 ರನ್, ಮ್ಯಾಕ್ಸವೆಲ್ 33 ಹಾಗೂ ದಿನೇಶ್ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್ ಸಮೇತ ಅಜೇಯ 30 ರನ್ಗಳಿಕೆ ಮಾಡಿ ತಂಡ 192 ರನ್ ಪೇರಿಸಲು ನೆರವಾದರು.
ಇದನ್ನೂ ಓದಿ: ಆರ್ಸಿಬಿಗೆ ಮತ್ತೊಮ್ಮೆ ಕರಾಳದಿನವಾದ ಏಪ್ರಿಲ್ 23! ಅಂದು 49, ಇಂದು 68ಕ್ಕೆ ಆಲೌಟ್
ಇದರ ಬೆನ್ನತ್ತಿದ ಹೈದರಾಬಾದ್ ಆರಂಭದಲ್ಲೇ ಕ್ಯಾಪ್ಟನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. 19.2 ಓವರ್ಗಳಲ್ಲಿ 125 ರನ್ಗಳಿಗೆ ಆಲೌಟ್ ಆಗುವ ಮೂಲಕ 67 ರನ್ಗಳ ಸೋಲು ಕಂಡಿತು. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ವನಿಂದು ಹಸರಂಗ 5 ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ಆರ್ಸಿಬಿ 14 ಪಾಯಿಂಟ್ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಸತತ 4ನೇ ಸೋಲು ಕಂಡ ಹೈದರಾಬಾದ್ 6ನೇ ಸ್ಥಾನಕ್ಕೆ ತಲುಪಿದೆ.
ಆರ್ಸಿಬಿಗೆ ಏಪ್ರಿಲ್ 23 ಕರಾಳ: 2013ರಲ್ಲಿ ಪುಣೆ ತಂಡದ ವಿರುದ್ಧ ನಡೆದ ಪಂದ್ಯದಲ್ಲೂ ಆರ್ಸಿಬಿ ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು. ಈ ವರ್ಷ ಕೂಡ ಹೈದರಾಬಾದ್ ವಿರುದ್ಧ 68 ರನ್ಗಳಿಗೆ ಆಲೌಟ್ ಆಗಿ, ಈ ಆವೃತ್ತಿಯಲ್ಲಿ ಅತಿ ಕಡಿಮೆ ರನ್ಗಳಿಗೆ ಆಲೌಟ್ ಆದ ತಂಡವಾಗಿದೆ. ಇದೀಗ, ಅದಕ್ಕೆ ಸೇಡು ತೀರಿಸಿಕೊಂಡಿದೆ.