ಅಹಮದಾಬಾದ್: ರಾಜಸ್ಥಾನ ತಂಡದ ಸಂಘಟಿತ ಬೌಲಿಂಗ್ ನೆರವಿನ ಹೊರತಾಗಿ ರಜತ್ ಪಾಟಿದಾರ್(58) ಆಕರ್ಷಕ ಅರ್ಧಶತಕದ ನೆರವಿನಿಂದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 157ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಆರಂಭದಲ್ಲೇ ಆಘಾತ ಎದುರಿಸಿತು. ವಿರಾಟ್ ಕೊಹ್ಲಿ(7) ನಿರಾಸೆ ಅನುಭವಿಸಿದರು. ಇದಾದ ಬಳಿಕ ಒಂದಾದ ಡುಪ್ಲೆಸಿಸ್-ಪಾಟಿದಾರ್ ತಂಡಕ್ಕೆ ಚೇತರಿಕೆ ನೀಡಿದರು.
25ರನ್ಗಳಿಕೆ ಮಾಡಿದ್ದ ಕ್ಯಾಪ್ಟನ್ ಡುಪ್ಲೆಸಿಸ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಮ್ಯಾಕ್ಸವೆಲ್ ತಾವು ಎದುರಿಸಿದ 13 ಎಸೆತಗಳಲ್ಲಿ 24ರನ್ಗಳಿಸಿ, ಬೌಲ್ಟ್ ಓವರ್ನಲ್ಲಿ ಔಟಾದರು. ಲಖನೌ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದ ಪಾಟಿದಾರ್ ಇಂದಿನ ಮಹತ್ವದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ತಾವು ಎದುರಿಸಿದ 42 ಎಸೆತಗಳಲ್ಲಿ 3 ಸಿಕ್ಸರ್ ಸಮೇತ 58ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಮದ್ಯಮ ಕ್ರಮಾಂಕದಲ್ಲಿ ಮಹಿಪಾಲ್(8), ಕಾರ್ತಿಕ್(6) ಅಹ್ಮದ್ ಅಜೇಯ(12), ಹಸರಂಗ(0) ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ರಾಜಸ್ಥಾನ ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಪ್ರಸಿದ್ಧ ಕೃಷ್ಣ, ಮೆಕಾಯ್ ತಲಾ 3 ವಿಕೆಟ್ ಪಡೆದರೆ, ಅಶ್ವಿನ್ ಹಾಗೂ ಬೌಲ್ಟ್ 1 ವಿಕೆಟ್ ಪಡೆದು ಗಮನ ಸೆಳೆದರು.
ಮೊಟೇರಾದ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ಫೈನಲ್ಗೆ ಪ್ರವೇಶ ಪಡೆದುಕೊಳ್ಳಲಿದ್ದು, ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದು, ಆರ್ಸಿಬಿ ಬ್ಯಾಟಿಂಗ್ ನಡೆಸಲಿದೆ. ಮಹತ್ವದ ಪಂದ್ಯಕ್ಕಾಗಿ ಉಭಯ ತಂಡದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲಾಗಿಲ್ಲ. ಈ ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಆಡುವ 11ರ ಬಳಗದಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಡುಪ್ಲೆಸಿಸ್(ಕ್ಯಾಪ್ಟನ್), ರಜತ್ ಪಾಟಿದಾರ್, ಗ್ಲೇನ್ ಮ್ಯಾಕ್ಸ್ವೆಲ್, ಮಹಿಪಾಲ್, ದಿನೇಶ್ ಕಾರ್ತಿಕ್(ವಿ.ಕೀ), ಶಹಬಾಜ್ ಅಹ್ಮದ್,ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್ವುಡ್, ಮೊಹಮ್ಮದ್ ಸಿರಾಜ್
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ, ಕ್ಯಾಪ್ಟನ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮಾಯರ್, ರಿಯಾಗ್ ಪರಾಗ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ, ಯಜುವೇಂದ್ರ ಚಹಲ್,ಮೆಕಾಯ್
-
🚨 Toss Update 🚨@rajasthanroyals have elected to bowl against @RCBTweets.
— IndianPremierLeague (@IPL) May 27, 2022 " class="align-text-top noRightClick twitterSection" data="
Follow the match ▶️ https://t.co/orwLrIaXo3 #TATAIPL | #RRvRCB pic.twitter.com/RxSqb19C3s
">🚨 Toss Update 🚨@rajasthanroyals have elected to bowl against @RCBTweets.
— IndianPremierLeague (@IPL) May 27, 2022
Follow the match ▶️ https://t.co/orwLrIaXo3 #TATAIPL | #RRvRCB pic.twitter.com/RxSqb19C3s🚨 Toss Update 🚨@rajasthanroyals have elected to bowl against @RCBTweets.
— IndianPremierLeague (@IPL) May 27, 2022
Follow the match ▶️ https://t.co/orwLrIaXo3 #TATAIPL | #RRvRCB pic.twitter.com/RxSqb19C3s
ಮೊದಲ ಕ್ವಾಲಿಫೈಯರ್ನಲ್ಲಿ ಸೋತ ರಾಜಸ್ಥಾನ ಹಾಗೂ ಎಲಿಮಿನೇಟರ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡಿರುವ ಆರ್ಸಿಬಿ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಮೊಟೇರಾದ ನರೇಂದ್ರ ಮೋದಿ ಮೈದಾನದಲ್ಲಿ ಪಂದ್ಯ ಆಯೋಜನೆಗೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ, ಫೈನಲ್ಗೆ ಲಗ್ಗೆ ಹಾಕುವ ಕನಸು ಕಾಣುತ್ತಿರುವ ಬೆಂಗಳೂರು ಚೊಚ್ಚಲ ಪ್ರಶಸ್ತಿಗೆ ಕೇವಲ ಇನ್ನೆರಡು ಹೆಜ್ಜೆ ಬಾಕಿ ಇದೆ. ಸಂಜು ಸ್ಯಾಮ್ಸನ್ ಬಳಗಕ್ಕೂ ಈ ಪಂದ್ಯ ಪ್ರತಿಷ್ಠೆಯಿಂದ ಕೂಡಿದ್ದು, ತೀವ್ರ ಪೈಪೋಟಿ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ.
ನಾಟಕೀಯ ಬೆಳವಣಿಗೆಯಲ್ಲಿ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಸ್ಫೋಟಕ ಶತಕ ಹಾಗೂ ಬೌಲರ್ಗಳ ಸಾಂಘಿಕ ಹೋರಾಟದ ಬಲದಿಂದ ಕ್ವಾಲಿಫೈಯರ್ಗೆ ಪ್ರವೇಶ ಪಡೆದಿದೆ. ಆದರೆ, ತಂಡದಲ್ಲಿರುವ ಡುಪ್ಲೆಸಿಸ್, ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ ಹಾಗೂ ಮಹಿಪಾಲ್ ಇಂದಿನ ಪಂದ್ಯದಲ್ಲಿ ಆರ್ಭಟಿಸಬೇಕಾಗಿದೆ. ಉಳಿದಂತೆ ತಂಡಕ್ಕೆ ಕಾರ್ತಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಆರ್ಸಿಬಿ ಬೌಲಿಂಗ್ ಕೂಡ ಉತ್ತಮವಾಗಿದೆ. ಹ್ಯಾಜಲ್ವುಡ್, ಹರ್ಷಲ್ ಪಟೇಲ್, ಹಸರಂಗ, ಸಿರಾಜ್ ಜೊತೆಗೆ ಕೆಲವೊಮ್ಮೆ ಮ್ಯಾಕ್ಸ್ವೆಲ್ ಕೂಡ ವಿಕೆಟ್ ಪಡೆದುಕೊಳ್ಳುತ್ತಿರುವುದು ತಂಡಕ್ಕೆ ಸಹಕಾರಿಯಾಗಿದೆ. ರಾಜಸ್ಥಾನ ಕೂಡ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದೆ. ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಲಯದಲ್ಲಿದ್ದಾರೆ. ಆದರೆ, ಗುಜರಾತ್ ವಿರುದ್ಧ ಮೊದಲ ಕ್ವಾಲಿಫೈಯರ್ನಲ್ಲಿ ಸೋಲು ಕಂಡಿದ್ದು, ತಂಡ ಇಂದು ಪುಟಿದೇಳುವ ತವಕದಲ್ಲಿದೆ.