ಮುಂಬೈ: ಅತ್ಯದ್ಭುತ ಫಾರ್ಮ್ನಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ದಾಂಡಿಗ ಜಾಸ್ ಬಟ್ಲರ್ ಕೇವಲ 57 ಎಸೆತಗಳಲ್ಲಿ ಮತ್ತೊಂದು ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಆರ್ಆರ್ ತಂಡ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 222 ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿದೆ.
-
Third 💯 of #TATAIPL 2022 for @josbuttler 👏👏 pic.twitter.com/nPBIWxw8PA
— IndianPremierLeague (@IPL) April 22, 2022 " class="align-text-top noRightClick twitterSection" data="
">Third 💯 of #TATAIPL 2022 for @josbuttler 👏👏 pic.twitter.com/nPBIWxw8PA
— IndianPremierLeague (@IPL) April 22, 2022Third 💯 of #TATAIPL 2022 for @josbuttler 👏👏 pic.twitter.com/nPBIWxw8PA
— IndianPremierLeague (@IPL) April 22, 2022
ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಹೈವೋಲ್ಟೆಜ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಹಾಗೂ ದೇವದತ್ ಪಡಿಕ್ಕಲ್ ಎದುರಾಳಿ ಬೌಲರ್ಗಳನ್ನು ಸುಲಭವಾಗಿ ಎದುರಿಸಿ, ಉತ್ತಮ ಜೊತೆಯಾಟವಾಡಿದರು. ಆರಂಭದಲ್ಲಿ ಪವರ್ ಪ್ಲೇನಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ ತದನಂತರ ಅಬ್ಬರಿಸಿತು. ಇದರ ಜೊತೆಗೆ 11ನೇ ಓವರ್ನಲ್ಲಿ ತಂಡದ ಮೊತ್ತ 100ರ ಗಡಿ ದಾಟಿಸಿದರು.
35 ಎಸೆತಗಳಲ್ಲಿ 54ರನ್ಗಳಿಕೆ ಮಾಡಿದ್ದ ಪಡಿಕ್ಕಲ್ ಖಲೀಲ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಮೈದಾನಕ್ಕೆ ಬಂದ ಕ್ಯಾಪ್ಟನ್ ಸ್ಯಾಮನ್ಸ್ ಕೂಡ ಅಬ್ಬರದ ಬ್ಯಾಟಿಂಗ್ ನಡೆಸಿದರು. ಆದರೆ, ಅದ್ಭುತ ಫಾರ್ಮ್ನಲ್ಲಿರುವ ಬಟ್ಲರ್ ತಾವು ಎದುರಿಸಿದ 65 ಎಸೆತಗಳಲ್ಲಿ 9 ಸಿಕ್ಸರ್, 9 ಬೌಂಡರಿ ಸಮೇತ 116ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ನಾಯಕನ ಆಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿ ಸಮೇತ ಅಜೇಯ 46ರನ್ಗಳಿಕೆ ಮಾಡಿದರು. ಡೆಲ್ಲಿ ತಂಡದ ಪರ ಖಲೀಲ್ ಅಹ್ಮದ್ ಹಾಗೂ ಮುಸ್ತುಫಿಜುರ್ ತಲಾ 1 ವಿಕೆಟ್ ಪಡೆದುಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದ್ದು, ಉಳಿದಂತೆ ಯಾವೊಬ್ಬ ಪ್ಲೇಯರ್ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.