ಅಹಮದಾಬಾದ್: ಮಹತ್ವದ ಐಪಿಎಲ್ 2022ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ಫೈನಲ್ಗೆ ಲಗ್ಗೆ ಹಾಕಿದೆ. 158ರನ್ಗಳ ಗುರಿ ಬೆನ್ನತ್ತಿದ ಸ್ಯಾಮ್ಸನ್ ಬಳಗ 18.1 ಓವರ್ಗಳಲ್ಲಿ 161ರನ್ಗಳಿಸಿ ಜಯ ಸಾಧಿಸಿತು. ತಂಡದ ಪರ ಬಟ್ಲರ್(106) ಭರ್ಜರಿ ಆಟ ಪ್ರದರ್ಶಿಸಿದರು.ಅಹಮದಾಬಾದ್ನ ಮೊಟೇರಾದ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೋತು ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಆರ್ಸಿಬಿ ಕನಸು ಕನಸಾಗಿ ಉಳಿದಿದೆ.
ಮಹತ್ವದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೇಗನೆ ವಿರಾಟ್ ಕೊಹ್ಲಿ(7) ವಿಕೆಟ್ ಕಳೆದುಕೊಂಡಿತು. ನಾಯಕ ಡುಪ್ಲೆಸಿಸ್(25), ಗ್ಲೆನ್ ಮ್ಯಾಕ್ಸ್ವೆಲ್(24)ರನ್ಗಳ ಕೊಡುಗೆ ನೀಡಿದರು. ಇದಾದ ಬಳಿಕ ಬಂದ ಮಹಿಪಾಲ್(8), ದಿನೇಶ್ ಕಾರ್ತಿಕ್(6), ಹಸರಂಗ(0) ಹರ್ಷಲ್ ಪಟೇಲ್(1) ಪೆವಿಲಿಯನ್ ಸೇರಿಕೊಂಡರು. ಶಹಬಾಜ್ ಅಜೇಯ 12ರನ್ಗಳಿಕೆ ಮಾಡಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರಜತ್ ಪಾಟಿದಾರ್ 58ರನ್ಗಳಿಕೆ ಮಾಡಿದರು. ಹೀಗಾಗಿ, 20 ಓವರ್ಗಳ ಅಂತ್ಯಕ್ಕೆ ಆರ್ಸಿಬಿ 8 ವಿಕೆಟ್ನಷ್ಟಕ್ಕೆ 157ರನ್ಗಳಿಕೆ ಮಾಡಿತು. ರಾಜಸ್ಥಾನ ಪರ ಪ್ರಸಿದ್ಧ ಕೃಷ್ಣ, ಒಬೆದ್ ಮೆಕಾಯ್ ತಲಾ ಮೂರು ವಿಕೆಟ್ ಪಡೆದರೆ,ಟ್ರೆಂಟ್ ಬೌಲ್ಟ್ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.
158ರನ್ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಜೈಸ್ವಾಲ್ ಹಾಗೂ ಬಟ್ಲರ್ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿತು. ಈ ಜೋಡಿ ಮೊದಲ ವಿಕೆಟ್ನಷ್ಟಕ್ಕೆ ಕೇವಲ 5 ಓವರ್ಗಳಲ್ಲಿ 61ರನ್ಗಳಿಕೆ ಮಾಡಿತು. 21ರನ್ಗಳಿಕೆ ಮಾಡಿದ್ದ ವೇಳೆ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಟ್ಲರ್ ಜೊತೆಯಾದ ಕ್ಯಾಪ್ಟನ್ ಸ್ಯಾಮನ್ಸ್ ಕೂಡ ತಾವು ಎದುರಿಸಿದ 21 ಎಸೆತಗಳಲ್ಲಿ 23ರನ್ಗಳಿಕೆ ಔಟಾದರು.ತದನಂತರ ಬಂದ ಪಡಿಕ್ಕಲ್ 9ರನ್ಗಳಿಸಿ ಹ್ಯಾಜಲ್ವುಡ್ ಓವರ್ನಲ್ಲಿ ಔಟಾದರು.
ಅಬ್ಬರಿಸಿ ಬೊಬ್ಬಿರಿದ ಬಟ್ಲರ್: ಮಹತ್ವದ ಪಂದ್ಯದಲ್ಲಿ ಆರ್ಸಿಬಿ ನೀಡಿದ್ದ 158ರನ್ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಬಟ್ಲರ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಿಂದಲೂ ಅಬ್ಬರಿಸಿದ ಈ ಪ್ಲೇಯರ್ ತಾವು ಎದುರಿಸಿದ 60 ಎಸೆತಗಳಲ್ಲಿ ಅಜೇಯ 106ರನ್ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ತಂಡ 18. 1 ಓವರ್ಗಳಲ್ಲಿ 3 ವಿಕೆಟ್ನಷ್ಟಕ್ಕೆ 161ರನ್ಗಳಿಕೆ ಮಾಡಿ, ಫೈನಲ್ಗೆ ಲಗ್ಗೆ ಹಾಕಿದ್ದು, ಭಾನುವಾರ ಗುಜರಾತ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.
ಆರ್ಸಿಬಿ ಪರ ಹ್ಯಾಜಲ್ವುಡ್ 2 ವಿಕೆಟ್, ಹಸರಂಗ 1 ವಿಕೆಟ್ ಪಡೆದರೆ, ಉಳಿದಂತೆ ಸಿರಾಜ್, ಹರ್ಷಲ್ ಪಟೇಲ್ ಹಾಗೂ ಮ್ಯಾಕ್ಸವೆಲ್ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ.