ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಖನೌ ತಂಡ ಅಗ್ರ ಸ್ಥಾನಕ್ಕೆ ಲಗ್ಗೆ ಹಾಕಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿರುವ ಲಖನೌ 75ರನ್ಗಳಿಂದ ಗೆದ್ದು ಬಿಗಿದೆ.
ಮಹಾರಾಷ್ಟ್ರ ಅಸೋಷಿಯೇಷನ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಆರಂಭಿಕ ಆಘಾತದ ನಡುವೆ ಕೂಡ ನಿಗದಿತ 20 ಓವರ್ಗಳಲ್ಲಿ 7ವಿಕೆಟ್ನಷ್ಟಕ್ಕೆ 176ರನ್ಗಳಿಕೆ ಮಾಡಿತು. ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಲಖನೌ ಮೊದಲ ಓವರ್ನಲ್ಲೇ ಕ್ಯಾಪ್ಟನ್ ರಾಹುಲ್(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒದಾದ ಡಿಕಾಕ್-ಹೂಡಾ ಜೋಡಿ ಎದುರಾಳಿ ಬೌಲರ್ಗಳನ್ನ ದಂಡಿಸಿದರು. ಈ ಮೂಲಕ 70ರನ್ಗಳ ಜೊತೆಯಾಟ ನೀಡಿದರು.
ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಡಿಕಾಕ್ ನರೈನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ 25ರನ್ಗಳಿಕೆ ಮಾಡಿದ್ರೆ, ಬದೌನಿ 15ರನ್, ಸ್ಟೋಯ್ನಿಸ್ 28ರನ್, ಹೂಲ್ಡರ್ 13ರನ್ಗಳಿಕೆ ಮಾಡಿ, ತಂಡ 20 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 176ರನ್ಗಳಿಕೆ ಮಾಡುವಲ್ಲಿ ಸಹಾಯ ಮಾಡಿದ್ರು. ಕೋಲ್ಕತ್ತಾ ಪರ ರಸೆಲ್ 2 ವಿಕೆಟ್ ಪಡೆದರೆ, ಸೌಥಿ, ಶಿವಂ ಮಾವಿ, ನರೈನ್ ತಲಾ 1 ವಿಕೆಟ್ ಪಡೆದರು.
177ರನ್ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡ ಮೊದಲ ಓವರ್ನಲ್ಲೇ ವಿಕೆಟ್ ಕೀಪರ್ ಬಾಬಾ ಇಂದ್ರಜಿತ್(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಮೈದಾನಕ್ಕೆ ಬಂದ ಕ್ಯಾಪ್ಟನ್ ಶ್ರೇಯಸ್ ಕೂಡ ಕೇವಲ 6ರನ್ಗಳಿಸಿ ಔಟಾದರು. ಆರಂಭಿಕ ಆಟಗಾರ ಫಿಂಚ್ ಕೂಡ ಕೇವಲ 14ರನ್ಗಳಿಕೆ ಮಾಡಿ ಹೊಲ್ಡರ್ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಮಧ್ಯಮ ಕ್ರಮಾಂಕದಲ್ಲಿ ಬಂದ ನಿತಿಶ್ ರಾಣಾ 2ರನ್ಗಳಿಸಿ ಆವೇಶ್ ಖಾನ್ಗೆ ಬಲಿಯಾದರೆ, ರಿಂಕು ಸಿಂಗ್ 6ರನ್ಗಳಿಸಿ ಬಿಷ್ಣೋಯ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಅಬ್ಬರಿಸಿದ ರಸೆಲ್- ನರೈನ್ ಜೋಡಿ: ಕೆಕೆಆರ್ ಒಂದಾದ ಹಿಂದೆ ಮತ್ತೊಂದು ವಿಕೆಟ್ ಕಳೆದುಕೊಂಡ್ರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಆಂಡ್ರೊ ರೆಸೆಲ್ 45ರನ್ ಹಾಗೂ ನರೈನ್ 22ರನ್ ತಂಡಕ್ಕೆ ಆಸರೆಯಾದರು. ಆದರೆ, ಇವರ ವಿಕೆಟ್ ಬಿಳುತ್ತಿದ್ದಂತೆ ತಂಡದ ಗೆಲುವಿನ ಆಸೆ ಕಮರಿತು. ತದನಂತರ ಬಂದ ಅಕುಲ್ ರಾಯ್ 0, ಸೌಥಿ 0 ಹಾಗೂ ಹರ್ಷಿತ್ ರಾಣಾ 2ರನ್ಗಳಿಸಿ ಔಟಾದರು. ಕೆಕೆಆರ್ ಕೊನೆಯದಾಗಿ 14.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 101ರನ್ಗಳಿಕೆ ಮಾಡಿ, 75ರನ್ಗಳ ಅಂತರದ ಸೋಲು ಕಂಡಿತು.
ಲಖನೌ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಆವೇಶ್ ಖಾನ್, ಹೊಲ್ಡರ್ ತಲಾ 3 ವಿಕೆಟ್ ಪಡೆದುಕೊಂಡರೆ, ಮೋಸಿನ್ ಖಾನ್, ಚಮೀರಾ ಹಾಗೂ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.