ಕೋಲ್ಕತ್ತಾ: ರಾಜಸ್ಥಾನ ರಾಯಲ್ಸ್ ನೀಡಿದ್ದ 189ರನ್ಗಳ ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್19.3 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 191 ರನ್ಗಳಿಕೆ ಮಾಡಿ, ತಾನು ಸ್ಪರ್ಧೆ ಮಾಡಿರುವ ಚೊಚ್ಚಲ ಆವೃತ್ತಿಯಲ್ಲೇ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ಪಡೆ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 188ರನ್ಗಳಿಕೆ ಮಾಡಿತು.
-
Congratulations to the @gujarat_titans as they march into the Final in their maiden IPL season! 👏 👏
— IndianPremierLeague (@IPL) May 24, 2022 " class="align-text-top noRightClick twitterSection" data="
Stunning performance by @hardikpandya7 & Co to beat #RR by 7⃣ wickets in Qualifier 1 at the Eden Gardens, Kolkata. 🙌 🙌
Scorecard ▶️ https://t.co/O3T1ww9yVk#TATAIPL | #GTvRR pic.twitter.com/yhpj77nobA
">Congratulations to the @gujarat_titans as they march into the Final in their maiden IPL season! 👏 👏
— IndianPremierLeague (@IPL) May 24, 2022
Stunning performance by @hardikpandya7 & Co to beat #RR by 7⃣ wickets in Qualifier 1 at the Eden Gardens, Kolkata. 🙌 🙌
Scorecard ▶️ https://t.co/O3T1ww9yVk#TATAIPL | #GTvRR pic.twitter.com/yhpj77nobACongratulations to the @gujarat_titans as they march into the Final in their maiden IPL season! 👏 👏
— IndianPremierLeague (@IPL) May 24, 2022
Stunning performance by @hardikpandya7 & Co to beat #RR by 7⃣ wickets in Qualifier 1 at the Eden Gardens, Kolkata. 🙌 🙌
Scorecard ▶️ https://t.co/O3T1ww9yVk#TATAIPL | #GTvRR pic.twitter.com/yhpj77nobA
ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಬಟ್ಲರ್(89), ಸ್ಯಾಮ್ಸನ್(47) ಹಾಗೂ ಪಡಿಕ್ಕಲ್(28)ರನ್ಗಳಿಕೆ ಮಾಡಿದರು. ಗುಜರಾತ್ ತಂಡದ ಪರ ಶಮಿ, ದಯಾಲ್, ಸಾಯಿ ಕಿಶೋರ್, ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದುಕೊಂಡರು.
189ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಮೊದಲ ಓವರ್ನಲ್ಲೇ ವೃದ್ಧಿಮಾನ್ ಸಹಾ(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒಂದಾದ ಶುಬ್ಮನ್-ವೇಡ್ ಜೊಡಿ ತಂಡಕ್ಕೆ ಉತ್ತಮ ಬುನಾದಿ ಹಾಕಿತು. ಇವರಿಬ್ಬರ ವಿಕೆಟ್ ಉರುಳುತ್ತಿದ್ದಂತೆ ಪಂದ್ಯ ರೋಚಕಘಟ್ಟಕ್ಕೆ ತಲುಪಿತು. ಈ ವೇಳೆ ಹಾರ್ದಿಕ್ ಪಾಂಡ್ಯ(40), ಡೇವಿಡ್ ಮಿಲ್ಲರ್(68) ಸಿಡಿಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.ಕೊನೆ ಓವರ್ನಲ್ಲಿ ತಂಡಕ್ಕೆ ಗೆಲುವಿಗೆ 16ರನ್ಗಳ ಅವಶ್ಯಕತೆ ಇದ್ದಾಗ ಮಿಲ್ಲರ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ, ತಂಡಕ್ಕೆ ಜಯತಂದಿಟ್ಟರು. ಈ ಮೂಲಕ ಫೈನಲ್ಗೆ ಲಗ್ಗೆ ಹಾಕಿದೆ. ಸೋಲು ಕಂಡಿರುವ ರಾಜಸ್ಥಾನ ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ.
ಗುಜರಾತ್ ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಿಲ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ರಾಜಸ್ಥಾನ ಪರ ಬೌಲ್ಟ್, ಮ್ಯಾಕೆಯ್ ತಲಾ 1 ವಿಕೆಟ್ ಪಡೆದುಕೊಂಡರೆ, ಉಳಿದಂತೆ ಯಾವುದೇ ಬೌಲರ್ ಗಮನಾರ್ಹ ಪ್ರದರ್ಶನ ನೀಡಲಿಲ್ಲ.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ, ಕ್ಯಾಪ್ಟನ್), ದೇವದತ್ ಪಡಿಕ್ಕಲ್, ಆರ್.ಅಶ್ವಿನ್, ಶಿಮ್ರಾನ್ ಹೆಟ್ಮಾಯರ್, ರಿಯಾಗ್ ಪರಾಗ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಲ್, ಒಬ್ಡೆ ಮ್ಯಾಕೆ
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಾಹ(ವಿ.ಕೀ), ಶುಬ್ಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ಕ್ಯಾಪ್ಟನ್), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ಯಶ್ ದಯಾಲ್, ಅಲ್ಜರಿ ಜೋಸೆಫ್, ಮೊಹಮ್ಮದ್ ಶಮಿ
ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಯಾವುದೇ ರೀತಿಯ ಬದಲಾವಣೆ ಮಾಡಿರಲಿಲ್ಲ ಆದರೆ, ಗುಜರಾತ್ ಟೈಟನ್ಸ್ ಮಾತ್ರ ಆಡುವ 11ರ ಬಳಗದಲ್ಲಿ ಕೇವಲ 1 ಬದಲಾವಣೆ ಮಾಡಿದ್ದು, ಲಕಿ ಫರ್ಗ್ಯುಸನ್ ಸ್ಥಾನಕ್ಕೆ ಅಲ್ಜರಿ ಜೋಸೆಫ್ಗೆ ಮಣೆ ಹಾಕಿತ್ತು. ವಿಶೇಷವೆಂದರೆ 15ನೇ ಆವೃತ್ತಿ ಐಪಿಎಲ್ನಲ್ಲಿ ಸಂಜು ಸ್ಯಾಮ್ಸನ್ ಬರೋಬ್ಬರಿ 12 ಸಲ ಟಾಸ್ ಸೋತಿದ್ದು, ಇಂದಿನ ಮಹತ್ವದ ಪಂದ್ಯದಲ್ಲೂ ಟಾಸ್ ಸೋತಿದ್ದಾರೆ.