ETV Bharat / sports

ಗಾಯಕ್ವಾಡ್‌, ಕಾನ್ವಾಯ್ ಅಬ್ಬರಕ್ಕೆ ನಲುಗಿದ ಹೈದರಾಬಾದ್‌; ಧೋನಿ ತಂಡಕ್ಕೆ 13 ರನ್‌ ಗೆಲುವು

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವವನ್ನು ಧೋನಿ ಮರಳಿ ಪಡೆಯುತ್ತಿದ್ದಂತೆ ತಂಡ ಮೊದಲ ಗೆಲುವು ದಾಖಲಿಸಿದೆ. ನಿನ್ನೆ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಫಾರ್ಮ್‌ ಕಳೆದುಕೊಂಡಿದ್ದ ರುತುರಾಜ್‌, ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇವರಿಗೆ ಕಾನ್ವಾಯ್‌ ಅಷ್ಟೇ ಉತ್ತಮವಾಗಿ ಸಾಥ್ ಕೊಟ್ಟರು.

ipl-2022-gaikwad-conway-set-up-csks-13-run-win-over-srh
ಗಾಯಕ್ವಾಡ್‌, ಕಾನ್ವಾಯ್ ಅಬ್ಬರಕ್ಕೆ ನಲುಗಿದ ಹೈದರಾಬಾದ್‌; ಧೋನಿ ತಂಡಕ್ಕೆ 13 ರನ್‌ ಗೆಲುವು
author img

By

Published : May 2, 2022, 6:59 AM IST

ಪುಣೆ: ರುತುರಾಜ್ ಗಾಯಕ್ವಾಡ್ ಹಾಗು ಡೇವನ್ ಕಾನ್ವಾಯ್ ಅವರ ಆಕರ್ಷಕ ಸಿಕ್ಸರ್‌ ಪ್ರದರ್ಶನ ಹಾಗು ಮುಖೇಶ್ ಚೌಧರಿ ನಾಲ್ಕು ವಿಕೆಟ್‌ ಸಾಧನೆಯಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್ ಎದುರು 13 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಭಾನುವಾರ ರಾತ್ರಿ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಗಾಯಕ್ವಾಡ್ 57 ಎಸೆತಗಳಲ್ಲಿ 99 ರನ್‌ ಕಲೆ ಹಾಕಿ ಶತಕದಂಚಿನಲ್ಲಿ ಎಡವಿದರು. ಅಷ್ಟೇ ಸ್ಫೋಟಕವಾಗಿ ಬ್ಯಾಟ್ ಬೀಸಿದ ಡೇವನ್ ಕಾನ್ವಾಯ್ 55 ಎಸೆತಗಳಲ್ಲಿ 85 ರನ್‌ ಚಚ್ಚಿದರು. ಇವರಿಬ್ಬರು ಹೈದರಾಬಾದ್ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ ಆಕರ್ಷಕ 182 ರನ್ ಜೊತೆಯಾಟ ನೀಡಿದರು. ಇದು ಈ ಸೀಸನ್ನಿನಲ್ಲಿ ಅತಿ ದೊಡ್ಡ ಓಪನಿಂಗ್ ಪಾರ್ಟ್ನರ್‌ಶಿಪ್ ಕೂಡಾ ಹೌದು. ಈ ಮೂಲಕ ಸಿಎಸ್‌ಕೆ ತಂಡ 20 ಓವರುಗಳ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 202 ರನ್‌ಗಳ ಬೃಹತ್ ಗುರಿ ನೀಡಿತ್ತು.

ಬಳಿಕ ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 189 ರನ್‌ ಗಳಿಸಲಷ್ಟೇ ಶಕ್ತವಾಯಿತು. ನಿಕೋಲಸ್ ಪೂರನ್‌ ಅಜೇಯ 64 ರನ್ ಗಳಿಸಿ ಅಬ್ಬರಿಸಿದರು. ತಂಡದ ಕ್ಯಾಪ್ಟನ್‌ ವಿಲಿಯಮ್ಸನ್‌ 47 ರನ್‌ ಪೇರಿಸಿದರು. ಇವರ ಹೊರತಾಗಿ ತಂಡದ ಇತರೆ ಆಟಗಾರರು ತಂಡವನ್ನು ಗೆಲುವಿನ ದಡ ಸೇರಿಸಲು ಸೂಕ್ತ ಕೊಡುಗೆ ನೀಡಲಿಲ್ಲ. ಹೀಗಾಗಿ ಹೈದರಾಬಾದ್‌ ಚೆನ್ನೈ ವಿರುದ್ದ 13 ರನ್‌ಗಳ ಸೋಲು ಕಂಡಿದೆ.

ಇದನ್ನೂ ಓದಿ: ದೆಹಲಿ​ ಗೆಲುವಿಗೆ ಮೊಹ್ಸಿನ್​ ಖಾನ್​ ಭಂಗ.. ಕ್ಯಾಪಿಟಲ್ಸ್ ವಿರುದ್ಧ ಸೂಪರ್​ ಜೈಂಟ್ಸ್​ಗೆ 6 ರನ್​ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.