ETV Bharat / sports

ವಾರ್ನರ್​​-ಮಾರ್ಷ್​ ಜೊತೆಯಾಟಕ್ಕೆ ಸೋತ ರಾಜಸ್ಥಾನ.. ಡೆಲ್ಲಿ ಪ್ಲೇ-ಆಫ್​ ಆಸೆ ಇನ್ನೂ ಜೀವಂತ! - ಡೆಲ್ಲಿ ಕ್ಯಾಪಿಟಲ್​ ಗೆಲುವು

ಇಂಡಿಯನ್​ ಪ್ರೀಮಿಯರ್ ಲೀಗ್​ನ 58ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಗೆಲುವು ದಾಖಲು ಮಾಡಿರುವ ಡೆಲ್ಲಿ ಕ್ಯಾಪಿಟಲ್ಸ್​​ ಪ್ಲೇ-ಆಫ್​ ರೇಸ್​​​ನಲ್ಲಿ ಇನ್ನೂ ಜೀವಂತವಾಗಿ ಉಳಿದುಕೊಂಡಿದೆ. 18.1 ಓವರ್​ಗಳಲ್ಲಿ ಕೇವಲ 2 ವಿಕೆಟ್​ ಕಳೆದುಕೊಂಡು ಗೆಲುವಿನ ನಗೆ ಬೀರಿತು.

Mitchell Marsh-Warner
Mitchell Marsh-Warner
author img

By

Published : May 11, 2022, 11:12 PM IST

ಮುಂಬೈ: ಮುಂಬೈನ ಡಿವೈ ಪಾಟೀಲ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಪ್ಲೇ-ಆಫ್​ ಆಸೆ ಜೀವಂತವಾಗಿ ಉಳಿದುಕೊಂಡಿದೆ. ರಾಜಸ್ಥಾನ ರಾಯಲ್ಸ್ ನೀಡಿದ್ದ 161ರನ್​​ಗಳ ಗುರಿ ಬೆನ್ನತ್ತಿದ ತಂಡ 18.1 ಓವರ್​​ಗಳಲ್ಲಿ ಕೇವಲ 2 ವಿಕೆಟ್​ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.

Mitchell Marsh
ಸ್ಪೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ ಮಿಚೆಲ್ ಮಾರ್ಷ್​​

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ರಾಜಸ್ಥಾನ ರಾಯಲ್ಸ್​ ರವಿಚಂದ್ರನ್​ ಅಶ್ವಿನ್​ ಚೊಚ್ಚಲ ಅರ್ಧಶತಕ(50) ಹಾಗೂ ದೇವದತ್ತ ಪಡಿಕ್ಕಲ್​​(48)ರನ್​​ಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್​ನಷ್ಟಕ್ಕೆ 160ರನ್​ಗಳಿಸಿತು.

ಡೆಲ್ಲಿ ತಂಡದ ಪರ ಡೆಲ್ಲಿ ತಂಡದ ಪರ ಚೇತನ್ ಸಕಾರಿಯಾ, ಅನ್ರಿಚ್ ನಾರ್ಟ್ಜೆ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರು.

161ರನ್​​​ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಓವರ್​​ನಲ್ಲೇ ಭರತ್​(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒಂದಾದ ವಾರ್ನರ್​​-ಮಾರ್ಷ್ ಜೋಡಿ ತಂಡಕ್ಕೆ ಜವಾಬ್ದಾರಿಯುತ ಜೊತೆಯಾಟ ನೀಡಿತು. ಕೇವಲ 62 ಎಸೆತಗಳಲ್ಲಿ 7 ಸಿಕ್ಸರ್​, 5 ಬೌಂಡರಿ ಸೇರಿದಂತೆ 89ರನ್​​​ಗಳಿಕೆ ಮಾಡಿದ ಮಿಚೆಲ್ ಮಾರ್ಷ್​ ತಂಡಕ್ಕೆ ಸುಲಭ ಜಯ ತಂದಿಟ್ಟರು. ಇವರಿಗೆ ಉತ್ತಮ ಸಾಥ್ ನೀಡಿದ ವಾರ್ನರ್​​ ಅರ್ಧಶತಕ ಸಿಡಿಸಿ ಮಿಂಚಿದರು. ಡೇವಿಡ್​ ವಾರ್ನರ್​ ಅಜೇಯ 52 ಹಾಗೂ ಪಂತ್​ 4 ಎಸೆತಗಳಲ್ಲಿ 13ರನ್​​ಗಳಿಕೆ ಮಾಡಿದರು.

ರಾಜಸ್ಥಾನ ಪರ ಚಹಲ್ ಹಾಗೂ ಬೌಲ್ಟ್ ತಲಾ 1 ವಿಕೆಟ್ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.