ಮುಂಬೈ : ಪ್ಲೇ ಆಫ್ ಕನಸು ದೂರ ಆಗಿರುವ ಚೆನ್ನೈ ಮತ್ತು ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿರುವ ಗುಜರಾತ್ ನಡುವಿನ ಪಂದ್ಯದಲ್ಲಿ ಚೆನ್ನೈ ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಂಡಿದೆ. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತ್ ಈ ಪಂದ್ಯ ಗೆದ್ದಲ್ಲಿ ಅತೀ ಹೆಚ್ಚು ಅಂಕದೊಂದಿಗೆ ಸ್ಥಾನ ಭದ್ರಪಡಿಸಿಕೊಳ್ಳಲಿದೆ.
ಮುಂಬೈನ ವಾಂಖೆಡೆಯಲ್ಲಿ ಪಂದ್ಯ ಆರಂಭಗೊಂಡಿದೆ. 12 ಪಂದ್ಯಗಳಲ್ಲಿ 8ರಲ್ಲಿ ಸೋತಿರುವ ಚೆನ್ನೈ ಪ್ರತಿಷ್ಠೆಗಾಗಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಚೆನ್ನೈ ತಂಡ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಗುಜರಾತ್ ಲಖನೌ ಎದುರು ಗೆದ್ದಿದ್ದ ತಂಡದೊಂದಿಗೆ ಮುಂದುವರೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಚೆನ್ನೈಗೆ ಶಮಿ ಆರಂಭಿಕ ಆಘಾತ ನೀಡಿದ್ದಾರೆ. ಕಳೆದೆರಡು ಪಂದ್ಯಗಳಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿದ್ದ ಡೆವೊನ್ ಕಾನ್ವೇ ವಿಕೆಟ್(5) ಪತನವಾಗಿದೆ. ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಉತ್ತಮ ಜೊತೆಯಾಟ ನೀಡುವ ನಿರೀಕ್ಷೆ ಇದೆ.
-
🚨 Toss Update 🚨@msdhoni has won the toss & @ChennaiIPL have elected to bat against @gujarat_titans.
— IndianPremierLeague (@IPL) May 15, 2022 " class="align-text-top noRightClick twitterSection" data="
Follow the match ▶️ https://t.co/wRjV4rXBkq #TATAIPL | #CSKvGT pic.twitter.com/onhEfbUUuy
">🚨 Toss Update 🚨@msdhoni has won the toss & @ChennaiIPL have elected to bat against @gujarat_titans.
— IndianPremierLeague (@IPL) May 15, 2022
Follow the match ▶️ https://t.co/wRjV4rXBkq #TATAIPL | #CSKvGT pic.twitter.com/onhEfbUUuy🚨 Toss Update 🚨@msdhoni has won the toss & @ChennaiIPL have elected to bat against @gujarat_titans.
— IndianPremierLeague (@IPL) May 15, 2022
Follow the match ▶️ https://t.co/wRjV4rXBkq #TATAIPL | #CSKvGT pic.twitter.com/onhEfbUUuy
ಚೆನ್ನೈ :ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮೊಯಿನ್ ಅಲಿ, ಶಿವಂ ದುಬೆ, ಎನ್ ಜಗದೀಶನ್, ಎಂಎಸ್ ಧೋನಿ (ನಾಯಕ ಮತ್ತು ವಿಕೇಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಮಥೀಶ ಪತಿರಾನ, ಮುಖೇಶ್ ಚೌಧರಿ
ಗುಜರಾತ್ : ವೃದ್ಧಿಮಾನ್ ಸಹಾ(ವಿಕೇಟ್ ಕೀಪರ್), ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ
ಇದನ್ನೂ ಓದಿ: KKR vs SRH: ರಸೆಲ್ ಸ್ಫೋಟಕ ಆಟ: ಹೈದರಾಬಾದ್ ಗೆಲುವಿಗೆ 178 ರನ್ ಟಾರ್ಗೆಟ್