ಚೆನ್ನೈ: ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ, ಪಂಜಾಬ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಕುಸಿದ ತಂಡಕ್ಕೆ ಆಸರೆಯಾಗಿದ್ದು ನಾಯಕ ರೋಹಿತ್ ಶರ್ಮಾ. ಈ ಪಂದ್ಯದಲ್ಲಿ ರೋಹಿತ್ ಅರ್ಧಶತಕ ಸಿಡಿಸಿ, ತಂಡದ ಮೊತ್ತವನ್ನ ಹೆಚ್ಚಿಸಿದ್ದರು.
ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸಿ ಐಪಿಎಲ್‌ನಲ್ಲಿ 40ನೇ ಅರ್ಧಶತಕ ಸಾಧನೆ ಮಾಡಿದ್ದರು. ಈಗ ಅದರ ಬೆನ್ನಲ್ಲೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಪಂಜಾಬ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ 188 ಪಂದ್ಯಗಳಲ್ಲಿ ಈ ಸಾಧನ ಮಾಡಿದರೆ, ಇತ್ತ ರೋಹಿತ್ ಶರ್ಮಾ ತಮ್ಮ 200ನೇ ಇನ್ನಿಂಗ್ಸ್‌ನಲ್ಲಿ 40 ಅರ್ಧಶತಕಗಳ ಮೈಲಿಗಲ್ಲು ತಲುಪಿದ್ದಾರೆ.
-
FIFTY!👏🏾
— IndianPremierLeague (@IPL) April 23, 2021 " class="align-text-top noRightClick twitterSection" data="
First 5️⃣0️⃣ of the season for Hitman @ImRo45 and he gets it 40 in balls with 4x4, 2x6.https://t.co/NMS54FiJ5o #VIVOIPL #PBKSvMI pic.twitter.com/nGUOMRo82a
">FIFTY!👏🏾
— IndianPremierLeague (@IPL) April 23, 2021
First 5️⃣0️⃣ of the season for Hitman @ImRo45 and he gets it 40 in balls with 4x4, 2x6.https://t.co/NMS54FiJ5o #VIVOIPL #PBKSvMI pic.twitter.com/nGUOMRo82aFIFTY!👏🏾
— IndianPremierLeague (@IPL) April 23, 2021
First 5️⃣0️⃣ of the season for Hitman @ImRo45 and he gets it 40 in balls with 4x4, 2x6.https://t.co/NMS54FiJ5o #VIVOIPL #PBKSvMI pic.twitter.com/nGUOMRo82a
ಒಟ್ಟಾರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿರುವ ದಾಖಲೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ವಾರ್ನರ್ ಒಟ್ಟು 146 ಪಂದ್ಯಗಳಲ್ಲಿ 49 ಅರ್ಧಶತಕ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಶಿಖರ್ ಧವನ್ 159 ಪಂದ್ಯಗಳಲ್ಲಿ 43 ಅರ್ಧಶತಕಗಳಸಿದ್ದಾರೆ.
ಓದಿ : ನಾಯಕತ್ವದ ರಣತಂತ್ರಗಳನ್ನು ಒಬ್ಬರನ್ನೊಬ್ಬರು ಕಾಪಿ ಮಾಡಿದ ರೋಹಿತ್-ಕೊಹ್ಲಿ!
ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರು:
- ಡೇವಿಡ್ ವಾರ್ನರ್ : 146 ಪಂದ್ಯ- 49 ಅರ್ಧಶತಕ
- ಶಿಖರ್ ಧವನ್ : 159 ಪಂದ್ಯ-43 ಅರ್ಧಶತಕ
- ವಿರಾಟ್ ಕೊಹ್ಲಿ : 188 ಪಂದ್ಯ-40 ಅರ್ಧಶತಕ
- ರೋಹಿತ್ ಶರ್ಮಾ: 200 ಪಂದ್ಯ-40 ಅರ್ಧಶತಕ
- ಸುರೇಶ್ ರೈನಾ : 197 ಪಂದ್ಯ-39 ಅರ್ಧಶತಕ
- ಎಬಿ ಡಿ ವಿಲಿಯರ್ಸ್ : 173 ಪಂದ್ಯ-39 ಅರ್ಧಶತಕ