ETV Bharat / sports

ಐಪಿಎಲ್​ 2021: ಕೊನೆಯ ಘಳಿಗೆಯಲ್ಲಿ ಶಹ್ಬಾಜ್​ ಕಮಾಲ್​... ಹೈದರಾಬಾದ್​ ವಿರುದ್ಧ ಆರ್​ಸಿಬಿಗೆ 6 ರನ್​ಗಳ ರೋಚಕ ಜಯ!

author img

By

Published : Apr 14, 2021, 11:11 PM IST

Updated : Apr 14, 2021, 11:50 PM IST

ಐಪಿಎಲ್​ ಆರನೇ ಪಂದ್ಯ ಕೊನೆಯ ಘಳಿಗೆಯಲ್ಲಿ ರೋಚಕ ತಿರುವು ಪಡೆದುಕೊಂಡಿದ್ದು, ಸನ್​ರೈಸರ್ಸ್​ ವಿರುದ್ಧ ಆರ್​ಸಿಬಿಗೆ 6 ರನ್​ಗಳ ಭರ್ಜರಿ ಜಯ ಗಳಿಸಿದೆ.

IPL 2021, IPL 2021 news, RCB won the match, RCB won the match against Hyderabad, ಐಪಿಎಲ್​ 2021, ಐಪಿಎಲ್​ 2021 ಸುದ್ದಿ, ಹೈದರಾಬಾದ್​ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ, ಹೈದರಾಬಾದ್​ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ ಸುದ್ದಿ, ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಜಯ,
ಕೃಪೆ: IPL twitter

ಚೆನ್ನೈ: ಶಹ್ಬಾಜ್​ ಅಹ್ಮದ್​ ಬೌಲಿಂಗ್​ಗೆ ತತ್ತರಿಸಿದ ಸನ್​ರೈಸರ್ಸ್​ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ 6 ರನ್​ಗಳ ಸೋಲು ಕಂಡಿದೆ.

ಆರ್​ಸಿಬಿ ಇನ್ನಿಂಗ್ಸ್​...

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 6ನೇ ಪಂದ್ಯದಲ್ಲಿ ಟಾಸ್​ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಲ್ಲದೆ ಆರಂಭದಲ್ಲೇ ಪಡಿಕ್ಕಲ್​(11) ವಿಕೆಟ್ ಪಡೆಯಲು ಯಶಸ್ವಿಯಾಯಿತು. ನಂತರ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಶಹ್ಬಾಜ್ ಅಹ್ಮದ್​ 10 ಎಸೆತಗಳಲ್ಲಿ 14 ರನ್​ಗಳಿಸಿ ನದೀಮ್​ಗೆ ವಿಕೆಟ್ ಒಪ್ಪಿಸಿದರು. ನಂತರ 3ನೇ ವಿಕೆಟ್​​ಗೆ​ ಒಂದಾದ ಕೊಹ್ಲಿ ಮತ್ತು ಮ್ಯಾಕ್ಸ್​ವೆಲ್​ 44 ರನ್​ ಜೊತೆಯಾಟ ನೀಡಿ ಚೇತರಿಕೆ ನೀಡಿದರು.

ಆದರೆ, ಈ ಹಂತದಲ್ಲಿ ಕಣಕ್ಕಿಳಿದ ಹೋಲ್ಡರ್​, 29 ಎಸೆತಗಳಲ್ಲಿ 33 ರನ್​ಗಳಿಸಿದ್ದ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ವಿಕೆಟ್ ಪಡೆದು ಆರ್​ಸಿಬಿಗೆ ಮರ್ಮಾಘಾತ ನೀಡಿದರು. ನಂತರದ ಓವರ್​ನಲ್ಲೇ ವಿಲಿಯರ್ಸ್​ ಅವರನ್ನು​ 1 ರನ್​ಗೆ ಔಟ್ ಮಾಡುವ ಮೂಲಕ ರಶೀದ್ ಖಾನ್​ ಆರ್​ಸಿಬಿಯ ಬೃಹತ್​ ಮೊತ್ತದ ಕನಸು ನುಚ್ಚುನೂರು ಮಾಡಿದರು.

ವಿಲಿಯರ್ಸ್ ವಿಕೆಟ್ ನಂತರ ಆರ್​ಸಿಬಿ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ 8, ಡೇನಿಯಲ್ ಕ್ರಿಸ್ಚಿಯನ್ 1, ಕೈಲ್ ಜೇಮಿಸನ್ 12 ರನ್​ಗಳಿಸಿ ಔಟಾದರು. ಏಕಾಂಗಿಯಾಗಿ ಹೋರಾಡಿದ ಗ್ಲೇನ್ ಮ್ಯಾಕ್ಸ್​ವೆಲ್ 41 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 5 ಬೌಂಡರಿ ಸೇರಿದಂತೆ 59 ರನ್​ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು. ಒಟ್ಟಾರೆ, 20 ಓವರ್​ಗಳಲ್ಲಿ 8 ವಿಕೆಟ್​ ಕೆಳದುಕೊಂಡ ಬೆಂಗಳೂರು 150 ಗಡಿ ದಾಟಲು ವಿಫಲವಾಯಿತು.

ಸನ್​ರೈಸರ್ಸ್​ ಹೈದರಾಬಾದ್​ ಪರ ಜೇಸನ್ ಹೋಲ್ಡರ್​ 30ಕ್ಕೆ 3, ರಶೀದ್ ಖಾನ್ 18ಕ್ಕೆ 2ಮ ನದೀಮ್​ 36ಕ್ಕೆ 1, ಭುವನೇಶ್ವರ್ ಕುಮಾರ್ 30ಕ್ಕೆ1 ಮತ್ತು ನಟರಾಜನ್​ 32ಕ್ಕೆ 1 ವಿಕೆಟ್ ಪಡೆದು ಆರ್​ಸಿಬಿಯನ್ನು 149ಕ್ಕೆ ಕಟ್ಟಿ ಹಾಕಿದರು.

ಸನ್​ರೈಸರ್ಸ್​ ಹೈದರಾಬಾದ್​ ಇನ್ನಿಂಗ್ಸ್​...

ಆರ್​ಸಿಬಿ ನಿಡಿದ ಟಾರ್ಗೇಟ್​ನ್ನು ಬೆನ್ನತ್ತಿದ್ದ ಹೈದರಾಬಾದ್​ ತಂಡಕ್ಕೆ ಆರ್​ಸಿಬಿ ಆರಂಭಿಕ ಆಘಾತ ನೀಡಿತ್ತು. ವೃದ್ಧಿಮಾನ್​ ಸಹಾ 1 ರನ್​ ಗಳಿಸಿ ಸಿರಾಜ್​ಗೆ ವಿಕೆಟ್​ವೊಪ್ಪಿಸಿ ಪೆವಿಲಿಯನ್​ ಹಾದಿ ಹಿಡಿದರು. ಬಳಿಕ ಬಂದ ಕನ್ನಡಿಗ ಮನೀಷ್​ ಪಾಂಡೆ ಕ್ಯಾಪ್ಟನ್​ ಡೇವಿಡ್​ ವಾರ್ನರ್​ ಜೊತೆಗೂಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಫಲರಾದರು. ಈ ಆಟಗಾರರಿಬ್ಬರು ಸೇರಿ ತಂಡಕ್ಕೆ 83 ರನ್​ಗಳ ಕಾಣಿಕೆ ನೀಡಿದರು. ಏಳು ಬೌಂಡರಿ, ಒಂದು ಸಿಕ್ಸ್​ ನೆರವಿನಿಂದ 57 ರನ್​ಗಳನ್ನು ಗಳಿಸಿದ್ದ ನಾಯಕ ಡೆವಿಡ್​ ವಾರ್ನರ್​ ಕೈಲ್ ಜೇಮಿಸನ್ ಬೌಲಿಂಗ್​ಗೆ ಔಟಾದರು.

ಶಹ್ಬಾಜ್​ ಅಹ್ಮದ್​ ಕಮಾಲ್​...

ವಾರ್ನರ್​ ಔಟಾದ ಬಳಿಕ ಬಂದ ಜಾನಿ ಬೈರ್​ಸ್ಟೋವ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯದೇ 12 ರನ್​ಗಳನ್ನು ಕಲೆ ಹಾಕಿ ಶಹ್ಬಾಜ್​ಗೆ ವಿಕೆಟ್​ ನೀಡಿದರು. ಜಾನಿ ಬೈರ್​ಸ್ಟೋವ್ ಬಳಿಕ 2 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 39 ಎಸೆತಕ್ಕೆ 38 ರನ್​ಗಳನ್ನು ಗಳಿಸಿದ್ದ ಮನೀಷ್​ ಪಾಂಡೆ ಶಹ್ಬಾಜ್​ ಬೌಲಿಂಗ್​ನಲ್ಲಿ ಔಟಾದರು. ಕಳೆದ ಪಂದ್ಯದಲ್ಲಿ ಮಿಂಚಿದ ಅಬ್ದುಲ್ ಸಮದ್​ ಸಹ ಶಹ್ಬಾಜ್​ ಬೌಲಿಂಗ್​ನಲ್ಲಿ ಶೂನ್ಯಕ್ಕೆ ಔಟಾಗಿ ಪೆವಿಲಿಯನ್​ ಹಾದಿ ಹಿಡಿದರು. ಒಂದೇ ಓವರ್​ನಲ್ಲಿ ಮೂರು ವಿಕೆಟ್​ಗಳನ್ನು ಪಡೆದು ಶಹ್ಬಾಜ್​ ಅಹ್ಮದ್​ ಮಿಂಚಿದಲ್ಲದೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖರಾದರು. ​

ಇನ್ನು ಅಬ್ದಲ್​ ಸಮದ್​ ಔಟಾದ ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್​ ಹಾದಿ ಹಿಡಿದರು. ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗಳನ್ನು ಕಳೆದುಕೊಂಡ ಹೈದರಾಬಾದ್​ ತಂಡ ಕೇವಲ 143 ರನ್​​ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಹೈದರಾಬಾದ್​ ತಂಡ ಆರ್​ಸಿಬಿ ವಿರುದ್ಧ 6 ರನ್​ಗಳ ಸೋಲುಂಡಿತು.

ಆರ್​ಸಿಬಿ ತಂಡದ ಪರ ಶಹ್ಬಾಜ್​ ಅಹ್ಮದ್​ ಮೂರು ವಿಕೆಟ್​ಗಳನ್ನು ಪಡೆದು ಮಿಂಚಿದ್ರೆ, ಮೊಹಮ್ಮದ್​ ಸಿರಾಜ್​ ಮತ್ತು ಹರ್ಷಲ್​ ಪಟೇಲ್​ ತಲಾ ಎರಡು ವಿಕೆಟ್​ ಪಡೆದರು. ಇನ್ನು ಕೈಲ್​ ಜೇಮಿಸನ್​ ಒಂದು ವಿಕೆಟ್​ ಪಡೆದು ತಂಡಕ್ಕೆ ಆಸರೆಯಾದರು.

ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ ತಂಡ ಪಾಯಿಂಟ್​ ಟೇಬಲ್​ನಲ್ಲಿ ಅಗ್ರಸ್ಥಾನ ಪಟ್ಟವೇರಿದೆ. ಗುರುವಾರ ಸಂಜೆ 7.30ಕ್ಕೆ ಮುಂಬೈನಲ್ಲಿ ರಾಜಸ್ಥಾನ ವಿರುದ್ಧ ಡೆಲ್ಲಿ ಕಾದಾಟ ನಡೆಸಲಿದೆ.

Last Updated : Apr 14, 2021, 11:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.