ಮುಂಬೈ: ಚೆನ್ನೈನ ಪಿ.ಚಿದಂಬರಂ ಸ್ಟೇಡಿಯಂ ಬಳಿಕ ಮುಂಬೈನ ವಾಂಖೆಡೆಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಓಟ ಮುಂದುವರಿಸಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಸಿಎಸ್‌ಕೆ ತಂಡವನ್ನು ಹಿಂದಿಕ್ಕೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.
ವಿರಾಟ್ ಕೊಹ್ಲಿ 6 ಸಾವಿರ ರನ್‌ಗಳ ಸರದಾರ
ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪಡಿಕ್ಕಲ್ ಜೋಡಿ ವಿಕೆಟ್ ನಷ್ಟವಿಲ್ಲದೆ ಆರ್ ಆರ್ ನೀಡಿದ್ದ 178ರನ್‌ಗಳ ಗುರಿಯನ್ನು 16.3 ಓವರ್‌ಗಳಲ್ಲಿ ತಲುಪಿತು. 47 ಎಸೆತೆಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 72 ರನ್ ಗಳಿಸಿದ್ರು. ಜೊತೆಗೆ ಐಪಿಎಲ್‌ನಲ್ಲಿ 6 ಸಾವಿರ ರನ್ ಗಡಿ ದಾಟಿ ಹೊಸ ದಾಖಲೆ ಬರೆದರು. ಪಡಿಕ್ಕಲ್ 52 ಎಸೆತೆಗಳನ್ನು 11 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳೊಂದಿಗೆ 101 ರನ್‌ಗಳ ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವುವನ್ನು ಸುಲಭಗೊಳಿಸಿದರು.
ಇದನ್ನೂ ಓದಿ: ತೆವಾಟಿಯಾ- ದುಬೆ ಸಾಹಸ: ಆರ್‌ಸಿಬಿಗೆ 178ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದ ರಾಯಲ್ಸ್
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಸಂಜು ಸ್ಯಾಮ್ಸನ್ ಪಡೆ ನಿಗದಿತ 20 ಓವರ್‌ಗಳಿಗೆ 177 ರನ್‌ಗಳಿಸಿತು. ಆರಂಭದಲ್ಲೇ ಆರ್‌ಆರ್‌ಗೆ ಸಿರಾಜ್ ಆಘಾತ ನೀಡಿದ್ರು. ತಂಡದ ಮೊತ್ತ 14 ರನ್ ಆಗುವಷ್ಟರಲ್ಲಿ ಸ್ಫೋಟಕ ಆಟಗಾರ ಜೋಸ್ ಬಟ್ಲರ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದ್ರು. ನಂತರ ವೋಹ್ರಾ ಕೂಡ ಜೇಮಿಸನ್ ಬೌಲಿಂಗ್‌ನಲ್ಲಿ ಕೇನ್ ರಿಚರ್ಡ್‌ಸನ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ರು.
ಶಿವಂ ದುಬೆ ಹಾಗೂ ರಾಹುಲ್ ತೆವಾಟಿಯ ಉತ್ತಮ ರನ್ ಗಳಿಸುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಲು ನೆರವಾದ್ರು. ಶಿವಂ ದುಬೆ 32 ಎಸೆತಗಳಿಂದ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್ ಗಳಿಸಿ ರಿಚರ್ಡ್‌ಸನ್‌ಗೆ ವಿಕೆಟ್ ಒಪ್ಪಿಸಿದ್ರು. ತೆವಾಟಿಯಾ 23 ಎಸೆತಗಳನ್ನು ಎದುರಿಸಿ 4 ಬೌಂಡರಿ, 2 ಸಿಕ್ಸರ್ ಸಹಿತ 40 ರನ್ ಗಳಿಸಿದ್ರು. ಆರ್‌ಸಿಬಿ ಪರ ಮಹಮ್ಮದ್ ಸಿರಾಜ್ ಹಾಗೂ ಹರ್ಷದ್ ಪಟೇಲ್ ತಲಾ 3 ವಿಕೆಟ್ ಪಡೆದರೆ, ಜೇಮಿಸನ್, ರಿಚರ್ಡ್‌ಸನ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಉರುಳಿಸಿದ್ರು.