ETV Bharat / sports

IPLನಲ್ಲಿಂದು ಮುಂಬೈ vs ಹೈದರಾಬಾದ್‌ ಹಣಾಹಣಿ: ವಿಲಿಯಮ್ಸನ್‌ ಬಳಗಕ್ಕೆ ಗೆಲುವು ಅನಿವಾರ್ಯ - ಐಪಿಎಲ್​

ರಾಜಸ್ಥಾನ ವಿರುದ್ಧ ಕೇನ್​ ವಿಲಿಯಮ್ಸನ್​ ಪಡೆ 55 ರನ್​ಗಳ ಹೀನಾಯ ಸೋಲು ಅನುಭವಿಸಿ, ಪಾಯಿಂಟ್​ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈಗ ಹೈದರಾಬಾದ್​ ತಂಡಕ್ಕೆ ಗೆಲುವೊಂದೇ ಮೂಲ ಮಂತ್ರವಾಗಿದ್ದು, ರೋಹಿತ್​​ ಶರ್ಮಾ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೆಣೆಯಲು ಸಜ್ಜಾಗಿದೆ.

ಮುಂಬೈ ಇಂಡಿಯನ್ಸ್​ vs ಸನ್‌ರೈಸರ್ಸ್ ಹೈದರಾಬಾದ್

author img

By

Published : May 4, 2021, 11:25 AM IST

ನವದೆಹಲಿ: ಸತತ ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯಲ್ಲಿದೆ. ಈ ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದು, ಇಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ.

ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್​ ಡೇವಿಡ್​ ವಾರ್ನರ್ ಅವ​​ರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಹೈದರಾಬಾದ್​ ತಂಡ ಆ ಜವಾಬ್ದಾರಿಯನ್ನು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್​ಗೆ ವಹಿಸಿತ್ತು. ಆದರೂ ಕೂಡಾ ತಂಡದ ಅದೃಷ್ಟ ಮಾತ್ರ ಬದಲಾಗಲಿಲ್ಲ.

ಹೈದರಾಬಾದ್​ ತಂಡ ಉತ್ತಮ ಬ್ಯಾಟಿಂಗ್​ ಲೈನ್​ಅಪ್​ ಹೊಂದಿದೆ. ಆದರೆ ಇವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರುತ್ತಿಲ್ಲ. ಜಾನಿ ಬೈಸ್ಟೋ, ಡೇವಿಡ್​ ವಾರ್ನರ್​ ಉತ್ತಮ ಓಪನಿಂಗ್​ ನೀಡುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್ ಸಾಥ್ ನೀಡುತ್ತಿದ್ದಾರೆ. ಆದರೆ ಅಂತಿಮ ಓವರ್​ಗಳಲ್ಲಿ ಯಾವೊಬ್ಬ ಆಟಗಾರ ಕೂಡಾ ಬ್ಯಾಟಿಂಗ್​ನಲ್ಲಿ ಅಬ್ಬರಿಸುತ್ತಿಲ್ಲ. ಇದೇ ತಂಡಕ್ಕೆ ಮೈನಸ್​ ಪಾಯಿಂಟ್​ ಆಗಿದೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ರಶೀದ್ ಖಾನ್ ತಂಡಕ್ಕೆ ಬಲ ತುಂಬಿದ್ದಾರೆ. ಆದರೆ ಉಳಿದವರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ.

ಇನ್ನು ಮುಂಬೈ ತಂಡದ ಕಳೆದ ಪಂದ್ಯವನ್ನು ಗಮನಿಸಿದರೆ ತಂಡ ಉತ್ತಮ ಲಯಕ್ಕೆ ಮರಳಿದೆ ಎನ್ನಬಹುದು. ಆರಂಭಿಕ ಡಿಕಾಕ್ ಫಾರ್ಮ್​ ಕಂಡುಕೊಂಡಿದ್ದಾರೆ. ಬೌಲಿಂಗ್ ವಿಭಾಗವಂತೂ ಟೂರ್ನಿಯಲ್ಲೇ ಬಲಿಷ್ಠವಾಗಿದೆ. ಹಾರ್ದಿಕ್ ಪಾಂಡ್ಯ ಹೊರತುಪಡಿಸಿದರೆ ಉಳಿದೆಲ್ಲಾ ಆಟಗಾರರು ಅತ್ಯುತ್ತಮ ಲಯದಲ್ಲಿದ್ದು, ಇಂದು ಹ್ಯಾಟ್ರಿಕ್​​ ಜಯದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಗೆಲುವಿನ ಹೀರೋ ಆಗಿದ್ದ ಕೀರನ್​ ಪೊಲಾರ್ಡ್​ ಉತ್ತಮ ಫಾರ್ಮ್​ನಲ್ಲಿದ್ದು, ಇಂದಿನ ಪಂದ್ಯದಲ್ಲಿ ಅವರತ್ತ ಎಲ್ಲರ ಗಮನ ನೆಟ್ಟಿದೆ.

ಸನ್‌ ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ:

ಕೇನ್ ವಿಲಿಯಮ್ಸನ್ (ನಾಯಕ), ಜಾನಿ ಬೇಸ್ಟೋ (ವಿ.ಕೀ.), ಡೇವಿಡ್​ ವಾರ್ನರ್, ಮನೀಷ್ ಪಾಂಡೆ, ವಿಜಯಶಂಕರ್, ರಶೀದ್ ಖಾನ್, ಸಂದೀಪ್ ಶರ್ಮಾ, ಖಲೀಲ್ ಅಹಮ್ಮದ್‌, ಸಿದ್ಧಾರ್ಥ್ ಕೌಲ್‌, ಜೆ.ಸುಚಿತ್‌ ಹಾಗು ಕೇದಾರ್ ಜಾಧವ್‌.

ಮುಂಬೈ ಇಂಡಿಯನ್ಸ್​​ ಸಂಭಾವ್ಯ ತಂಡ:

ಕ್ವಿಂಟನ್ ಡಿ ಕಾಕ್ (ವಿ.ಕೀ), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ನಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ ಹಾಗು ಟ್ರೆಂಟ್ ಬೌಲ್ಟ್.

ಪಂದ್ಯ ಸಮಯ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.