ಮುಂಬೈ (ಮಹಾರಾಷ್ಟ್ರ): ಐಪಿಎಲ್ನ 1000ನೇ ಪಂದ್ಯ ಹಾಗೂ ಈ ಋತುವಿನ 42ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಅವರ ಹುಟ್ಟುಹಬ್ಬದಂದು ಅತ್ಯಂತ ವಿಶೇಷವಾದ ಗೆಲುವಿನ ಉಡುಗೊರೆಯನ್ನು ನೀಡಿದ್ದಾರೆ. ಮುಂಬೈ ತಂಡದ ಗೆಲುವಿನ ಹೀರೋ ಆಗಿದ್ದ ಆಸ್ಟ್ರೇಲಿಯಾದ ಆಲ್ ರೌಂಡರ್ ಟಿಮ್ ಡೇವಿಡ್, ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಎಲ್ಲರನ್ನೂ ಬೆರಗಾಗಿಸಿದರು.
ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ 17 ರನ್ ಅವಶ್ಯಕತೆ ಇತ್ತು. ಕೊನೆಯ ಓವರ್ ಜವಾಬ್ದಾರಿಯನ್ನು ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ಅನುಭವಿ ಕೆರಿಬಿಯನ್ ಆಟಗಾರ ಜೇಸನ್ ಹೋಲ್ಡರ್ಗೆ ಕೊಡುತ್ತಾರೆ. 11 ಬಾಲ್ ಎದರಿಸಿ 27 ರನ್ನಿಂದ ಕ್ರೀಸ್ನಲ್ಲಿದ್ದ ಟಿಮ್ ಡೇವಿಡ್ ಕೇವಲ ಮೂರು ಬಾಲ್ನಲ್ಲಿ ಪಂದ್ಯವನ್ನು ಗೆಲ್ಲಿಸುತ್ತಾರೆ. 20 ನೇ ಓವರ್‌ನ ಮೊದಲ ಮೂರು ಬಾಲ್ನ್ನು ಡೇವಿಡ್ ಸಿಕ್ಸ್ಗೆ ಅಟ್ಟಿ 321.42 ಸ್ಟ್ರೈಕ್ ರೇಟ್‌ನಲ್ಲಿ 14 ಎಸೆತಗಳಲ್ಲಿ 45 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್ನಲ್ಲಿ 5 ಸಿಕ್ಸ್ ಮತ್ತು 2 ಬೌಂಡರಿಗಳನ್ನು ಒಳಗೊಂಡಿತ್ತು.
-
Tim David, take a bow 🔥
— JioCinema (@JioCinema) April 30, 2023 " class="align-text-top noRightClick twitterSection" data="
What a way to leave Wankhede and Sachin Tendulkar all smiles 😀#IPL2023 #TATAIPL #MIvRR #IPL1000 | @mipaltan @timdavid8 pic.twitter.com/evvQRJCEFu
">Tim David, take a bow 🔥
— JioCinema (@JioCinema) April 30, 2023
What a way to leave Wankhede and Sachin Tendulkar all smiles 😀#IPL2023 #TATAIPL #MIvRR #IPL1000 | @mipaltan @timdavid8 pic.twitter.com/evvQRJCEFuTim David, take a bow 🔥
— JioCinema (@JioCinema) April 30, 2023
What a way to leave Wankhede and Sachin Tendulkar all smiles 😀#IPL2023 #TATAIPL #MIvRR #IPL1000 | @mipaltan @timdavid8 pic.twitter.com/evvQRJCEFu
ಪಂದ್ಯದ ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಟಿಮ್ ಡೇವಿಡ್ ಬಾರಿಸಿದ ಸಿಕ್ಸರ್ ಚರ್ಚೆಯ ವಿಷಯವಾಗಿದೆ. ವಾಂಖೆಡೆ ಸ್ಟೇಡಿಯಂನ ಡಗೌಟ್‌ನಲ್ಲಿ ಕುಳಿತಿದ್ದ ಸಚಿನ್ ತೆಂಡೂಲ್ಕರ್, ಜೇಸನ್ ಎಸೆತದಲ್ಲಿ ಟಿಮ್ ಡೇವಿಡ್ 84 ಮೀಟರ್ ಎತ್ತರದ ಸಿಕ್ಸರ್ ಬಾರಿಸಿದಾಗ ಸ್ಟೇಡಿಯಂನಲ್ಲಿದ್ದ ಎಲ್ಲರೂ ಸಂತೋಷದಿಂದ ಜಿಗಿದರು. ಡಗೌಟ್‌ನಲ್ಲಿ ಕುಳಿತಿದ್ದ ಸಚಿನ್ ತೆಂಡೂಲ್ಕರ್ ಸಹ ಎದ್ದುನಿಂತು ಅಚ್ಚರಿ ಆಟ ಎಂಬಂತೆ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ.
ಟಿಮ್ ಡೇವಿಡ್ ಕೊನೆಯ ಓವರ್‌ನಲ್ಲಿ ಸತತ 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮುಂಬೈ ಇಂಡಿಯನ್ಸ್ ಗೆಲ್ಲಿಸಿದರೆ, ಸಚಿನ್ ತೆಂಡೂಲ್ಕರ್ ಅವರ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿತು. ಪಂದ್ಯದ ನಂತರ, ಸಚಿನ್ ತೆಂಡೂಲ್ಕರ್ ಟಿಮ್ ಡೇವಿಡ್ ಅವರನ್ನು ಸಂತೋಷದಿಂದ ಅಪ್ಪಿಕೊಂಡರು. ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೆಂಡಿಂಗ್ ಆಗಿದೆ.
-
1️⃣0️⃣0️⃣0️⃣th IPL match. Special Occasion...
— IndianPremierLeague (@IPL) April 30, 2023 " class="align-text-top noRightClick twitterSection" data="
...And it ends with an electrifying finish courtesy Tim David & @mipaltan 💥💥💥
Scorecard ▶️ https://t.co/trgeZNGiRY #IPL1000 | #TATAIPL | #MIvRR pic.twitter.com/qK6V5bqiWV
">1️⃣0️⃣0️⃣0️⃣th IPL match. Special Occasion...
— IndianPremierLeague (@IPL) April 30, 2023
...And it ends with an electrifying finish courtesy Tim David & @mipaltan 💥💥💥
Scorecard ▶️ https://t.co/trgeZNGiRY #IPL1000 | #TATAIPL | #MIvRR pic.twitter.com/qK6V5bqiWV1️⃣0️⃣0️⃣0️⃣th IPL match. Special Occasion...
— IndianPremierLeague (@IPL) April 30, 2023
...And it ends with an electrifying finish courtesy Tim David & @mipaltan 💥💥💥
Scorecard ▶️ https://t.co/trgeZNGiRY #IPL1000 | #TATAIPL | #MIvRR pic.twitter.com/qK6V5bqiWV
2022ರ ಐಪಿಎಲ್ ಹರಾಜಿನಲ್ಲಿ ಟಿಮ್ ಡೇವಿಡ್ ಅವರನ್ನು ಮುಂಬೈ ಫ್ರಾಂಚೈಸಿ 8.25 ಕೋಟಿ ರೂ.ಗೆ ಖರೀದಿಸಿತ್ತು. ಬಲಗೈ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ 6ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕಳೆದ ಪಂದ್ಯದಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಇಡೀ ಆಟಕ್ಕೆ ತಿರುವು ನೀಡಿದರು. ಟಿಮ್ ಡೇವಿಡ್ ಅವರ ಪ್ರದರ್ಶನ ಕ್ರೀಡಾಂಗಣದಲ್ಲಿ ಕುಳಿತಿದ್ದ ಎಲ್ಲಾ ಪ್ರೇಕ್ಷಕರನ್ನು ಹರ್ಷದಲ್ಲಿ ತೇಲಿಸಿತ್ತು.
ರೋಹಿತ್ ಶರ್ಮಾ ಅವರು ಟಿಮ್ ಡೇವಿಡ್ ಅವರನ್ನು ಕೀರಾನ್ ಪೊಲಾರ್ಡ್‌ಗೆ ಹೋಲಿಸಿದರು. 'ಹಿಂದಿನ ಋತುವಿನ ಪ್ರಮುಖ ಆಲ್‌ರೌಂಡರ್ ಆಗಿದ್ದ ಪೊಲಾರ್ಡ್ ಕೂಡ ಡೆತ್ ಓವರ್‌ಗಳ ತಂಡವನ್ನು ಇದೇ ರೀತಿಯಲ್ಲಿ ಗೆಲ್ಲಿಸುತ್ತಿದ್ದರು' ಎಂದು ರೋಹಿತ್ ಶರ್ಮಾ ಪಂದ್ಯದ ನಂತರ ಹೇಳಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದ ಬೃಹತ್ ರನ್ ಚೇಸ್ ಎಂಬ ದಾಖಲೆ ನಿನ್ನೆಯ ಪಂದ್ಯ ಬರೆಯಿತು.
ಇದನ್ನೂ ಓದಿ: IPLನಲ್ಲಿಂದು ಲಕ್ನೋ ವಿರುದ್ಧ 'ಗಂಭೀರ' ಸೇಡಿಗೆ ಸಜ್ಜಾದ RCB; ಪಂದ್ಯಕ್ಕೆ ಮಳೆ ಆತಂಕ