ETV Bharat / sports

IPL ಹರಾಜು: ಸ್ಯಾಮ್‌ ಕರ್ರಾನ್‌ಗೆ ₹18 ಕೋಟಿ ಕೊಟ್ಟ ಪಂಜಾಬ್‌! ಚೆನ್ನೈ ತಂಡಕ್ಕೆ ಬೆನ್‌ ಸ್ಟೋಕ್ಸ್‌ - ಸ್ಯಾಮ್ ಕರ್ರಾನ್

2023ನೇ ಆವೃತ್ತಿಯ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸ್ಯಾಮ್ ಕರ್ರಾನ್ ಮತ್ತು ಕ್ಯಾಮರಾನ್ ಗ್ರೀನ್​ ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ನಿಕೋಲಸ್ ಪೂರನ್ ಅವರನ್ನು 16 ಕೋಟಿ ಕೊಟ್ಟು ಲಖನೌ ಸೂಪರ್ ಜೈಂಟ್ಸ್‌ ತಂಡ ಖರೀದಿಸಿದೆ.

indian-premier-league-auction
ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆ
author img

By

Published : Dec 23, 2022, 3:55 PM IST

Updated : Dec 23, 2022, 4:57 PM IST

ಕೊಚ್ಚಿ (ಕೇರಳ): ಜನಪ್ರಿಯ ಚುಟುಕು ಕ್ರಿಕೆಟ್​ ಟೂರ್ನಿ ಐಪಿಎಲ್​ ಆಟಗಾರರ ಹರಾಜು ಪ್ರಕ್ರಿಯೆ ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದೆ. 10 ತಂಡಗಳಿಗೆ 405 ಆಟಗಾರರು ಹರಾಜಾಗಲಿದ್ದಾರೆ. ಸ್ಯಾಮ್ ಕರ್ರಾನ್ ಅವರನ್ನು ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿ 18.50 ಕೋಟಿ ರೂ ಕೊಟ್ಟು ಖರೀದಿಸಿದೆ. ಕ್ಯಾಮರಾನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್​​ 17.5 ಕೋಟಿ ರೂ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಬೆನ್‌ ಸ್ಟೋಕ್ಸ್‌ 16.25 ಕೋಟಿ ರೂಗೆ ಚೆನ್ನೈ ಕಿಂಗ್ಸ್ ತಂಡ ಸೇರಿದ್ದಾರೆ.

  • ಹ್ಯಾರಿ ಬ್ರೂಕ್ ಅವರನ್ನು ಸನ್​ ರೈಸರ್ಸ್​ ಹೈದರಾಬಾದ್​ ತಂಡ 13.25 ಕೋಟಿ ರೂ.ಗೆ ಖರೀದಿ ಮಾಡಿದೆ.
  • ಮಯಾಂಕ್​ ಅಗರ್ವಾಲ್​ ಅವರನ್ನೂ ಸನ್​ ರೈಸರ್ಸ್​ ಹೈದರಾಬಾದ್​ ತಂಡ 8.25 ಕೋಟಿ ರೂ ಕೊಟ್ಟು ಖರೀದಿಸಿದೆ.
  • ಅಜಿಂಕ್ಯ ರಹಾನೆ ಅವರ 50 ಲಕ್ಷ ರೂಪಾಯಿ ಮೂಲ ಬೆಲೆಯಲ್ಲೇ ಚೆನ್ನೈ ತಂಡ ಖರೀದಿಸಿದೆ.
  • ಬೆನ್ ಸ್ಟೋಕ್ಸ್ ಈ ಬಾರಿಯೂ ಕೂಡ ದುಬಾರಿ ಬೆಲೆಗೆ ಮಾರಾಟವಾಗಿದ್ದು, 16.25 ಕೋಟಿ ರೂಪಾಯಿಗೆ ಚೆನ್ನೈ ತಂಡದ ಪಾಲಾಗಿದ್ದಾರೆ.
  • ಜೇಸನ್ ಹೋಲ್ಡರ್ ರಾಜಸ್ಥಾನ್ ರಾಯಲ್ಸ್‌ ತಂಡದ ಪಾಲಾಗಿದ್ದು, 5.75 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ.
  • ಕೆರಿಬಿಯನ್ ವಿಕೆಟ್ ಕೀಪರ್, ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು 16 ಕೋಟಿ ಕೊಟ್ಟು ಲಖನೌ ಸೂಪರ್ ಜೈಂಟ್ಸ್‌ ತಂಡ ಖರೀದಿಸಿದೆ.
  • ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್‌ ತಂಡ 5.25 ಕೋಟಿಗೆ ಖರೀದಿ ಮಾಡಿದೆ.
  • ಇಂಗ್ಲೆಂಡ್​ನ ಲೆಗ್ ಸ್ಪಿನ್ನರ್ ಆದಿಲ್ ರಶೀದ್ 2 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್​ ತಂಡದ ಪಾಲಾಗಿದ್ದಾರೆ.
  • ಇಶಾಂತ್​ ಶರ್ಮಾ ತಮ್ಮ 50 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ದೆಹಲಿ ತಂಡಕ್ಕೆ ಮಾರಾಟವಾಗಿದ್ದಾರೆ.
  • ಆಸ್ಟ್ರೇಲಿಯಾದ ಝೈ ರಿಚರ್ಡ್ಸನ್ ಅವರನ್ನು 1.5 ಕೋಟಿಗೆ ಮುಂಬೈ ತಂಡ ಖರೀದಿ ಮಾಡಿದೆ.
  • ಜಯದೇವ್ ಉನಾದ್ಕತ್ 50 ಲಕ್ಷಕ್ಕೆ ಲಖನೌ ಸೂಪರ್ ಜೈಂಟ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ.
  • ಇಂಗ್ಲೆಂಡ್​ನ ರೀಸ್ ಟೋಪ್ಲಿ ಅವರನ್ನು 1.9 ಕೋಟಿಗೆ ಆರ್​ಸಿಬಿ ತಂಡ ಖರೀದಿ ಮಾಡಿದೆ.

ಇದನ್ನೂ ಓದಿ: ₹18.5 ಕೋಟಿ! ಐಪಿಎಲ್​ ಟೂರ್ನಿ ಇತಿಹಾಸದಲ್ಲೇ ಅತಿ ದುಬಾರಿ ಆಟಗಾರ ಸ್ಯಾಮ್ ಕರ್ರಾನ್!

Last Updated : Dec 23, 2022, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.