ಹೈದರಾಬಾದ್: ಆಸ್ಟ್ರೇಲಿಯಾ, ರಾಯಲ್ ಚಾಲೆಂಜರ್ಸ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ತಮಿಳುನಾಡಿನ ವಿನಿ ರಾಮನ್ ಅವರನ್ನು ಕೈ ಹಿಡಿದಿದ್ದು ಗೊತ್ತೇ ಇದೆ. ಇದೀಗ ಮ್ಯಾಕ್ಸಿ- ವಿನಿ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹವಾಗಿದ್ದಾರೆ. ಈ ಕುರಿತ ಫೋಟೋಗಳನ್ನು ವಿನಿ ರಾಮನ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟಿ-20 ಸ್ಪೆಷಲಿಸ್ಟ್ ಬ್ಯಾಟ್ಸಮನ್ ಗ್ಲೆನ್ ಮ್ಯಾಕ್ಸ್ವೆಲ್ ಮಾರ್ಚ್ 18 ರಂದು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಇದೀಗ ಮತ್ತೊಮ್ಮೆ ತಮಿಳು ಸಂಪ್ರದಾಯದಂತೆ ವಿನಿ ರಾಮನ್ ಅವರನ್ನು ವರಿಸಿದ್ದಾರೆ.
-
From Maxwell's wedding 💙❤️
— RO45 ☀️ (@Pikachu__264) March 28, 2022 " class="align-text-top noRightClick twitterSection" data="
Congratulations to this beautiful couple 💃💗 pic.twitter.com/z6vIEuiwja
">From Maxwell's wedding 💙❤️
— RO45 ☀️ (@Pikachu__264) March 28, 2022
Congratulations to this beautiful couple 💃💗 pic.twitter.com/z6vIEuiwjaFrom Maxwell's wedding 💙❤️
— RO45 ☀️ (@Pikachu__264) March 28, 2022
Congratulations to this beautiful couple 💃💗 pic.twitter.com/z6vIEuiwja
ಹಿಂದೂ ಸಂಪ್ರದಾಯದ ಉಡುಗೆಯಲ್ಲಿ ಮ್ಯಾಕ್ಸಿ ಮಿಂಚುತ್ತಿದ್ದು, ಈ ಕುರಿತ ಫೋಟೋಗಳನ್ನು ವಿನಿ ರಾಮನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇವರ ಮದುವೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಶೀಘ್ರವೇ ಆರ್ಸಿಬಿ ಸೇರಲಿರುವ ಮ್ಯಾಕ್ಸಿ: ಇನ್ನು ಆರ್ಸಿಬಿ ತಂಡದ ಪ್ರಮುಖ ಬ್ಯಾಟ್ಸಮನ್ ಆಗಿ ಗುರುತಿಸಿಕೊಂಡಿರುವ ಮ್ಯಾಕ್ಸ್ವೆಲ್ ತಮ್ಮ ವಿವಾಹದ ಹಿನ್ನೆಲೆ ತಂಡದ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದಾರೆ.
-
To answer all the million comments and tweets asking us “When is Maxwell arriving?” 😎
— Royal Challengers Bangalore (@RCBTweets) April 1, 2022 " class="align-text-top noRightClick twitterSection" data="
Extremely excited to have you here, @Gmaxi_32! Let the show begin! 🤩#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/wB41EOJNP9
">To answer all the million comments and tweets asking us “When is Maxwell arriving?” 😎
— Royal Challengers Bangalore (@RCBTweets) April 1, 2022
Extremely excited to have you here, @Gmaxi_32! Let the show begin! 🤩#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/wB41EOJNP9To answer all the million comments and tweets asking us “When is Maxwell arriving?” 😎
— Royal Challengers Bangalore (@RCBTweets) April 1, 2022
Extremely excited to have you here, @Gmaxi_32! Let the show begin! 🤩#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/wB41EOJNP9
ಆರ್ಸಿಬಿ ಅಭಿಮಾನಿಗಳು ಮ್ಯಾಕ್ಸ್ವೆಲ್ ತಂಡ ಸೇರ್ಪಡೆ ಯಾವಾಗ ಎಂದು ಅಭಿಮಾನಿಗಳು ಕೇಳಿರುವ ಪ್ರಶ್ನೆಯನ್ನು ತಂಡ ತನ್ನ ಅಧಿಕೃತ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. ಅಲ್ಲದೇ ಮಾಹಿತಿ ಪ್ರಕಾರ ಮ್ಯಾಕ್ಸ್ವೆಲ್ ಇನ್ನೂ ಮೂರು ದಿನಗಳು ಕ್ವಾರಂಟೈನ್ನಲ್ಲಿ ಇರಲಿದ್ದು, ರಾಜಸ್ತಾನ ರಾಯಲ್ಸ್ ತಂಡ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
ಓದಿ: ಮೊದಲ ಎಸೆತದಲ್ಲೇ ಸಿಕ್ಸರ್! ಎಬಿಡಿ ದಾಖಲೆ ಸರಿಗಟ್ಟಿದ ಧೋನಿ; IPLನಲ್ಲಿ 7 ಸಾವಿರ ರನ್ ಸರದಾರ