ETV Bharat / sports

ಇಂಪ್ಯಾಕ್ಟ್​ ಆಟಗಾರನ ನಿಯಮ 200ಕ್ಕೂ ಹೆಚ್ಚಿನ ರನ್​ ಗಳಿಕೆಗೆ ಕಾರಣ: ಅನಿಲ್​ ಕುಂಬ್ಳೆ - ETV Bharath Kannada news

ಇಂಪ್ಯಾಕ್ಟ್​ ಆಟಗಾರನ ಕಾರಣ ತಂಡಗಳು 200 + ರನ್​ ಕಲೆಹಾಕುತ್ತಿವೆ ಎಂದು ಅನಿಲ್​​ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Anil Kumble
ಅನಿಲ್​ ಕುಂಬ್ಳೆ
author img

By

Published : Apr 29, 2023, 10:14 PM IST

ಈ ಬಾರಿಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ 38 ಪಂದ್ಯಗಳು ನಡೆದಿದ್ದು, ಅದರಲ್ಲಿ 20 ಮ್ಯಾಚ್​ಗಳಲ್ಲಿ 200ಕ್ಕೂ ಅಧಿಕ ಸ್ಕೋರ್‌ಗಳು ದಾಖಲಾಗಿವೆ. ಇದು ಈ ಋತುವಿನಲ್ಲಿ 200 ಪ್ಲಸ್ ಸ್ಕೋರ್‌ಗಳ ಹೊಸ ದಾಖಲೆಯಾಗಿದೆ. 2022 ರಲ್ಲಿ ಅಂತಹ 18 ಪಂದ್ಯಗಳಲ್ಲಿ 200+ಸ್ಕೋರ್‌ಗಳ ದಾಖಲಾಗಿದ್ದವು. ಐಪಿಎಲ್ 2023 ರಲ್ಲಿ 8.91, 2018 ರಲ್ಲಿ 8.64 ಮತ್ತು 2022 ರಲ್ಲಿ 8.54 ರನ್​ ರೇಟ್​ನಲ್ಲಿ ಪಂದ್ಯಗಳು ನಡೆದಿವೆ.

200 ಪ್ಲಸ್ ಸ್ಕೋರ್ ಮತ್ತು ರನ್ ರೇಟ್ ಏರಿಕೆ ಹಿಂದಿನ ಕಾರಣವೇನು?: ಭಾರತದ ಲೆಜೆಂಡ್ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಪ್ರಭಾವಿ ಆಟಗಾರ (ಇಂಪ್ಯಾಕ್ಟ್​ ಪ್ಲೇಯರ್​) ಕಾರಣದಿಂದ ಎಂಬ ಅಭಿಪ್ರಾಯ ಹೇಳಿದ್ದಾರೆ. ಇಂಪ್ಯಾಕ್ಟ್​ ಪ್ಲೇಯರ್​ ನಿಯಮವನ್ನೂ ತಂಡಗಳು ಇನ್ನೂ ಅರ್ಥ ಮಾಡಿಕೊಳ್ಳುತ್ತಿವೆ ಅಷ್ಟೇ. ಆದರೆ ಈ ಬಾರಿಯ ಐಪಿಎಲ್​ನಲ್ಲಿ 200 ಪ್ಲಸ್​ ರನ್​ ಬರಲು ಹೆಚ್ಚುವರಿ ಆಟಗಾರ ತಂಡಕ್ಕೆ ಸೇರುವುದೇ ಕಾರಣ ಎಂದಿದ್ದಾರೆ.

"ಮೊದಲು ಒಂದು ತಂಡದಲ್ಲಿ ಒಬ್ಬ ಆಲ್​ರೌಂಡರ್​ ಮಾತ್ರ ಇರುತ್ತಿದ್ದರು. ಆದರೆ ಪ್ರಭಾವಿ ಆಟಗಾರನ ಅವಕಾಶ ಹೆಚ್ಚುವರಿ ಆಲ್​ರೌಂಡರ್​ ತಂಡಕ್ಕೆ ಸೇರುವ ಅವಕಾಶವನ್ನು ಮಾಡಿಕೊಡುತ್ತಿದೆ. ನನ್ನ ದೃಷ್ಟಿಯಲ್ಲಿ ಜನರು ಇನ್ನೂ ಇಂಪ್ಯಾಕ್ಟ್​ ನಿಯಮವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಮತ್ತು ಆಡುವ ಹನ್ನೊಂದನ್ನು ಆಯ್ಕೆ ಮಾಡುವ ಮೊದಲು ಇಂಪ್ಯಾಕ್ಟ್ ಆಟಗಾರನ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ. ಕೆಲವು ತಂಡಗಳು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಚೆನ್ನಾಗಿ ಬಳಸಲು ಕಲಿತಿವೆ. ಆದರೆ ಈ ಋತುವಿನಲ್ಲಿ 200ಕ್ಕೂ ಹೆಚ್ಚು ಸ್ಕೋರ್‌ಗಳು ಇಂಪ್ಯಾಕ್ಟ್​ ಆಟಗಾರನ ನಿಯಮದಿಂದ ಆಗಿದೆ" ಎಂದಿದ್ದಾರೆ.

ಇದನ್ನೂ ಓದಿ: ಧೋನಿಯಿಂದ ರನ್​ ಔಟ್​ ಆದ ಧ್ರುವ್: 20 ವರ್ಷಗಳ ನಂತರವೂ ಇದನ್ನು ನೆನೆಯುತ್ತೇನೆ ಎಂದ ಜುರೆಲ್

ಪ್ರಭಾವಿ ಆಟಗಾರರ ನಿಯಮವು ಈ ಋತುವಿನಲ್ಲಿ ರನ್‌ಗಳಲ್ಲಿ ಹೆಚ್ಚಳಕ್ಕೆ ಕಾರಣವಾಯಿತು. ಸ್ಪಿನ್ನರ್‌ಗಳಿಗೂ ಪ್ರಯೋಜನವನ್ನು ತಂದಿದೆ. ಐಪಿಎಲ್ 2023 ರಲ್ಲಿ ಇಲ್ಲಿಯವರೆಗೆ ಸ್ಪಿನ್ನರ್‌ಗಳು 192 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಒಂದು ಸೀಸನ್​ನ ಗರಿಷ್ಠ ವಿಕೆಟ್​ ಆಗಿದೆ. ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಹಲವಾರು ಸಂದರ್ಭಗಳಲ್ಲಿ ಇಬ್ಬರು ಲೆಗ್ ಸ್ಪಿನ್ನರ್‌ಗಳನ್ನು ಒಟ್ಟಿಗೆ ಬಳಸಿಕೊಂಡಿವೆ. ಕೋಲ್ಕತ್ತಾ ತಮ್ಮ ಬೌಲಿಂಗ್ ಇನ್ನಿಂಗ್ಸ್‌ನಲ್ಲಿ ಸುಯಾಶ್ ಶರ್ಮಾ ಅವರನ್ನು ಪ್ರಭಾವದ ಬದಲಿಯಾಗಿ ಬಳಸಿದರೆ, ಲಕ್ನೋ ಮತ್ತು ರಾಜಸ್ಥಾನಗಳು ಅಮಿತ್ ಮಿಶ್ರಾ ಮತ್ತು ಆಡಮ್ ಝಂಪಾ ಅವರನ್ನು ಬಳಸಿಕೊಂಡಿವೆ.

"ಆರ್​ಸಿಬಿಯಲ್ಲಿ ಕರ್ಣ್ ಶರ್ಮಾ ಅವರ ಪ್ರಭಾವದ ಆಟಗಾರಾಗಿದ್ದರು. ಆದರೆ ಫಾಫ್​ ಡು ಪ್ಲೆಸಿಸ್ ಅನಾರೋಗ್ಯದ ಕಾರಣ ಹೊರಗುಳಿದಿದ್ದರಿಂದ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಇತ್ತೀಚಿನ ಪಂದ್ಯಗಳಲ್ಲಿ ಬರುತ್ತಿದ್ದಾರೆ. ಲೆಗ್-ಸ್ಪಿನ್ನರ್ ಕರಣ್​ ಶರ್ಮಾ ಇಂಪ್ಯಾಕ್ಟ್​ ಆಟಗಾರನಾಗಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ" ಎಂದು ಕುಂಬ್ಳೆ ಹೇಳಿದ್ದಾರೆ.

ಇದನ್ನೂ ಓದಿ: DC vs SRH: ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ ಅರ್ಧಶತಕ: ಡೆಲ್ಲಿಗೆ 198 ರನ್​ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.