ETV Bharat / sports

ಎರಡು ದೊಡ್ಡ ಕನಸುಗಳ ಸಮ್ಮಿಲನ.. ಕರುನಾಡ ಹೆಮ್ಮೆ ಆರ್‌ಸಿಬಿ-ಹೊಂಬಾಳೆ ಜುಗಲ್‌ಬಂದಿ ಜಬರ್ದಸ್ತ್‌! - ನಮ್ಮ ಹೊಂಬಾಳೆಯು RCB ತಂಡದೊಂದಿಗೆ ಒಟ್ಟಿಗೆ ಕೆಲಸ ಮಾಡಲು ಹೆಮ್ಮೆ ಮತ್ತು ಉತ್ಸುಕವಾಗಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೊಂಬಾಳೆ ಫಿಲ್ಮ್ಸ್​ ಜಂಟಿಯಾಗಿ ದೇಶವೇ ತಿರುಗಿ ನೋಡುವಂತೆ ಮನರಂಜನೆ ನೀಡಲು ಸಜ್ಜಾಗಿವೆ. ಈ ಬಗ್ಗೆ ಇಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ..

hombale
hombale
author img

By

Published : Apr 10, 2022, 11:52 AM IST

Updated : Apr 10, 2022, 12:12 PM IST

'ಕೆಜಿಎಫ್' ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಮತ್ತು ಆರ್​ಸಿಬಿ ತಂಡಕ್ಕೆ ಅಭಿಮಾನಿಗಳ ಕ್ರೇಜ್ ಬಹಳ ದೊಡ್ಡದಿದೆ. ಆರ್​ಸಿಬಿ ಮತ್ತು ಹೊಂಬಾಳೆ ಸಂಸ್ಥೆ ಕನ್ನಡದ ಹೆಮ್ಮೆ ಅಂತಾನೇ ಅಭಿಮಾನಿಗಳು ಕೊಂಡಾಡುತ್ತಾರೆ. ಈ ಮಧ್ಯೆ ಈ ಎರಡೂ ತಂಡಗಳು ಇದೀಗ ಒಟ್ಟಿಗೆ ಸೇರಿ ಮನರಂಜನೆ ನೀಡಲು ಮುಂದಾಗಿವೆ. ಈ ಬಗ್ಗೆ ಹೊಂಬಾಳೆ ಸಂಸ್ಥೆ ಮತ್ತು ಆರ್​ಸಿಬಿ ಅಧಿಕೃತವಾಗಿ ಟ್ವೀಟ್ ಮಾಡಿ ಘೋಷಿಸಿವೆ.

ಈ ಕುರಿತು ಟ್ವೀಟ್ ಮಾಡಿರುವ ಹೊಂಬಾಳೆ​ ಫಿಲ್ಮ್ಸ್, 'ಎರಡು ದೊಡ್ಡ ಕನಸುಗಳ ಸಮ್ಮಿಲನ. ನಮ್ಮ ಹೊಂಬಾಳೆಯು RCB ತಂಡದೊಂದಿಗೆ ಒಟ್ಟಿಗೆ ಕೆಲಸ ಮಾಡಲು ಹೆಮ್ಮೆ ಮತ್ತು ಉತ್ಸುಕವಾಗಿದೆ. ನಾವಿಬ್ಬರು ಒಟ್ಟಿಗೆ ಸೇರಿ ಮನರಂಜನೆಯ ಹೊಸ ಯುಗವನ್ನು ಪ್ರಾರಂಭಿಸುತ್ತೇವೆ ' ಎಂದು ಬರೆದುಕೊಂಡಿದೆ.

ಇನ್ನು ಆರ್​ಸಿಬಿ ಕೂಡ ಅಧಿಕೃತವಾಗಿ ಘೋಷಿಸಿಕೊಂಡಿದ್ದು, 'ಎರಡು ಐಕಾನ್‌ಗಳ ಸಂಗಮವಾಗಿದೆ. ಬೆಂಗಳೂರಿನಲ್ಲಿ ಜನಿಸಿ ಇಡೀ ರಾಷ್ಟ್ರವನ್ನೇ ರೋಮಾಂಚನಗೊಳಿಸುತ್ತೇವೆ. ಮುಂಬರು ದಿನಗಳಲ್ಲಿ ಆರ್​ಸಿಬಿ ಮತ್ತು ಹೊಂಬಾಳೆ ಜಂಟಿಯಾಗಿ ಕ್ರೀಡೆ, ಚಲನಚಿತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.

Last Updated : Apr 10, 2022, 12:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.