ETV Bharat / sports

ಪರ್ಪಲ್ ಕ್ಯಾಪ್​ ಜೊತೆ ಮೊದಲ ಸ್ಥಾನ ಉಳಿಸಿಕೊಂಡ ಹರ್ಷಲ್ ಪಟೇಲ್ - ಚೆನ್ನೈ ಸೂಪರ್​ ಕಿಂಗ್ಸ್​

ನಿನ್ನೆಯ ಪಂದ್ಯದಲ್ಲಿ ಹರ್ಷಲ್ ತುಸು ದುಬಾರಿ ಬೌಲರ್ ಎನಿಸಿದರೂ ಮೂರು ಪ್ರಮುಖ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 4 ಓವರ್ ಬೌಲಿಂಗ್ ಮಾಡಿದ್ದ ಹರ್ಷಲ್​ 47 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

harshal Patel
ಹರ್ಷಲ್ ಪಟೇಲ್
author img

By

Published : Apr 23, 2021, 5:39 PM IST

ಮುಂಬೈ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಟ್ರಂಪ್ ಕಾರ್ಡ್ ಬೌಲರ್ ಹರ್ಷಲ್ ಪಟೇಲ್ ನಿನ್ನೆ ನಡೆದ ರಾಜಸ್ಥಾನ ತಂಡದ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಮೊದಲ ಸ್ಥಾನ ಉಳಿಸಿಕೊಂಡಿದ್ದಲ್ಲದೇ ಪರ್ಪಲ್ ಕ್ಯಾಪ್​​ ಸಹ ಹರ್ಷಲ್ ಬಳಿ ಉಳಿದಿದೆ.

ನಿನ್ನೆಯ ಪಂದ್ಯದಲ್ಲಿ ಹರ್ಷಲ್ ತುಸು ದುಬಾರಿ ಬೌಲರ್ ಎನಿಸಿದರೂ ಮೂರು ಪ್ರಮುಖ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 4 ಓವರ್ ಬೌಲಿಂಗ್ ಮಾಡಿದ್ದ ಹರ್ಷಲ್​ 47 ರನ್ ನೀಡಿ 3 ವಿಕೆಟ್ ಕಬಳಿಸಿದ್ದು, ಇದೀಗ ಟೂರ್ನಿಯಲ್ಲಿ ಒಟ್ಟು 12 ವಿಕೆಟ್ ಪಡೆದಿರುವ ಹರ್ಷಲ್ ಪರ್ಪಲ್ ಕ್ಯಾಪ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ಇತ್ತ ಹರ್ಷಲ್​ಗೆ ಟಫ್​ ಕಾಂಪಿಟೇಟರ್​ ಆಗಿ ಚೆನ್ನೈ ಸೂಪರ್​ ಕಿಂಗ್ಸ್​ನ ದೀಪಕ್ ಚಾಹರ್ 2ನೇ ಸ್ಥಾನಪಡೆದಿದ್ದು, ಒಟ್ಟು 4 ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ಅವೇಶ್ ಖಾನ್ 8 ವಿಕೆಟ್ ಪಡೆದು ಸ್ಪರ್ಧೆಯಲ್ಲಿದ್ದರೆ, 8 ವಿಕೆಟ್ ಪಡೆದ ಮುಂಬೈನ ರಾಹುಲ್ ಚಾಹರ್ 4ನೇ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.